Post Office Savings Account: ಪೋಸ್ಟ್​ ಆಫೀಸ್​ನ ಈ ಯೋಜನೆಯಲ್ಲಿ ಪಡೆಯಿರಿ ತಿಂಗಳಿಗೆ 4950 ರೂಪಾಯಿ ಆದಾಯ

ಪೋಸ್ಟ್ ಆಫೀಸ್​ನ ಈ ಮಂತ್ಲಿ ಇನ್​ಕಮ್​ ಸ್ಕೀಮ್​ನಲ್ಲಿ ತಿಂಗಳಿಗೆ 4950 ರೂಪಾಯಿ ಪಡೆಯಬಹುದು. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.

Post Office Savings Account: ಪೋಸ್ಟ್​ ಆಫೀಸ್​ನ ಈ ಯೋಜನೆಯಲ್ಲಿ ಪಡೆಯಿರಿ ತಿಂಗಳಿಗೆ 4950 ರೂಪಾಯಿ ಆದಾಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 19, 2022 | 3:05 PM

ಈ ಲೇಖನದಲ್ಲಿ ನಿಮಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯ ಬಗ್ಗೆ ತಿಳಿಸುತ್ತಿದ್ದೇವೆ. ಈ ಉಳಿತಾಯದ ಮೂಲಕ ಹೂಡಿಕೆದಾರರು ಪ್ರತಿ ತಿಂಗಳು ಒಟ್ಟು ಮೊತ್ತದ ಠೇವಣಿಯಿಂದ ಆದಾಯ ಪಡೆಯುತ್ತಾರೆ. ಇದರ ಮೂಲಕ ಜೀವನ ನಡೆಸಲು ನೆರವಾಗುತ್ತದೆ. ನಿಮ್ಮ ಒಟ್ಟು ಮೊತ್ತ ಸುರಕ್ಷಿತವಾಗಿರುತ್ತದೆ. ಇದರಲ್ಲಿ ಹೂಡಿಕೆದಾರರು ವಾರ್ಷಿಕವಾಗಿ ಶೇಕಡಾ 6.6ರಷ್ಟು ಉತ್ತಮ ಆದಾಯ ಪಡೆಯುತ್ತಾರೆ ಹಾಗೂ ಅದರ ಮೆಚ್ಯೂರಿಟಿ ಅವಧಿಯು 5 ವರ್ಷಗಳಾಗಿರುತ್ತದೆ. ಈ ಪೋಸ್ಟ್ ಆಫೀಸ್ ಯೋಜನೆಯ ಹೆಸರು Post Office MIS (Monthly Income Scheme). ಇದರಲ್ಲಿ ಕನಿಷ್ಠ 1000 ರೂಪಾಯಿಗಳನ್ನು ಠೇವಣಿ ಇಡಬಹುದು. ಇದಕ್ಕಿಂತ ಹೆಚ್ಚಿನ ಮೊತ್ತವು 100ರ ಗುಣಕದಲ್ಲಿ ಇರುತ್ತದೆ. ವೈಯಕ್ತಿಕವಾಗಿ ಗರಿಷ್ಠ 4.5 ಲಕ್ಷ ರೂ., ಜಂಟಿ ಖಾತೆಯಲ್ಲಿ 9 ಲಕ್ಷದವರೆಗೆ ಠೇವಣಿ ಇಡಬಹುದು. ಜಂಟಿ ಖಾತೆಯಲ್ಲಿ ಇಬ್ಬರ ಕೊಡುಗೆಯು ಸಮಾನವಾಗಿರುತ್ತದೆ ಎಂಬುದು ಮುಖ್ಯ. ಅಂದಹಾಗೆ ಬಡ್ಡಿದರವು ಸದ್ಯಕ್ಕೆ ಶೇಕಡಾ 6.6 ಆಗಿದೆ.

ಪ್ರತಿ ತಿಂಗಳು 4950 ರೂಪಾಯಿ ಬಡ್ಡಿ ಆದಾಯ ಉದಾಹರಣೆಗೆ, ಎ ಮತ್ತು ಬಿ ಒಟ್ಟಾಗಿ ಈ ಯೋಜನೆಯಲ್ಲಿ ಗರಿಷ್ಠ 4.5+ 4.5 ಲಕ್ಷ ರೂಪಾಯಿ ಈ ರೀತಿಯಾಗಿ ಠೇವಣಿಯ ಒಟ್ಟು ಮೊತ್ತ 9 ಲಕ್ಷ ರೂಪಾಯಿಗಳನ್ನು ಮಾಡುತ್ತಾರೆ. ಶೇ 6.6 ರಷ್ಟು ದರದಲ್ಲಿ ವಾರ್ಷಿಕ ಬಡ್ಡಿ (900000 * 1 * 6.6 / 100 = 59400) 59400 ರೂಪಾಯಿ ಆಗುತ್ತದೆ. ಈ ರೀತಿಯಾಗಿ ಮಾಸಿಕ ಬಡ್ಡಿ ಆದಾಯ 4950 ರೂ. ಬಂದು, ಇದರಲ್ಲಿ 2475-2475 ಎ ಮತ್ತು ಬಿ ಇಬ್ಬರಿಗೂ ಸಮಾನವಾಗಿ ಸಿಗುತ್ತದೆ.

ಅರ್ಹತೆ ಮತ್ತು ತೆರಿಗೆ ನಿಯಮಗಳು ಪೋಸ್ಟ್ ಆಫೀಸ್ ಎಂಐಎಸ್ ಖಾತೆಯನ್ನು 10 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ತೆರೆಯಬಹುದಾಗಿದೆ. ವಯಸ್ಸು ಅದಕ್ಕಿಂತ ಕಡಿಮೆಯಿದ್ದಲ್ಲಿ ಗಾರ್ಡಿಯನ್ ತನ್ನ ಹೆಸರಿನಲ್ಲಿ ಖಾತೆ ತೆರೆಯಬಹುದು. ಖಾತೆ ತೆರೆದ 30 ದಿನಗಳ ನಂತರ ಬಡ್ಡಿ ಪಾವತಿ ಪ್ರಾರಂಭ ಆಗುತ್ತದೆ. ಈ ಯೋಜನೆಯಡಿಯಲ್ಲಿ ಬಡ್ಡಿಯನ್ನು ತಿಂಗಳ ಆಧಾರದ ಮೇಲೆ ಪಾವತಿಸಲಾಗುತ್ತದೆ. ಖಾತೆದಾರರು ಮಾಸಿಕ ಬಡ್ಡಿಯನ್ನು ಪಡೆಯದಿದ್ದರೆ ಹೆಚ್ಚುವರಿ ಬಡ್ಡಿಯ ಲಾಭವನ್ನು ನೀಡುವುದಿಲ್ಲ. ಅದೇ ಅಂಚೆ ಕಚೇರಿಯ ಉಳಿತಾಯ ಖಾತೆಗೆ ಆಟೋ ಮೋಡ್‌ನಲ್ಲಿ ಬಡ್ಡಿಯು ಪ್ರತಿ ತಿಂಗಳು ಬರುತ್ತದೆ. ಬಡ್ಡಿ ಆದಾಯಕ್ಕೆ ಖಾತೆದಾರರಿಗೆ ಸಂಪೂರ್ಣವಾಗಿ ತೆರಿಗೆ ವಿಧಿಸಲಾಗುತ್ತದೆ.

ಅವಧಿಗೆ ಪೂರ್ವ ಅಕೌಂಟ್ ಕ್ಲೋಸ್ ಮಾಡಿದರೆ ಅಥವಾ ಸಾವು ಸಂಭವಿಸಿದಲ್ಲಿ ಏನಾಗುತ್ತದೆ? ಪೋಸ್ಟ್ ಆಫೀಸ್ ಎಂಐಎಸ್​ಗೆ ಲಾಕ್-ಇನ್ ಅವಧಿ 1 ವರ್ಷ ಮತ್ತು ಮುಕ್ತಾಯ ಅವಧಿ 5 ವರ್ಷ ಆಗಿರುತ್ತವೆ. ಅದಕ್ಕೂ ಮೊದಲು ಒಟ್ಟು ಮೊತ್ತದ ಠೇವಣಿಗಳನ್ನು ಹಿಂಪಡೆಯಲು ಆಗುವುದಿಲ್ಲ. 1ರಿಂದ 3 ವರ್ಷಗಳ ನಡುವೆ ಖಾತೆಯನ್ನು ಕ್ಲೋಸ್ ಮಾಡಿದರೆ ಅಸಲು ಮೊತ್ತದ ಶೇ 2ರಷ್ಟನ್ನು ದಂಡವಾಗಿ ಕಡಿತಗೊಳಿಸಲಾಗುತ್ತದೆ. 3ರಿಂದ 5 ವರ್ಷಗಳ ಮಧ್ಯೆ ಹಿಂತೆಗೆದುಕೊಂಡರೆ ಶೇಕಡಾ 1ರಷ್ಟು ದಂಡ ಹಾಕಲಾಗುತ್ತದೆ. ಖಾತೆದಾರರು ಮೃತಪಟ್ಟರೆ, ನಾಮಿನಿಗೆ ಬಡ್ಡಿ ಸೇರಿದಂತೆ ಪೂರ್ಣ ಮೊತ್ತವನ್ನು ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Atal Pension Scheme: ದಿನಕ್ಕೆ 7 ರೂಪಾಯಿಯಂತೆ ಉಳಿತಾಯ ಮಾಡಿದಲ್ಲಿ ವರ್ಷಕ್ಕೆ 60 ಸಾವಿರ ರೂಪಾಯಿ ಪೆನ್ಷನ್ ಪಡೆಯಬಹುದು

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್