Tech Tips: ಮರಣದ ನಂತರ ಆಧಾರ್ ಕಾರ್ಡ್‌ ಏನಾಗುತ್ತದೆ?: ಈ ವಿಚಾರ ನಿಮಗೆ ತಿಳಿದಿರಲೇಬೇಕು

ಆಧಾರ್ ಕಾರ್ಡ್ ಅನ್ನು ಸರೆಂಡರ್ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. ಆದರೆ ಅದನ್ನು ಲಾಕ್ ಮಾಡಬಹುದು. ಲಾಕ್ ಮಾಡಿದ ನಂತರ, ಇನ್ನೊಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್‌ನ ಡೇಟಾವನ್ನು ಪ್ರವೇಶಿಸಲಾಗುವುದಿಲ್ಲ. ಹಾಗಾದರೆ ಆಧಾರ್ ಲಾಕ್ ಮಾಡುವುದು ಹೇಗೆ?.

Tech Tips: ಮರಣದ ನಂತರ ಆಧಾರ್ ಕಾರ್ಡ್‌ ಏನಾಗುತ್ತದೆ?: ಈ ವಿಚಾರ ನಿಮಗೆ ತಿಳಿದಿರಲೇಬೇಕು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 02, 2024 | 12:32 PM

ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಪ್ರತಿ ಸರ್ಕಾರಿ ಮತ್ತು ಖಾಸಗಿ ಕೆಲಸಗಳಿಗೆ ಆಧಾರ್ ಪ್ರಮುಖ ದಾಖಲೆಯಾಗಿದೆ. ಆಧಾರ್ ಒಂದು ಅನನ್ಯ 12 ಅಂಕಿಯ ಸಂಖ್ಯೆಯಾಗಿದೆ. ಇದು ನಿಮ್ಮ ಹೆಸರು, ವಿಳಾಸ ಮತ್ತು ಫಿಂಗರ್‌ಪ್ರಿಂಟ್‌ನಂತಹ ವಿವರಗಳನ್ನು ಒಳಗೊಂಡಿರುತ್ತದೆ. ಆಧಾರ್ ಕಾರ್ಡ್ ಇಲ್ಲದೆ ನೀವು ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಗ್ಯಾಸ್ ಸಂಪರ್ಕದಿಂದ ಹಿಡಿದು ಇತರ ಅನೇಕ ಸಬ್ಸಿಡಿಗಳನ್ನು ಪಡೆಯಲು ಆಧಾರ್ ಅನ್ನು ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಶಾಲಾ ಪ್ರವೇಶ ಪಡೆಯುವವರೆಗೆ ಆಧಾರ್ ಕಾರ್ಡ್ ಬೇಕು. ಆದರೆ, ಒಬ್ಬ ವ್ಯಕ್ತಿ ಮರಣ ಹೊಂದಿದರೆ ಅವರ ಆಧಾರ್ ಕಾರ್ಡ್ ಏನಾಗುತ್ತದೆ ಗೊತ್ತಾ?.

UIDAI ಪ್ರತಿ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಅನ್ನು ಒದಗಿಸುತ್ತದೆ. ಹುಟ್ಟಿದ ಮಗುವಿಗೂ ಆಧಾರ್ ಕಾರ್ಡ್ ರಚಿಸಬಹುದು. UIDAI ಆಧಾರ್ ಕಾರ್ಡ್ ನೀಡಲು ವ್ಯವಸ್ಥೆ ಮಾಡಿದೆ. ಆದರೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್ ರದ್ದು ಅಥವಾ ಆಧಾರ್ ಕಾರ್ಡ್ ಸರೆಂಡರ್ ಮಾಡಲು ಯಾವುದೇ ಅವಕಾಶವಿಲ್ಲ. ಹಾಗಾಗಿ ಇದರ ದುರುಪಯೋಗದ ಭೀತಿ ಸದಾ ಕಾಡುತ್ತಿದೆ. ಸಾಮಾನ್ಯವಾಗಿ ವ್ಯಕ್ತಿಯ ಮರಣದ ನಂತರವೂ ಕೆಲವರು ಅವರ ಆಧಾರ್​ನಿಂದ ಅನುದಾನ, ರೇಷನ್ ಅನ್ನು ಪಡೆಯುತ್ತಾರೆ.

ಪರಿಹಾರವೇನು?

ಆಧಾರ್ ಕಾರ್ಡ್ ಅನ್ನು ಸರೆಂಡರ್ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. ಆದರೆ ಅದನ್ನು ಲಾಕ್ ಮಾಡಬಹುದು. ಲಾಕ್ ಮಾಡಿದ ನಂತರ, ಇನ್ನೊಬ್ಬ ವ್ಯಕ್ತಿಗೆ ಆಧಾರ್ ಕಾರ್ಡ್‌ನ ಡೇಟಾವನ್ನು ಪ್ರವೇಶಿಸಲಾಗುವುದಿಲ್ಲ. ಮುಂದೆ ಬೇಕು ಎಂದಾದರೆ ಆಧಾರ್ ಕಾರ್ಡ್ ಅನ್ ಲಾಕ್ ಮಾಡಬೇಕು. ಹಾಗಾಗಿ ಕುಟುಂಬದ ಸದಸ್ಯರು ಮೃತಪಟ್ಟರೆ ಆಧಾರ್ ಕಾರ್ಡ್ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ.

ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?:

ಮೊದಲು UIDAI uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಈಗ ಮೈ ಆಧಾರ್ ಸೇವೆಗಳಿಗೆ ಹೋಗಿ. ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್ ಆಯ್ಕೆಯನ್ನು ಆರಿಸಿ

ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಲಾಗಿನ್ ಆಗಲು 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.

ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಈಗ Send OTP ಮೇಲೆ ಕ್ಲಿಕ್ ಮಾಡಿ.

OTP ಅನ್ನು ನಮೂದಿಸಿದ ನಂತರ ನೀವು ಬಯೋಮೆಟ್ರಿಕ್ ಡೇಟಾವನ್ನು ಲಾಕ್/ಅನ್ಲಾಕ್ ಮಾಡುವ ಆಯ್ಕೆಯನ್ನು ನೋಡುತ್ತೀರಿ. ಅದನ್ನು ಆಯ್ಕೆ ಮಾಡಿದರೆ ಆಯಿತು.

ಇದನ್ನೂ ಓದಿ: ಶುರುವಾಗುತ್ತಿದೆ ಚಳಿಗಾಲ, 5 ಸಾವಿರಕ್ಕಿಂತ ಕಡಿಮೆ ಬೆಲೆಯ ಉತ್ತಮ ಗೀಸರ್ ಇಲ್ಲಿದೆ ನೋಡಿ

ಆಧಾರ್ ಕಾರ್ಡ್ ದುರ್ಬಳಕೆಯಾಗುತ್ತಿದೆಯೇ?

ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಹಗರಣಗಳ ಘಟನೆಗಳು ಇತ್ತೀಚೆಗೆ ಹೆಚ್ಚು ಬೆಳಕಿಗೆ ಬರುತ್ತವೆ. ಪ್ರತಿದಿನ ಡುಪ್ಲಿಕೇಟ್ ಆಧಾರ್ ಕಾರ್ಡ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡುವ ವಂಚನೆಯೂ ನಡೆಯುತ್ತಿದೆ.

ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಧಾರ್ ಕಾರ್ಡ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬೇಕು.

ಇದಕ್ಕಾಗಿ ಮೊದಲಿಗೆ ನೀವು ಆಧಾರ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್ uidai.gov.in ಗೆ ಹೋಗಬೇಕು.

ಇದರ ನಂತರ ನೀವು ಆಧಾರ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು.

ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ

ನಂತರ ‘ದೃಢೀಕರಣ ಇತಿಹಾಸ’ ಆಯ್ಕೆಯನ್ನು ಆರಿಸಿ

ಇದರ ನಂತರ, ಇಲ್ಲಿ ನೀವು ಇತಿಹಾಸವನ್ನು ಪರಿಶೀಲಿಸಲು ಬಯಸುವ ದಿನಾಂಕವನ್ನು ನೀವು ಆರಿಸಬೇಕಾಗುತ್ತದೆ.

ಇದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ಎಲ್ಲಿ ದುರ್ಬಳಕೆಯಾಗಿದೆ ಎಂಬುದನ್ನು ಕಂಡುಹಿಡಿಯಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ