ಮತ್ತೊಂದು ದೊಡ್ಡ ನಿರ್ಧಾರಕ್ಕೆ ಮುಂದಾದ ಕಾಂಗ್ರೆಸ್: ಪಕ್ಷದ ಪದಾಧಿಕಾರಿಗಳಲ್ಲಿ 70 ವರ್ಷ ಮೇಲ್ಪಟ್ಟವರಿಗೂ ಕೋಕ್ ನೀಡಲು ಚಿಂತನೆ
ಸೋನಿಯಾ ಗಾಂಧಿಗೆ ಸಲ್ಲಿಸಿರುವ ವರದಿಯಲ್ಲಿ 70 ಫಾರ್ಮುಲಾ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಈ ಸಲಹೆ ಗಂಭೀರ ಚರ್ಚೆ ಮಾಡಲಿದ್ದಾರೆ.
ಬೆಂಗಳೂರು: ಮತ್ತೊಂದು ದೊಡ್ಡ ನಿರ್ಧಾರಕ್ಕೆ ಮುಂದಾದ ಕಾಂಗ್ರೆಸ್ ಮುಂದಾಗಿದೆ. 70 ವರ್ಷಕ್ಕೆ ಮೇಲ್ಪಟ್ಟವರಿಗೆ ಚುನಾವಣೆ ಟಿಕೆಟ್ ನೀಡದಿರುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಪಕ್ಷದ ಪದಾಧಿಕಾರಿಗಳಲ್ಲಿ 70 ವರ್ಷ ಮೇಲ್ಪಟ್ಟವರಿಗೂ ಕೋಕ್ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ. 70 ವರ್ಷ ಮೇಲ್ಪಟ್ಟ ನಾಯಕರಿಗೆ ಪಕ್ಷದ ಪದಾಧಿಕಾರಿ ಸ್ಥಾನದಿಂದ ರಾಜೀನಾಮೆ ಕೇಳುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. 70 ವರ್ಷ ಮೇಲ್ಪಟ್ಟವರು ಪಕ್ಷದ ಸಲಹಾ ಸಮಿತಿಯಲ್ಲಿ ಕೆಲಸ ಮಾಡಲಿ. ಪಕ್ಷಕ್ಕಾಗಿ ಕೆಲಸ ಮಾಡಲಿ ಎಂದು ಸಂಘಟನಾ ಸಮಿತಿ ವರದಿ ನೀಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ವರದಿ ನೀಡಿದ್ದು, ವರದಿಯನ್ನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಗಂಭೀರ ಚರ್ಚೆ ಮಾಡಲಿದೆ. ಪ್ರಭಾವಿ ನಾಯಕರು , ಸಂಪನ್ಮೂಲ ವ್ಯಕ್ತಿಗಳು ಮತ ಕ್ರೂಢಿಕರಣ ಸಾಮರ್ಥ್ಯದ ನಾಯಕರಿಗೆ ವಿನಾಯತಿ ಸಾಧ್ಯತೆಯಿದೆ. ಈಗಿರುವ ವ್ಯವಸ್ಥೆಯಲ್ಲಿ ಶೇಕಡ 50 ರಷ್ಟು ಯುವಕರಿಗ ಸ್ಥಾನಮಾನದ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಚುನಾವಣಾ ಟಿಕೆಟ್ ಹಾಗೂ ಪದಾಧಿಕಾರಿಗಳ ಪಟ್ಟಿಯಲ್ಲಿ ಯುವಕರಿಗೆ ಸ್ಥಾನಮಾನ ನೀಡಲು ಚಿಂತನೆ. 35 ವಯೋಮಾನದವರಿಗೆ ಆದ್ಯತೆ ನೀಡಲು ಕೈ ಪಡೆ ಚಿಂತನೆ ನಡೆಸುತ್ತಿದೆ. ಮುಕುಲ್ ವಾಸ್ನಿಕ್ ನೇತೃತ್ವದ ಸಂಘಟನಾ ಸಮಿತಿಯಿಂದ ಸಲಹೆ ನೀಡಿದೆ. ಸೋನಿಯಾ ಗಾಂಧಿಗೆ ಸಲ್ಲಿಸಿರುವ ವರದಿಯಲ್ಲಿ 70 ಫಾರ್ಮುಲಾ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಈ ಸಲಹೆ ಗಂಭೀರ ಚರ್ಚೆ ಮಾಡಲಿದ್ದಾರೆ.
2023ರ ಚುನಾವಣೆ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಬಿಗ್ ಫೈಟ್!
ರಾಮನಗರ: ಜಿಲ್ಲಾ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಬಿಗ್ ಫೈಟ್ ನಡೆಯುತ್ತಿದ್ದು, ಪಕ್ಷದ ನಿರ್ಧಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಭಾವ ಸಿಪಿ ಶರತ್ ಚಂದ್ರ (Sharath Chandra) ಸಿಡಿದೆದ್ದಿದ್ದಾರೆ. ಶರತ್ ಚಂದ್ರ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಕುಟುಂಬಸ್ಥರಿಗೆ ಟಿಕೆಟ್ ನೀಡಲ್ಲ ಅಂತ ಡಿಕೆ ಸುರೇಶ್ ತಿಳಿಸಿದ್ದಾರೆ. ಚನ್ನಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಸುರೇಶ್ ಹೇಳಿಕೆಗೆ ಶರತ್ ಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಶರತ್ ಚಂದ್ರ, ನಮ್ಮ ಭಾವ ಆಗಿರುವುದರಿಂದ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಸುರೇಶ್ ಹೇಳಿದ್ದಾರೆ. ಕಳಂಕ ಬರುತ್ತದೆ ಎಂದು ಟಿಕೆಟ್ ನೀಡುವುದಿಲ್ಲ ಎಂದಿದ್ದಾರೆ. ಈ ತೀರ್ಮಾನದಿಂದ ನನಗೆ ನೋವಾಗಿದೆ ಎಂದು ತಿಳಿಸಿದರು.
ರೇಸ್ನಲ್ಲಿ ಹಲವು ಅಭ್ಯರ್ಥಿಗಳು:
ಕಾಂಗ್ರೆಸ್ನಲ್ಲಿ ಎರಡು ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ. ಮಾಜಿ ವಿಪಕ್ಷ ನಾಯಕರ ಎಸ್ ಆರ್ ಪಾಟೀಲ್ ಮತ್ತೆ ಟಿಕೆಟ್ ಕೇಳುತ್ತಿದ್ದಾರೆ ಕಳೆದ ಬಾರಿ ಕೈತಪ್ಪಿದ ಹಿನ್ನೆಲೆ ಈ ಬಾರಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಎಸ್ಆರ್ ಪಾಟೀಲ್ ಜೊತೆ ಬಿಎಲ್ ಶಂಕರ್, ವಿಆರ್ ಸುದರ್ಶನ್ ಹೆಸರು ಸಹ ರೇಸ್ ನಲ್ಲಿದೆ. ನಿವೇದಿತ್ ಆಳ್ವಾ, ಎಂಸಿ ವೇಣುಗೋಪಾಲ್, ಪುಷ್ಪ ಅಮರನಾಥ್ ಸೇರಿದಂತೆ ಹಲವರಿಂದ ಲಾಬಿ ನಡೆಯುತ್ತಿದೆ. ಕೆಲ ನಾಯಕರು ಹೈಕಮಾಂಡ್ ಬಾಗಿಲು ತಟ್ಟುತ್ತಿದ್ದಾರೆ. ಉದಯಪುರ ಶಿಬಿರ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ಬಳಿಕ ಟಿಕೆಟ್ ಬಗ್ಗೆ ಚರ್ಚೆ ನಡೆಯುತ್ತದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.