Karnataka SSLC Result 2022: ಫಲಿತಾಂಶದ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ, ಏನೇ ಒತ್ತಡವಿದ್ದರೂ ಕರೆ ಮಾಡಿ ನಿಮ್ಹಾನ್ಸ್ ವೈದ್ಯರೊಂದಿಗೆ ಮಾತಾಡಿ

Karnataka SSLC Result 2022: ಫಲಿತಾಂಶದ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ, ಏನೇ ಒತ್ತಡವಿದ್ದರೂ ಕರೆ ಮಾಡಿ ನಿಮ್ಹಾನ್ಸ್ ವೈದ್ಯರೊಂದಿಗೆ ಮಾತಾಡಿ
ಸಾಂಧರ್ಬಿಕ ಚಿತ್ರ
Image Credit source: Hindustan Times

080-46110007 ಸಂಖ್ಯೆಗೆ ಕರೆ ಮಾಡಿ ವಿದ್ಯಾರ್ಥಿಗಳು ಸಲಹೆ ಪಡೆಯಬಹುದು. ಸಹಾಯವಾಣಿ ಮೂಲಕ ವಿದ್ಯಾರ್ಥಿಗಳಿಗೆ ಟೆಲಿ ಕೌನ್ಸಿಲಿಂಗ್ ಮಾಡಲಾಗುತ್ತೆ. ಮಾನಸಿಕ ಆರೋಗ್ಯದ ಬಗ್ಗೆ ನಿಮ್ಹಾನ್ಸ್ ವೈದ್ಯರು ಮಾಹಿತಿ ನೀಡಲಿದ್ದಾರೆ.

TV9kannada Web Team

| Edited By: Ayesha Banu

May 18, 2022 | 10:16 PM

ಬೆಂಗಳೂರು: ನಾಳೆ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ ಹಿನ್ನೆಲೆ ಫಲಿತಾಂಶದ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ನಿಮ್ಹಾನ್ಸ್ ಸಹಾಯದೊಂದಿಗೆ ರಾಜ್ಯ ಆರೋಗ್ಯ ಇಲಾಖೆ ಸಹಾಯವಾಣಿ ತೆರೆದಿದೆ. 080-46110007 ಸಂಖ್ಯೆಗೆ ಕರೆ ಮಾಡಿ ವಿದ್ಯಾರ್ಥಿಗಳು ಸಲಹೆ ಪಡೆಯಬಹುದು. ಸಹಾಯವಾಣಿ ಮೂಲಕ ವಿದ್ಯಾರ್ಥಿಗಳಿಗೆ ಟೆಲಿ ಕೌನ್ಸಿಲಿಂಗ್ ಮಾಡಲಾಗುತ್ತೆ. ಮಾನಸಿಕ ಆರೋಗ್ಯದ ಬಗ್ಗೆ ನಿಮ್ಹಾನ್ಸ್ ವೈದ್ಯರು ಮಾಹಿತಿ ನೀಡಲಿದ್ದಾರೆ.

ಆನ್​​ಲೈನ್​ನಲ್ಲಿ ಫಲಿತಾಂಶ ನೋಡುವುದು ಹೇಗೆ? ಇದರ ಮೇಲೆ ಕ್ಲಿಕ್ ಮಾಡಿ

ನಾಳೆ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ
Karnataka SSLC Result 2022 | ಕರ್ನಾಟಕ SSLC ಫಲಿತಾಂಶ 2022: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEEB) 10 ನೇ ತರಗತಿ (SSLC) ಫಲಿತಾಂಶವನ್ನು (Result) ನಾಳೆ (ಮೇ 19) ರಂದು ಪ್ರಕಟಿಸಲಿದೆ. SSLC ಫಲಿತಾಂಶ 2022 ಅನ್ನು ಅಧಿಕೃತ ವೆಬ್‌ಸೈಟ್‌- sslc.karnataka.gov.in ನಲ್ಲಿ ಪ್ರಕಟಿಸಲಾಗುತ್ತದೆ. ಫಲಿತಾಂಶವನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ SSLC ಪರೀಕ್ಷೆಯ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು. ಕರ್ನಾಟಕ SSLC 2022 ಪರೀಕ್ಷೆಗಳು ಮಾರ್ಚ್ 28 ಮತ್ತು ಏಪ್ರಿಲ್ 11 ರ ನಡುವೆ ನಡೆದವು. ಈ ವರ್ಷ ಸುಮಾರು 8.5 ಲಕ್ಷ ವಿದ್ಯಾರ್ಥಿಗಳು KSEEB 10 ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶ: ಲಖನೌ ವಿಶ್ವವಿದ್ಯಾಲಯದಲ್ಲಿ ದಲಿತ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ

10 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ವಿದ್ಯಾರ್ಥಿಗಳು ಕನಿಷ್ಠ 35 ಶೇಕಡಾ ಅಂಕಗಳನ್ನು ಗಳಿಸಬೇಕು. ವಿದ್ಯಾರ್ಥಿಗಳು ಎಲ್ಲಾ ವೈಯಕ್ತಿಕ ವಿಷಯಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಗಳಿಸಬೇಕು. ಒಂದು ಅಥವಾ ಎರಡು ವಿಷಯಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಪಡೆಯಲು ಸಾಧ್ಯವಾಗದವರು ಕಂಪಾರ್ಟ್‌ಮೆಂಟ್ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.


Follow us on

Most Read Stories

Click on your DTH Provider to Add TV9 Kannada