AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪುಟ ವಿಸ್ತರಣೆ ಬಗ್ಗೆ ನಾಳೆ ಅಥವಾ ನಾಡಿದ್ದು ಹೈಕಮಾಂಡ್​ ಜೊತೆ ಚರ್ಚೆ ಮಾಡುವೆ : ಸಿಎಂ ಬೊಮ್ಮಾಯಿ

ರಾಜ್ಯದ ವಿಧಾನಪರಿಷತ್, ರಾಜ್ಯಸಭಾ ಚುನಾವಣೆಗೆ ಸಿದ್ಧತೆಯಲ್ಲಿದ್ದೇವೆ. ನಿನ್ನೆ ಕೋರ್​ ಕಮಿಟಿ ಸಭೆ ನಡೆದಿದೆ, ವರಿಷ್ಠರು ಗಮನ ಹರಿಸುತ್ತಾರೆ.

ಸಂಪುಟ ವಿಸ್ತರಣೆ ಬಗ್ಗೆ ನಾಳೆ ಅಥವಾ ನಾಡಿದ್ದು ಹೈಕಮಾಂಡ್​ ಜೊತೆ ಚರ್ಚೆ ಮಾಡುವೆ : ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: ವಿವೇಕ ಬಿರಾದಾರ|

Updated on:May 15, 2022 | 1:00 PM

Share

ಹುಬ್ಬಳ್ಳಿ: ರಾಜ್ಯದ ವಿಧಾನಪರಿಷತ್ (MLC Election), ರಾಜ್ಯಸಭಾ ಚುನಾವಣೆಗೆ ಸಿದ್ಧತೆಯಲ್ಲಿದ್ದೇವೆ. ನಿನ್ನೆ ಕೋರ್​ ಕಮಿಟಿ ಸಭೆ ನಡೆದಿದೆ, ವರಿಷ್ಠರು ಗಮನ ಹರಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ. ಹುಬ್ಬಳ್ಳಿಯ (Hubli) ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿಗಳ ಆಯ್ಕೆ, ಸಂಪುಟ ವಿಸ್ತರಣೆ ಬಗ್ಗೆ ನಾಳೆ ಅಥವಾ ನಾಡಿದ್ದು ಹೈಕಮಾಂಡ್​ ಜೊತೆ ಚರ್ಚೆ ಮಾಡುವೆ. ಹೈಕಮಾಂಡ್​ ಸೂಚಿಸಿದ ನಂತರ ಸಂಪುಟ ವಿತರಣೆ ಮಾಡುವೆ ಎಂದು ತಿಳಿಸಿದರು.

ಹಳೇ ಮೈಸೂರು ಭಾಗದಲ್ಲಿ ಬೇರೆ ನಾಯಕರ ಸೇರ್ಪಡೆ ಸಹಜವಾಗಿದೆ. ಚುನಾವಣೆ ಸಂದರ್ಭದಲ್ಲಿ ನಾಯಕರ ಸೇರ್ಪಡೆ ಸಹಜ ಪ್ರಕ್ರಿಯೆಯಾಗಿದೆ. ಇನ್ನೂ ವಿಜಯೇಂದ್ರಗೆ MLC ಸ್ಥಾನದ ಬಗ್ಗೆ ಹೈಕಮಾಂಡ್​ ನಿರ್ಧರಿಸುತ್ತೆ. ಮುಂದುವರೆದು ಆಜಾನ್, ಹಿಜಾಬ್ (Hijab)​ ಬಗ್ಗೆ ಕೋರ್ಟ್ ಆದೇಶದಂತೆ ಪಾಲಿಸುತ್ತಿದ್ದೇವೆ. ಸಧ್ಯ ಪರಿಷತ್ ಹಾಗೂ ರಾಜ್ಯ ಸಭೆ ಚುನಾವಣೆಯಲ್ಲಿ ಬ್ಯುಸಿ ಇದ್ದೆವೆ. ನಿನ್ನೆಯಷ್ಟೆ ನಮ್ಮ ಕೋರ್ ಕಮೀಟಿ ಮೀಟಿಂಗ್ ಆಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಹಿಜಾಬ್,ಅಜಾನ್ ವಿವಾದವನ್ನ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ನಾವು ಅಜಾನ್ ವಿಚಾರವಾಗಿಯೂ ಸುಪ್ರೀಂ ಕೋಟ್೯ ತೀರ್ಪಿನ ಆಧಾರದ ಮೇಲೆ ಬಗೆಹರಿಸಿದ್ದೆವೆ. ಜನಪರ ಹಾಗೂ, ದಕ್ಷ ಆಡಳಿತ ನೀಡುತ್ತಿದ್ದೆವೆ. ವಿರೋಧಿಗಳಿಗೆ ಅದೇ ನಮ್ಮ ಉತ್ತರವಾಗಿದೆ.

ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ ವಿಜಯೇಂದ್ರ

ಇದನ್ನೂ ಓದಿ
Image
ಕಾಂಗ್ರೆಸ್​ನಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ನೀಡುವ ಚಿಂತನೆ; ಸರಣಿ ಟ್ವೀಟ್ ಮೂಲಕ ಸವಾಲೆಸೆದ ರಾಜ್ಯ ಬಿಜೆಪಿ
Image
ಪಿತ್ರಾರ್ಜಿತ ಆಸ್ತಿ ಮಾರಿದರೆ ತೆರಿಗೆ ಕಟ್ಟಬೇಕೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
Image
ಇಸ್ಪೀಟ್ ಕ್ಲಬ್​ಗೆ ಲೈಸೆನ್ಸ್ ಕೊಡಿಸುತ್ತೇನೆ ಎಂಬ ಆಡಿಯೋ ವೈರಲ್‌: ಪೊಲೀಸ್ ಆಯುಕ್ತ ಕಮಲ್‌ಪಂತ್ ಸ್ಪಷ್ಟನೆ
Image
ಮೈ ಶುಗರ್ ಕಾರ್ಖಾನೆ ಗೇಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ, ಕೈ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ

ಬೆಂಗಳೂರು: ನನ್ನ ಹೆಸರನ್ನು ಕೋರ್ ಕಮಿಟಿ ಕೇಂದ್ರಕ್ಕೆ ಶಿಪಾರಸು ಮಾಡಿದೆ ಇದಕ್ಕೆ ನಾನು ಕೋರ್ ಕಮಿಟಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ. ಇನ್ನೂ ಈ ಬಗ್ಗೆ ಕೇಂದ್ರದವರು ತೀರ್ಮಾನ ಬಾಕಿ ಇದೆ. ಕಾಯೋಣ , ಇನ್ನೂ ಎರಡು ಮೂರು ದಿನ ಬೇಕಾಗಬಹುದು. ಪಕ್ಷ ಏನೆ ಜವಬ್ದಾರಿ ನೀಡಿದರು ನಾನು ನಿರ್ವಹಣೆ ಮಾಡುತ್ತೇನೆ. ನನ್ನ ಹೆಸರನ್ನು ಶಿಪಾರಸು ಮಾಡಿದ್ದಕ್ಕೆ ಸಂತೋಷ ಆಗಿದೆ. ಇದು ಹೊಸ ಜವಾಬ್ದಾರಿ ಅಲ್ಲ, ಕೇವಲ ಶಿಫಾರಸು ಮಾಡಲಾಗಿದೆ ಅಷ್ಟೇ ಎಂದರು.

ಮೈಸೂರು (Mysore)ಭಾಗದಲ್ಲಿ ಆಪರೇಷನ್ ಕಮಲ ವಿಚಾರವಾಗಿ, ಹಳೇ ಮೈಸೂರು ಭಾಗ ಅಷ್ಟೇ ಅಲ್ಲ, ರಾಜ್ಯದ ಎಲ್ಲ ಕಡೆಯಿಂದಲೂ ಬಿಜೆಪಿಗೆ ಬರಲು ಆಸಕ್ತಿ ತೋರುತ್ತಿದ್ದಾರೆ. ಮುಂದಿನ ಸಲ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಶ್ರಮ ಯಶಸ್ವಿ ಆಗುವ ವಿಶ್ವಾಸ ಇದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:00 pm, Sun, 15 May 22