ಶಾಸಕರ ಕಚೇರಿಯಾಗಿ ಬದಲಾವಣೆಯಾದ ಬಯಲು ರಂಗಮಂದಿರ: ಶಾಸಕ ಎನ್.ಎ.ಹ್ಯಾರಿಸ್ ವಿರುದ್ಧ ಆರೋಪ
ಬಯಲು ರಂಗಮಂದಿರ ಇರೋದು ಸಾರ್ವಜನಿಕ ಬಳಕೆಗಾಗಿ. ಆದ್ರೆ ಹೊಸ ಕಟ್ಟಡದ ಮೇಲೆ ಶಾಸಕರ ಕಚೇರಿ ಎಂಬ ನಾಮ ಫಲಕ ಹಾಕಲಾಗಿದೆ. ಹಲವು ಮಕ್ಕಳು ಖಾಲಿ ಜಾಗವನ್ನು ಆಟದ ಮೈದಾನವಾಗಿ ಬಳಸುತ್ತಿದ್ದರು.
ಬೆಂಗಳೂರು: ದೊಮ್ಮಲೂರು ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಬಯಲು ರಂಗ ಮಂದಿರವನ್ನು ಶಾಸಕರ ಕಚೇರಿಯಾಗಿ ಬದಲಿಸಲಾಗಿದೆ ಎಂದು ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ ಹ್ಯಾರೀಸ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಶ್ರೀ ಶಿವಕುಮಾರ ಸ್ವಾಮಿಜಿ ಬಯಲು ರಂಗ ಮಂದಿರ ಎಂಬ ಹೆಸರನ್ನ ಇಡಲಾಗಿದೆ. ಸುಮಾರು 30 ವರ್ಷಗಳ ಹಿಂದೆ ದಿವಂಗತ ಪಟೇಲ್ ಶ್ರೀನಿವಾಸರೆಡ್ಡಿ ನಿರ್ಮಿಸಿದ್ದರು. ಬಹಳಷ್ಟು ವರ್ಷಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾದೆ. ರಂಗಮಂದಿರ ನವೀಕರಣಕ್ಕೆ ಬಿಬಿಎಂಪಿ ಇತ್ತೀಚೆಗೆ 3.1 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ರಂಗ ಮಂದಿರದ ಮೊದಲ ಮಹಡಿಯಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ನಿರ್ಮಿಸಲು ಬಿಬಿಎಂಪಿ ತಯಾರಿ ಮಾಡಿದೆ. ಬಯಲು ರಂಗಮಂದಿರ ಪಕ್ಕದಲ್ಲೇ ಇರುವ ಶಿಥಾಲಾವಸ್ಥೆಗೆ ತಲುಪಿರೊ ಲೈಬ್ರರಿ, ಇದನ್ನ ಮೊದಲ ಮಹಡಿಗೆ ಶಿಫ್ಟ್ ಮಾಡಬೇಕೆಂದು ಬಿಬಿಎಂಪಿ ಸಿದ್ದತೆ ನಡೆಸಿತ್ತು. ಆದರೆ ಆ ಜಾಗವನ್ನ ಶಾಸಕರ ಕಚೇರಿಯಾಗಿ ಶಾಸಕ ಎನ್.ಎ. ಹ್ಯಾರೀಸ್ ಮಾರ್ಪಾಡಿಸಿದ್ದಾರೆ ಎನ್ನಲಾಗುತ್ತಿದೆ.
ಬಯಲು ರಂಗಮಂದಿರ ಇರೋದು ಸಾರ್ವಜನಿಕ ಬಳಕೆಗಾಗಿ. ಆದ್ರೆ ಹೊಸ ಕಟ್ಟಡದ ಮೇಲೆ ಶಾಸಕರ ಕಚೇರಿ ಎಂಬ ನಾಮ ಫಲಕ ಹಾಕಲಾಗಿದೆ. ಹಲವು ಮಕ್ಕಳು ಖಾಲಿ ಜಾಗವನ್ನು ಆಟದ ಮೈದಾನವಾಗಿ ಬಳಸುತ್ತಿದ್ದರು. ಈಗ ಯಾವಾಗಲೂ ಗೇಟ್‌ಗಳಿಗೆ ಬೀಗ ಹಾಕಿರುವುದರಿಂದ ಆಟವಾಡಲು ಸ್ಥಳವಿಲ್ಲದಂತ್ತಾಗಿದೆ. ತೆರಿಗೆದಾರರು ಪಾವತಿಸಿದ ಹಣದಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಲಾಗುತ್ತಿದ್ದು, ಬಿಬಿಬಿಎಂಪಿ ಬಿಡುಗಡೆ ಮಾಡಿದ ಹಣದಲ್ಲಿ ಅನಧಿಕೃತವಾಗಿ ಶಾಸಕ ಕಚೇರಿಯಾಗಿ ಬದಲಾವಣೆ ಏಕೆ? ಇಷ್ಟು ವರ್ಷ ದೊಮ್ಮಲೂರಿನಲ್ಲಿ ಶಾಸಕರ ಕಚೇರಿ ಇರಲಿಲ್ಲ. ಈಗ ಶಾಸಕರ ಕಾಯಂ ಕಚೇರಿ ಬಯಲು ರಂಗ ಮಂದಿರದಲ್ಲಿ ಯಾಕೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.