Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹರಿಯಾಣದ ಗೆಲುವು ದೇಶಾದ್ಯಂತ ಪ್ರತಿಧ್ವನಿಸಲಿದೆ’; ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು

ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹರಿಯಾಣದಲ್ಲಿ ಬಿಜೆಪಿಯ ಗೆಲುವು ಪಕ್ಷದ ಕಾರ್ಯಕರ್ತರ ಪರಿಶ್ರಮದ ಫಲಿತಾಂಶವಾಗಿದೆ ಎಂದು ಹೇಳಿದರು.

'ಹರಿಯಾಣದ ಗೆಲುವು ದೇಶಾದ್ಯಂತ ಪ್ರತಿಧ್ವನಿಸಲಿದೆ'; ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು
ಪ್ರಧಾನಿ ಮೋದಿ
Follow us
ಸುಷ್ಮಾ ಚಕ್ರೆ
|

Updated on: Oct 08, 2024 | 10:11 PM

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ರಾಜಕೀಯದ ಗೆಲುವು ಎಂದು ಅವರು ಶ್ಲಾಘಿಸಿದರು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಹರಿಯಾಣದ ಜನರು ಅದ್ಭುತ ಫಲಿತಾಂಶವನ್ನು ನೀಡಿದ್ದಾರೆ ಎಂದಿದ್ದಾರೆ.

ಇಂದು ನವರಾತ್ರಿಯ ಆರನೇ ದಿನ. ಮಾತಾ ಕಾತ್ಯಾಯನಿಯ ದಿನ. ಮಾತಾ ಕಾತ್ಯಾಯನಿ ಕೈಯಲ್ಲಿ ಕಮಲ ಹಿಡಿದು ಸಿಂಹದ ಮೇಲೆ ಕುಳಿತಿದ್ದಾಳೆ. ಅವಳು ನಮ್ಮೆಲ್ಲರನ್ನು ಆಶೀರ್ವದಿಸುತ್ತಿದ್ದಾಳೆ. ಇಂತಹ ಪವಿತ್ರ ದಿನದಂದು ಹರಿಯಾಣದಲ್ಲಿ ಮೂರನೇ ಬಾರಿಗೆ ಕಮಲ ಅರಳಿದೆ. ಹರಿಯಾಣದಲ್ಲಿ ಕೇಸರಿ ಪಕ್ಷದ ಗೆಲುವು “ದೇಶದಾದ್ಯಂತ ಪ್ರತಿಧ್ವನಿಸಲಿದೆ” ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಕಸಿತ ಭಾರತದ ಗುರಿ ಸಾಕಾರಗೊಳ್ಳುವವರೆಗೂ ವಿಶ್ರಮಿಸುವುದಿಲ್ಲ; 23 ವರ್ಷಗಳ ಪಯಣ ನೆನಪಿಸಿಕೊಂಡ ಪ್ರಧಾನಿ ಮೋದಿ

ಹರಿಯಾಣದ ಜನತೆ ಇಂದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಹರಿಯಾಣವು 1966ರಲ್ಲಿ ರಚನೆಯಾಯಿತು. ಇಷ್ಟು ವರ್ಷಗಳಲ್ಲಿ ಅನೇಕ ಪ್ರಮುಖ ನಾಯಕರು ಹರಿಯಾಣ ರಾಜ್ಯವನ್ನು ಮುನ್ನಡೆಸಿದ್ದಾರೆ. ಭಾರತದಲ್ಲಿ ಕೆಲವೇ ಕೆಲವು ರಾಜ್ಯ ನಾಯಕರು ಇಡೀ ದೇಶದಾದ್ಯಂತ ಹೆಸರುವಾಸಿಯಾಗಿದ್ದಾರೆ. ಇಡೀ ರಾಷ್ಟ್ರವು ಹರಿಯಾಣದ ಉನ್ನತ ನಾಯಕರನ್ನು ತಿಳಿದಿರುವ ಸಮಯವೊಂದಿತ್ತು ಎಂದು ಮೋದಿ ಹೇಳಿದರು.

“ಹರಿಯಾಣ 13 ಚುನಾವಣೆಗಳನ್ನು ಕಂಡಿದೆ. ಅವುಗಳಲ್ಲಿ 10 ಬಾರಿ ಸರ್ಕಾರ ಬದಲಾಯಿತು. ಆದರೆ ಈ ಬಾರಿ, ಹರಿಯಾಣದ ಜನರು ಮಾಡಿರುವುದು ಅಭೂತಪೂರ್ವವಾದ ಕೆಲಸವಾಗಿದೆ. ಮೊದಲ ಬಾರಿಗೆ, 2 ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಲಾಗಿದೆ. ಮೂರನೇ ಬಾರಿಗೆ ಹರಿಯಾಣದ ಜನರು ಬಿಜೆಪಿಗೆ ಅವಕಾಶ ನೀಡಿದ್ದು, ಈ ಜನಾದೇಶ ದೇಶಾದ್ಯಂತ ಪ್ರತಿಧ್ವನಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸ್ಪಷ್ಟ ಬಹುಮತ ನೀಡಿದ ಜನರಿಗೆ ಸೆಲ್ಯೂಟ್; ಹರಿಯಾಣದಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಪ್ರಧಾನಿ ಮೋದಿ ಸಂತಸ

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಭಾರತದ ಆರ್ಥಿಕತೆ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ರಚನೆಯನ್ನು ದುರ್ಬಲಗೊಳಿಸಲು ಜಾಗತಿಕ ಪಿತೂರಿಗಳನ್ನು ರೂಪಿಸಲಾಗುತ್ತಿದೆ. ಈ ಪ್ರಯತ್ನದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭಾಗಿಯಾಗಿವೆ ಎಂದು ಆರೋಪಿಸಿದರು. ಚುನಾವಣಾ ಆಯೋಗ, ಪೊಲೀಸ್, ನ್ಯಾಯಾಂಗ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮೋದಿ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ