Aadhaar Card Update: ಆಧಾರ್ ಕಾರ್ಡ್ ಅಪ್​ಡೇಟ್ ಗಡುವು ವಿಸ್ತರಣೆ; ನೀವು ತಿಳಿಯಲೇಬೇಕಾದ ವಿಷಯಗಳಿವು

UIDAI ಉಚಿತ ಆಧಾರ್ ನವೀಕರಣಗಳಿಗಾಗಿ ಗಡುವನ್ನು ಡಿಸೆಂಬರ್ 14ರವರೆಗೆ ವಿಸ್ತರಿಸಿದೆ. ಸಾರ್ವಜನಿಕರು ತಮ್ಮ ಜನಸಂಖ್ಯಾ ವಿವರಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಜನರು ತಿಳಿದಿರಲೇಬೇಕಾದ ಕೆಲವು ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.

Aadhaar Card Update: ಆಧಾರ್ ಕಾರ್ಡ್ ಅಪ್​ಡೇಟ್ ಗಡುವು ವಿಸ್ತರಣೆ; ನೀವು ತಿಳಿಯಲೇಬೇಕಾದ ವಿಷಯಗಳಿವು
ಆಧಾರ್
Follow us
ಸುಷ್ಮಾ ಚಕ್ರೆ
|

Updated on:Oct 17, 2024 | 6:59 PM

ನವದೆಹಲಿ: ಆಧಾರ್‌ನ ಆಡಳಿತ ಮಂಡಳಿಯಾಗಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಹೊಂದಿರುವವರ ನವೀಕರಣದ ಗಡುವನ್ನು ಮತ್ತೆ ವಿಸ್ತರಿಸಿದೆ. ನೀವು ಇದೀಗ ನಿಮ್ಮ ಆಧಾರ್ ವಿವರಗಳನ್ನು ಡಿಸೆಂಬರ್ 14ರವರೆಗೆ ಉಚಿತವಾಗಿ ಅಪ್‌ಡೇಟ್ ಮಾಡಬಹುದು. ಜೂನ್ ತಿಂಗಳಲ್ಲಿ ಆದ ವಿಸ್ತರಣೆಯ ಬಳಿಕ ಇದು ಎರಡನೇ ವಿಸ್ತರಣೆಯಾಗಿದೆ.

ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸುವ ಪ್ರಕ್ರಿಯೆಯು UIDAIನ ಆನ್‌ಲೈನ್ ಪೋರ್ಟಲ್ ಮೂಲಕ ಮಾತ್ರ ಲಭ್ಯವಿದೆ. ಆದರೆ, ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಉಚಿತ ಆಯ್ಕೆಯು ಲಭ್ಯವಿಲ್ಲ. ಬಯೋಮೆಟ್ರಿಕ್ಸ್ ಅನ್ನು ನವೀಕರಿಸಲು ನೀವು ಆಧಾರ್ ಕೇಂದ್ರಗಳಿಗೆ ಭೇಟಿ ನೀಡಬೇಕು ಮತ್ತು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಧಾರ್ ವಿವರಗಳನ್ನು ನವೀಕರಿಸುವುದು ಏಕೆ ಮುಖ್ಯ?:

ಆಧಾರ್, ಭಾರತ ಸರ್ಕಾರವು ನೀಡಿದ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಭಾರತೀಯ ನಾಗರಿಕರು ತಮ್ಮ ಆಧಾರ್ ಅನ್ನು ಸರ್ಕಾರಿ ಯೋಜನೆಗಳಲ್ಲಿ ನೋಂದಾಯಿಸುವುದು ಮತ್ತು ಪ್ರಯಾಣ ಟಿಕೆಟ್‌ಗಳನ್ನು ಕಾಯ್ದಿರಿಸಲು, ಬ್ಯಾಂಕ್ ಖಾತೆಗಳನ್ನು ತೆರೆಯಲು ತೆರಿಗೆಗಳನ್ನು ಸಲ್ಲಿಸುವುದು ಸೇರಿದಂತೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ಪ್ರವೇಶಿಸಲು ಬಳಸಬಹುದು.

ಇದನ್ನೂ ಓದಿ: ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಅವಕಾಶ ಸೆ. 14ಕ್ಕೆ ಕೊನೆ; ಇನ್ನು 2-3 ದಿನ ಮಾತ್ರವೇ ಬಾಕಿ

ನಿಮ್ಮ ಆಧಾರ್ ವಿವರಗಳು ಹಳೆಯದಾಗಿದ್ದರೆ ಅಥವಾ ತಪ್ಪಾಗಿದ್ದರೆ ಆಧಾರ್ ದೃಢೀಕರಣದ ಅಗತ್ಯವಿರುವ ಸೇವೆಗಳನ್ನು ಪಡೆಯುವಲ್ಲಿ ನೀವು ಸವಾಲುಗಳನ್ನು ಎದುರಿಸಬಹುದು. ಆಧಾರ್ ಸಂಬಂಧಿತ ವಂಚನೆಯ ಹೆಚ್ಚುತ್ತಿರುವ ಅಪಾಯವನ್ನು ಸರ್ಕಾರವು ಎತ್ತಿ ತೋರಿಸಿದೆ. ನಿಯಮಿತ ನವೀಕರಣಗಳ ಮೂಲಕ, ಸರ್ಕಾರವು ನಿಖರವಾದ ಮತ್ತು ಸುರಕ್ಷಿತ ಡೇಟಾಬೇಸ್ ಅನ್ನು ನಿರ್ವಹಿಸಬಹುದು. ಇದು ಆಧಾರ್ ದುರುಪಯೋಗದ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಯಾರು ತಮ್ಮ ಆಧಾರ್ ಅನ್ನು ನವೀಕರಿಸಬೇಕು?:

ಪ್ರತಿ ಆಧಾರ್ ಹೊಂದಿರುವವರು ನಿಯಮಿತ ನವೀಕರಣಗಳಿಂದ ಪ್ರಯೋಜನ ಪಡೆಯಬಹುದಾದರೂ ಕೆಲವು ಜನರು ನವೀಕರಣಕ್ಕೆ ಆದ್ಯತೆ ನೀಡಬೇಕು.

10 ವರ್ಷಗಳ ಹಿಂದೆ ನೀಡಲಾದ ಆಧಾರ್:

ನಿಮ್ಮ ಆಧಾರ್ ಅನ್ನು ರಚಿಸಿ ಒಂದು ದಶಕಕ್ಕೂ ಹೆಚ್ಚು ಸಮಯ ಕಳೆದಿದ್ದರೆ, ಆಧಾರ್ ವಿವರಗಳನ್ನು ನವೀಕರಿಸಲು ಹೆಚ್ಚು ಶಿಫಾರಸು ಮಾಡಲಾಗಿದೆ.

15 ವರ್ಷ ತುಂಬಿದ ಮಕ್ಕಳು:

ಚಿಕ್ಕವರಿದ್ದಾಗ ಆಧಾರ್ ಅನ್ನು ರಚಿಸಿದ ಮಕ್ಕಳು 15 ವರ್ಷ ತುಂಬಿದ ನಂತರ ಅವರ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕಾಗುತ್ತದೆ. ಗುರುತಿನ ಉದ್ದೇಶಗಳಿಗಾಗಿ ಅವರ ಬಯೋಮೆಟ್ರಿಕ್‌ಗಳು ಮಾನ್ಯವಾಗಿರುತ್ತವೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಬಯೋಮೆಟ್ರಿಕ್ ಬದಲಾವಣೆಗಳು:

ಅಪಘಾತ, ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಸ್ಥಿತಿಯು ಫಿಂಗರ್‌ಪ್ರಿಂಟ್‌ಗಳು ಅಥವಾ ಐರಿಸ್ ಸ್ಕ್ಯಾನ್‌ಗಳಂತಹ ನಿಮ್ಮ ಬಯೋಮೆಟ್ರಿಕ್ ಡೇಟಾದ ಮೇಲೆ ಪರಿಣಾಮ ಬೀರಿದ್ದರೆ ಆ ಬದಲಾವಣೆಗಳಿಗಾಗಿ ನಿಮ್ಮ ಆಧಾರ್ ಅನ್ನು ನೀವು ನವೀಕರಿಸಬೇಕು.

ದೃಢೀಕರಣ ವೈಫಲ್ಯಗಳು:

ನೀವು ಆಧಾರ್ ದೃಢೀಕರಣ ವೈಫಲ್ಯಗಳನ್ನು ಅನುಭವಿಸಿದ್ದರೆ ಹಣಕಾಸು ವಹಿವಾಟಿನ ಸಮಯದಲ್ಲಿ ಅಥವಾ ಸರ್ಕಾರಿ ಯೋಜನೆಗಳನ್ನು ಪ್ರವೇಶಿಸುವಾಗ ಪುನರಾವರ್ತಿತ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ವಿವರಗಳನ್ನು ಪರಿಶೀಲಿಸುವುದು ಮತ್ತು ನವೀಕರಿಸುವುದು ಬಹಳ ಮುಖ್ಯ.

ಇದನ್ನೂ ಓದಿ: Tech Tips: ಮರಣದ ನಂತರ ಆಧಾರ್ ಕಾರ್ಡ್‌ ಏನಾಗುತ್ತದೆ?: ಈ ವಿಚಾರ ನಿಮಗೆ ತಿಳಿದಿರಲೇಬೇಕು

ಆನ್‌ಲೈನ್‌ನಲ್ಲಿ ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸುವುದು ಹೇಗೆ?:

– UIDAI ಪೋರ್ಟಲ್‌ಗೆ ಭೇಟಿ ನೀಡಿ. myaadhaar.uidai.gov.inಗೆ ಭೇಟಿ ನೀಡುವ ಮೂಲಕ ಆಧಾರ್ ಸ್ವ ಸೇವಾ ಅಪ್‌ಡೇಟ್ ಪೋರ್ಟಲ್‌ಗೆ ಹೋಗಿ.

– ಆಧಾರ್ ಮತ್ತು OTPಯೊಂದಿಗೆ ಲಾಗಿನ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒನ್-ಟೈಮ್ ಪಾಸ್‌ವರ್ಡ್ (OTP) ಬಳಸಿ.

-ನಿಮ್ಮ ವಿವರಗಳನ್ನು ಪರಿಶೀಲಿಸಿ. ನಿಮ್ಮ ಆಧಾರ್ ಪ್ರೊಫೈಲ್‌ನಲ್ಲಿ ತೋರಿಸಿರುವ ಜನಸಂಖ್ಯಾ ಮಾಹಿತಿಯನ್ನು (ಹೆಸರು, ವಿಳಾಸ, ಇತ್ಯಾದಿ) ಪರಿಶೀಲಿಸಿ. ಯಾವುದೇ ವಿವರಗಳು ಹಳೆಯದಾಗಿದ್ದರೆ ಅಥವಾ ತಪ್ಪಾಗಿದ್ದರೆ ನವೀಕರಣ ಮಾಡಿ.

-ನಿಮ್ಮ ವಿವರಗಳನ್ನು ನವೀಕರಿಸಲು ಸಂಬಂಧಿತ ಡಾಕ್ಯುಮೆಂಟ್ ಪ್ರಕಾರವನ್ನು ಆಯ್ಕೆ ಮಾಡಿ (ಗುರುತಿನ ಪುರಾವೆ ಅಥವಾ ವಿಳಾಸದ ಪುರಾವೆ) ಮತ್ತು JPEG, PNG, ಅಥವಾ PDF ಫಾರ್ಮ್ಯಾಟ್‌ನಲ್ಲಿ ಸ್ಕ್ಯಾನ್ ಮಾಡಿದ ನಕಲನ್ನು ಅಪ್‌ಲೋಡ್ ಮಾಡಿ. ಗರಿಷ್ಠ ಗಾತ್ರ: 2 MB.

-ಒಮ್ಮೆ ನೀವು ನಿಮ್ಮ ವಿನಂತಿಯನ್ನು ಸಲ್ಲಿಸಿದ ನಂತರ ನೀವು ಸೇವಾ ವಿನಂತಿ ಸಂಖ್ಯೆಯನ್ನು (SRN) ಸ್ವೀಕರಿಸುತ್ತೀರಿ. ಇದು ನಿಮ್ಮ ನವೀಕರಣದ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನಿಮಗೆ ಅನುಮತಿಸುತ್ತದೆ.

-ಬಯೋಮೆಟ್ರಿಕ್ ನವೀಕರಣಗಳನ್ನು ನೆನಪಿನಲ್ಲಿಡಿ. ಜನಸಂಖ್ಯಾ ನವೀಕರಣಗಳನ್ನು ಆನ್‌ಲೈನ್‌ನಲ್ಲಿ ಮಾಡಬಹುದಾದರೂ ಫಿಂಗರ್‌ಪ್ರಿಂಟ್‌ಗಳು, ಐರಿಸ್ ಸ್ಕ್ಯಾನ್‌ಗಳು ಅಥವಾ ಫೋಟೋಗಳಂತಹ ಬಯೋಮೆಟ್ರಿಕ್ ಮಾಹಿತಿಗೆ ಬದಲಾವಣೆಗಳನ್ನು ಅಧಿಕೃತ ಆಧಾರ್ ಕೇಂದ್ರದಲ್ಲಿ ಮಾತ್ರ ಮಾಡಬಹುದಾಗಿದೆ. ಅವುಗಳಿಗೆ ಶುಲ್ಕದ ಅಗತ್ಯವಿರುತ್ತದೆ. ವಯಸ್ಸಾದಂತೆ ತಮ್ಮ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕಾದ ಮಕ್ಕಳಿಗೆ ಇದು ವಿಶೇಷವಾಗಿ ಮುಖ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Thu, 17 October 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ