Gold Price Today: 4 ದಿನಗಳ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರ 1,100 ರೂ. ಹೆಚ್ಚಳ

Silver Price Today: ಭಾರತದಲ್ಲಿ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 51,280 ರೂ. ಇದ್ದುದು ಇಂದು 51,700 ರೂ. ಆಗಿದೆ. ಇಂದು 1 ಕೆಜಿ ಬೆಳ್ಳಿ ಬೆಲೆ 1,100 ರೂ. ಏರಿಕೆಯಾಗಿದೆ.

Gold Price Today: 4 ದಿನಗಳ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರ 1,100 ರೂ. ಹೆಚ್ಚಳ
ಚಿನ್ನದ ಬೆಲೆ
Edited By:

Updated on: May 06, 2022 | 6:01 AM

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ಬೆಲೆ ಇಂದು ಏಕಾಏಕಿ ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಇಂದು (Gold Price) 420 ರೂ. ಏರಿಕೆ ಕಂಡಿದೆ. ಆದರೆ, ಬೆಳ್ಳಿಯ ಬೆಲೆ (Silver Price) ಇಂದು ಬರೋಬ್ಬರಿ 1,100 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,000 ರೂ. ಇದ್ದುದು 47,400 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,280 ರೂ. ಇದ್ದುದು 51,700 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,510 ರೂ. ಮುಂಬೈ- 47,400 ರೂ, ದೆಹಲಿ- 47,400 ರೂ, ಕೊಲ್ಕತ್ತಾ- 47,400 ರೂ, ಬೆಂಗಳೂರು- 47,400 ರೂ, ಹೈದರಾಬಾದ್- 47,400 ರೂ, ಕೇರಳ- 47,400 ರೂ, ಪುಣೆ- 47,480 ರೂ, ಮಂಗಳೂರು- 47,400 ರೂ, ಮೈಸೂರು- 47,400 ರೂ. ಇದೆ. (Source)

ಇದನ್ನೂ ಓದಿ
Indian Rupee Value: ಭಾರತದ ರೂಪಾಯಿ ಮೌಲ್ಯ ಯಾವ ದೇಶದ ಕರೆನ್ಸಿ ವಿರುದ್ಧ ಎಷ್ಟಿದೆ ಗೊತ್ತೆ?
Gold-Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮೇ 5ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ
Edible Oil: ಬೆಲೆ ಇಳಿಕೆಗಾಗಿ ಖಾದ್ಯ ತೈಲ ಮೇಲಿನ ತೆರಿಗೆ ಇಳಿಕೆಗೆ ಮುಂದಾದ ಕೇಂದ್ರ ಸರ್ಕಾರ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,920 ರೂ, ಮುಂಬೈ- 51,700 ರೂ, ದೆಹಲಿ- 51,700 ರೂ, ಕೊಲ್ಕತ್ತಾ- 51,700 ರೂ, ಬೆಂಗಳೂರು- 51,700 ರೂ, ಹೈದರಾಬಾದ್- 51,700 ರೂ, ಕೇರಳ- 51,700 ರೂ, ಪುಣೆ- 51,780 ರೂ, ಮಂಗಳೂರು- 51,700 ರೂ, ಮೈಸೂರು- 51,700 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಭಾರೀ ಹೆಚ್ಚಳವಾಗಿದೆ.

ಇಂದಿನ ಬೆಳ್ಳಿಯ ದರ:
ಇಂದು 1 ಕೆಜಿ ಬೆಳ್ಳಿ ಬೆಲೆ 1,100 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 62,700 ರೂ. ಇದ್ದುದು ಇಂದು 63,800 ರೂ.ಗೆ ಏರಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,700 ರೂ, ಮೈಸೂರು- 67,700 ರೂ., ಮಂಗಳೂರು- 67,700 ರೂ., ಮುಂಬೈ- 63,800 ರೂ, ಚೆನ್ನೈ- 67,700 ರೂ, ದೆಹಲಿ- 63,800 ರೂ, ಹೈದರಾಬಾದ್- 67,700 ರೂ, ಕೊಲ್ಕತ್ತಾ- 63,800 ರೂ. ಆಗಿದೆ.

Web contact

TV9 Kannada

Read More
Follow Us