ಅಮೆಜಾನ್​ನಲ್ಲಿ ನವರಾತ್ರಿ ಸೇಲ್: ಸ್ಮಾರ್ಟ್‌ಫೋನ್ಸ್, ಲ್ಯಾಪ್‌ಟಾಪ್‌ಗಳನ್ನು ಬಜೆಟ್ ಬೆಲೆಗೆ ಖರೀದಿಸಿ, ಶೇ. 75 ರಷ್ಟು ಡಿಸ್ಕೌಂಟ್

ಅಮೆಜಾನ್ ನವರಾತ್ರಿ ಸೇಲ್​ನಲ್ಲಿ ಟ್ರೆಂಡಿ ಎಲೆಕ್ಟ್ರಾನಿಕ್ಸ್, ಬಟ್ಟೆಗಳು ಸೇರಿದಂತೆ ಅನೇಕ ಉತ್ಪನ್ನಗಳನ್ನು ಭಾರಿ ರಿಯಾಯಿತಿಯಲ್ಲಿ ನಿಮ್ಮದಾಗಿಸಬಹುದು. ನವರಾತ್ರಿ ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಸಹ ರಿಯಾಯಿತಿಗಳು ಲಭ್ಯವಿದೆ.

ಅಮೆಜಾನ್​ನಲ್ಲಿ ನವರಾತ್ರಿ ಸೇಲ್: ಸ್ಮಾರ್ಟ್‌ಫೋನ್ಸ್, ಲ್ಯಾಪ್‌ಟಾಪ್‌ಗಳನ್ನು ಬಜೆಟ್ ಬೆಲೆಗೆ ಖರೀದಿಸಿ, ಶೇ. 75 ರಷ್ಟು ಡಿಸ್ಕೌಂಟ್
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 03, 2024 | 11:40 AM

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ನವರಾತ್ರಿಗಾಗಿ ವಿಶೇಷ ಮಳಿಗೆಯನ್ನು ಪ್ರಾರಂಭಿಸಿದೆ. ಈ ಸ್ಟೋರ್‌ನ ಹೆಸರು ಅಮೆಜಾನ್ ನವರಾತ್ರಿ ಸ್ಟೋರ್. ಇದರಲ್ಲಿ ನೀವು ಹಬ್ಬದ ಡೀಲ್‌ಗಳು ಮತ್ತು ರಿಯಾಯಿತಿ ಕೊಡುಗೆಗಳ ಲಾಭವನ್ನು ಪಡೆಯಬಹುದು. ಸದ್ಯ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನ ಭಾಗದಲ್ಲೇ ಇದು ಕಾರ್ಯನಿರ್ವಹಿಸುತ್ತಿದೆ. ನವರಾತ್ರಿ ಮಳಿಗೆಯು ಅಕ್ಟೋಬರ್ 12, 2024 ರವರೆಗೆ ಕಾರ್ಯನಿರ್ವಹಿಸುತ್ತದೆ.

ಈ ಸೇಲ್​ನಲ್ಲಿ ಟ್ರೆಂಡಿ ಎಲೆಕ್ಟ್ರಾನಿಕ್ಸ್, ಬಟ್ಟೆಗಳು, ಹಬ್ಬದ ಟ್ರೀಟ್‌ಗಳು, ಗೃಹಾಲಂಕಾರ ವಸ್ತುಗಳು ಸೇರಿದಂತೆ ಅನೇಕ ಉತ್ಪನ್ನಗಳನ್ನು ಭಾರಿ ರಿಯಾಯಿತಿಯಲ್ಲಿ ನಿಮ್ಮದಾಗಿಸಬಹುದು. ನವರಾತ್ರಿ ಮಳಿಗೆಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಸಹ ರಿಯಾಯಿತಿಗಳು ಲಭ್ಯವಿದೆ.

ಬ್ಯಾಂಕ್ ಕೊಡುಗೆಗಳಿಂದ ಹೆಚ್ಚುವರಿ ಉಳಿತಾಯ:

ಅಮೆಜಾನ್​​​ನ ನವರಾತ್ರಿ ಮಳಿಗೆಯಲ್ಲಿ ರಿಯಾಯಿತಿಯ ಹೊರತಾಗಿ ಹಣ ಉಳಿಸುವ ಅನೇಕ ಅವಕಾಶವಿದೆ. ನೀವು ಎಸ್​ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಅಮೆಜಾನ್ ಅನೇಕ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಗ್ಯಾಜೆಟ್‌ಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.

ಆ್ಯಪಲ್, ಸ್ಯಾಮ್‌ಸಂಗ್, ಇಂಟೆಲ್, ಶಿಯೋಮಿಯಂತಹ ಪ್ರಸಿದ್ಧ ಸ್ಮಾರ್ಟ್​​ಫೋನ್ ಬ್ರ್ಯಾಂಡ್‌ಗಳು ನವರಾತ್ರಿ ಮಳಿಗೆಯಲ್ಲಿವೆ, ಇದು ಹಬ್ಬದ ರಿಯಾಯಿತಿಯೊಂದಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಸೌಲಭ್ಯವನ್ನು ಒದಗಿಸುತ್ತದೆ.

ಇದನ್ನೂ ಓದಿ: ಶುರುವಾಗುತ್ತಿದೆ ಚಳಿಗಾಲ, 5 ಸಾವಿರಕ್ಕಿಂತ ಕಡಿಮೆ ಬೆಲೆಯ ಉತ್ತಮ ಗೀಸರ್ ಇಲ್ಲಿದೆ ನೋಡಿ

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಶೇ. 75 ರಷ್ಟು ರಿಯಾಯಿತಿ:

ಅಮೆಜಾನ್​​ನ ನವರಾತ್ರಿ ಸ್ಟೋರ್‌ನಿಂದ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಖರೀದಿಸಲು ನೀವು ಶೇಕಡಾ 75 ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ಇದ್ದರೆ, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೇಲೆ ಶೇಕಡಾ 75 ರಷ್ಟು ಡಿಸ್ಕೌಂಟ್ ಇರುತ್ತದೆ.

ಸ್ಮಾರ್ಟ್‌ಫೋನ್ ಕೊಡುಗೆಗಳು: ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಪೋಕೋ M6 5G (4GB+128GB) ರೂ. 9,249 ಕ್ಕೆ ಲಭ್ಯವಿದೆ. ನೀವು ಶವೋಮಿ 14 (12GB+512GB) ಖರೀದಿಸಲು ಯೋಜಿಸಿದರೆ, ಈ ಫೋನ್ 47,999 ರೂ. ಗೆ ಲಭ್ಯವಿರುತ್ತದೆ. ಐಫೋನ್ 13 (128GB) ಅನ್ನು ಕೇವಲ 42,999 ರೂ. ಗೆ ಖರೀದಿಸಬಹುದು.

ಟ್ಯಾಬ್ಲೆಟ್ ಡೀಲ್‌ಗಳು: ಸ್ಯಾಮ್​ಸಂಗ್ ಗ್ಯಾಲಕ್ಸಿ ಟ್ಯಾಬ್ A9+ (8GB+128GB) ಕೇವಲ 17,999 ರೂಗಳಲ್ಲಿ ಲಭ್ಯವಿದೆ. ನೀವು ಆ್ಯಪಲ್ ಐಪ್ಯಾಡ್ (10 ನೇ ಜನ್) ಅನ್ನು ನವರಾತ್ರಿ ಸ್ಟೋರ್‌ನಲ್ಲಿ 30,900 ರೂ. ಗೆ ಖರೀದಿಸಬಹುದು. ಲೆನೊವೊ ಟ್ಯಾಬ್ M11 ಅನ್ನು ಖರೀದಿಸಲು ಬಯಸಿದರೆ, 5,998 ರೂ. ಗೆ ಪಡೆಯುತ್ತೀರಿ.

ಲ್ಯಾಪ್‌ಟಾಪ್ ಕೊಡುಗೆಗಳು: ನೀವು ಏಸರ್ Aspire 3 ಲ್ಯಾಪ್‌ಟಾಪ್ ಅನ್ನು ಕೇವಲ 19,990 ರೂ. ಗಳಿಗೆ ಖರೀದಿಸಬಹುದು. ಏಸಸ್ ವಿವೋ ಬುಕ್ 15 ಲ್ಯಾಪ್‌ಟಾಪ್ 24,990 ರೂ. ಗಳಿಗೆ ಲಭ್ಯವಿದೆ. ಡೆಲ್ Inspiron ರೂ. 36,990, ಮತ್ತು HP ಪೆವಿಲಿಯನ್ 14 ಅನ್ನು ರೂ. 59,990 ಗೆ ನಿಮ್ಮದಾಗಿಸಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ