AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಾಯಿ ಅಥವಾ ಪರ್ವತ, ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಈ ಫೋಟೋ ನೋಡಿ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ

Optical illusion personality test: ಇಲ್ಲೊಂದು ಆಪ್ಟಿಕಲ್‌ ಇಲ್ಯೂಷನ್‌ ಫೋಟೋ ವೈರಲ್‌ ಆಗಿದ್ದು, ಆ ಚಿತ್ರವನ್ನು ಕಂಡಾಕ್ಷಣ ಅದರಲ್ಲಿ ನಿಮಗೆ ಮೊದಲು ಏನು ಕಾಣಿಸುತ್ತದೆ ಎಂಬ ಆಧಾರದಲ್ಲಿ ನೀವು ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಈ ಚಿತ್ರದಲ್ಲಿ ನಾಯಿ ಅಥವಾ ಪರ್ವತ ಎರಡರಲ್ಲಿ ಯಾವುದು ಮೊದಲು ಕಾಣಿಸಿತು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.

Personality Test: ನಾಯಿ ಅಥವಾ ಪರ್ವತ, ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಈ ಫೋಟೋ ನೋಡಿ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 09, 2024 | 5:45 PM

Share

ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಕುತೂಹಲಕಾರಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದರೆ ಕೆಲವೊಂದು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತವೆ. ಇದೀಗ ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಮೊದಲು ಏನು ಕಾಣುತ್ತೋ ಅದರ ಆಧಾರದಲ್ಲಿ ನಿಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ನಡವಳಿಕೆಯ ಆಧಾರದಲ್ಲಿ ವ್ಯಕ್ತಿಯ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಅಳೆಯಲಾಗುತ್ತದೆ. ಜೊತೆಗೆ ದೇಹದ ಅಂಗಗಳಾದ ಕಣ್ಣು, ಕಿವಿ, ಮೂಗು, ಕೈ ಬೆರಳು, ಕಾಲ್ಬೆರಳುಗಳ ಆಕಾರದಿಂದಲೂ ನಮ್ಮ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ಕೆಲವೊಂದು ಆಪ್ಟಿಕಲ್‌ ಇಲ್ಯೂಷನ್‌ ಫೋಟೋಗಳು ಕೂಡಾ ನಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಸುತ್ತದೆ. ಇದೀಗ ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಫೋಟೋವೊಂದು ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ನಾಯಿ ಅಥವಾ ಹಿಮ ಪರ್ವತ ನಿಮಗೆ ಮೊದಲು ಏನು ಕಾಣಿಸಿತು ಎಂಬ ಆಧಾರದಲ್ಲಿ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ.

ಚಿತ್ರದಲ್ಲಿ ಮೊದಲು ಪರ್ವತ ಕಾಣಿಸಿಕೊಂಡಿದ್ದರೆ: ನೀವು ಈ ಚಿತ್ರದಲ್ಲಿ ಮೊದಲು ಪರ್ವತವನ್ನೇನಾದರೂ ಕಂಡರೆ ನೀವು ತುಂಬಾ ಸ್ನೇಹಪರ ಮತ್ತು ಕರುಣಾಳು ಸ್ವಭಾವದ ವ್ಯಕ್ತಿ ಎಂದರ್ಥ. ನೀವು ಸಣ್ಣ ಸಣ್ಣ ವಿಷಯಗಳಿಗೆಲ್ಲ ಜಗಳವಾಡಲು ಇಷ್ಟಪಡುವುದಿಲ್ಲ ಜೊತೆಗೆ ನೀವು ಇತರರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ತುಂಬಾ ದಯೆಯ ಸ್ವಭಾವವನ್ನು ಹೊಂದಿರುವ ನೀವು ನಿಮ್ಮವರಿಗಾಗಿ ಹಾಗೂ ನಿಮ್ಮವರ ಸಂತೋಷಕ್ಕಾಗಿ ಸಾಕಷ್ಟು ಶ್ರಮ ವಹಿಸುವವರಾಗಿರುತ್ತೀರಿ.

ಚಿತ್ರದಲ್ಲಿ ಮೊದಲು ನಾಯಿ ಕಾಣಿಸಿಕೊಂಡಿದ್ದರೆ: ನೀವೇನಾದರೂ ಮೊದಲು ನಾಯಿಯ ಚಿತ್ರವನ್ನು ಕಂಡರೆ ನೀವು ಭಾವನಾತ್ಮಕವಾಗಿ ತುಂಬಾ ದುರ್ಬಲವಾಗಿರುವ ವ್ಯಕ್ತಿಯಾಗಿರುತ್ತೀರಿ. ಹಾಗೂ ನೀವು ಹೆಚ್ಚಾಗಿ ಆತಂಕ ಮತ್ತು ಅಸುರಕ್ಷತೆಯನ್ನು ಅನುಭವಿಸುವವರಾಗಿರುತ್ತೀರಿ. ಅಷ್ಟೇ ಅಲ್ಲದೆ ನೀವು ನಿಮ್ಮ ಸುತ್ತಮುತ್ತ ಏನೇ ನಡೆದರೂ ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ ಅಸಡ್ಡೆ ತೋರುವವರಾಗಿರುತ್ತೀರಿ.

ನಾಯಿ ಅಥವಾ ಪರ್ವತ ಈ ಚಿತ್ರದಲ್ಲಿ ಮೊದಲು ಯಾವುದು ಕಂಡರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ನೋಡಿದ್ರೆ ಅಲ್ವಾ. ಈಗ ಈ ಚಿತ್ರವನ್ನು ನೋಡಿ ಇದರಲ್ಲಿ ಮೊದಲು ಏನು ಕಾಣಿಸುತ್ತದೆ ಎಂಬುದನ್ನು ಪರಿಶೀಲಿಸಿ ನಿಮ್ಮ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ