ದಲಿತ‌ ಸಿಎಂ‌ ಆಗುತ್ತೇನೆ ಅಂತಾ ಕನಸು ಕಾಣುವವನು ಹುಚ್ಚ, ಈ ಬಗೆಗಿನ ಚರ್ಚೆ ಕೇವಲ ರಾಜಕೀಯ ತೆವಲು -ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಆನೇಕಲ್ನ ಶ್ರಿ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ 21ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದಲಿತ ಸಿಎಂ ಎಂಬ ಚರ್ಚೆ ಕೇವಲ ರಾಜಕೀಯ ತೆವಲು. ಆ ರೀತಿಯ ಚರ್ಚೆ ಆಗುವುದಿಲ್ಲ ಎಂದರು. ಸಂವಿಧಾನ ಬರೆದ ಡಾ.ಅಂಬೇಡ್ಕರ್ರಿಗೆ 5 ವರ್ಷ ಮುಂದುವರಿಯಲು ಬಿಡಲಿಲ್ಲ ಎಂದರು.

ದಲಿತ‌ ಸಿಎಂ‌ ಆಗುತ್ತೇನೆ ಅಂತಾ ಕನಸು ಕಾಣುವವನು ಹುಚ್ಚ, ಈ ಬಗೆಗಿನ ಚರ್ಚೆ ಕೇವಲ ರಾಜಕೀಯ ತೆವಲು -ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
Follow us
TV9 Web
| Updated By: ಆಯೇಷಾ ಬಾನು

Updated on:May 15, 2022 | 3:18 PM

ಆನೇಕಲ್: ದಲಿತ ಮುಖ್ಯಮಂತ್ರಿ ಕೂಗು ಕರ್ನಾಟಕದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ದಲಿತ‌ ಸಿಎಂ‌ ಆಗುತ್ತೇನೆ ಅಂತಾ ಕನಸು ಕಾಣುವವನು ಹುಚ್ಚ ಎಂದು ಆನೇಕಲ್ನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕ್ಕೆ ನೀಡಿದ್ದಾರೆ. ದಲಿತ ಸಿಎಂ‌ ಅನ್ನೋ ಚರ್ಚೆ ಅದು ಕೇವಲ ರಾಜಕೀಯ ತೆವಲು. ಯಾಕೆ ಸಿಎಂ ಆಗಲ್ಲ ಅನ್ನೋದಕ್ಕೆ ಬಹಳಷ್ಟು ಉದಾಹರಣೆ ಇದೆ ಎಂದರು.

ಆನೇಕಲ್ನ ಶ್ರಿ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ 21ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದಲಿತ ಸಿಎಂ ಎಂಬ ಚರ್ಚೆ ಕೇವಲ ರಾಜಕೀಯ ತೆವಲು. ಆ ರೀತಿಯ ಚರ್ಚೆ ಆಗುವುದಿಲ್ಲ ಎಂದರು. ಸಂವಿಧಾನ ಬರೆದ ಡಾ.ಅಂಬೇಡ್ಕರ್ರಿಗೆ 5 ವರ್ಷ ಮುಂದುವರಿಯಲು ಬಿಡಲಿಲ್ಲ. ಐದು ವರ್ಷ ಮುಂದುವರೀಲಿ ಅಂತ ಅಂಬೇಡ್ಕರ್ರ ಮನೆಗೆ ಹೋಗಿ ಒಂದ್ ಕಾಫಿಯೂ ಕುಡಿದಿಲ್ಲ. ಈ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ 9 ಬಾರಿ ಶಾಸಕರಾದರು. ಅವರು ಕೇವಲ ಮಂತ್ರಿಯಾಗಿ ಕೆಲಸ ಮಾಡಿದ್ರು, ಸಿಎಂ ಆಗಲಿಲ್ಲ. ಜಿ.ಪರಮೇಶ್ವರ್ ಸಿಎಂ ಆಗ್ತಾರೆ ಅಂತಾ ಅವರನ್ನು ಸೋಲಿಸಿದರು. ಕರ್ನಾಟಕದಲ್ಲಿ ದಲಿತ ಸಿಎಂ ಕನಸು ಕಾಣುವವನು ಹುಚ್ಚ. ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಬೊಮ್ಮಾಯಿಯವರೇ ಈ ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ಆನೇಕಲ್ನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕರ್ನಾಟಕದಲ್ಲೂ ದಲಿತ ಸಿಎಂ ಬೇಡಿಕೆ ಇಡಬೇಕಾದ ಸ್ಥಿತಿ ಬರಬಹುದು: ಡಾ.ಜಿ.ಪರಮೇಶ್ವರ್ ಪಂಜಾಬ್​ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ದಲಿತ ಸಿಎಂ ಬೇಕೆಂದು ಕೇಳುವಂತಾಗಬಹುದು ಎಂದು ತುಮಕೂರಿನಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ದಲಿತರನ್ನು ಸಿಎಂ ಮಾಡಬೇಕೆಂದು ಕೇಳುವಂತಾಗಬಹುದು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ರಾಜ್ಯ ಬಿಜೆಪಿಯಲ್ಲಿ ಕಳೆದ ಬಾರಿಯೂ 3 ಜನ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಈ ಬಾರಿಯೂ ಮೂವರು ಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದರು.

Published On - 3:18 pm, Sun, 15 May 22