Gold Price Today: ಇಂದು ಅಕ್ಷಯ ತೃತೀಯ; ಬಂಗಾರ ಖರೀದಿಸಲು ಯೋಚಿಸಿದ್ದರೆ ಇಂದಿನ ಚಿನ್ನದ ಬೆಲೆ ಇಲ್ಲಿದೆ
Akshaya Trtiya 2022: ಅಕ್ಷಯ ತೃತೀಯ ದಿನವಾದ ಇಂದು ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು: ಇಂದು ಅಕ್ಷಯ ತೃತೀಯ (Akshaya Tritiya). ಹಿಂದೂ ಪಂಚಾಂಗದ ಪ್ರಕಾರ ಇಂದು ಬಹಳ ಒಳ್ಳೆಯ ದಿನ. ಯಾವುದಾದರೂ ಒಳ್ಳೆ ಕೆಲಸವನ್ನು ಮಾಡಲು, ಚಿನ್ನ, ಬೆಳ್ಳಿ, ಹೊಸ ಮನೆ, ಹೊಸ ವಾಹನ ಖರೀದಿಸಲು ಅಕ್ಷಯ ತೃತೀಯ ಬಹಳ ಶುಭಕರವಾದ ದಿವಸವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಇಂದು ಚಿನ್ನ ಖರೀದಿಸುವವರ ಸಂಖ್ಯೆ ಬಹಳ ಹೆಚ್ಚಾಗಿರುತ್ತದೆ. ಅಕ್ಷಯ ತೃತೀಯದ ದಿನವಾದರೂ ಇಂದು ಚಿನ್ನದ ಬೆಲೆ (Gold Price) ಭಾರೀ ಇಳಿಕೆಯಾಗಿದೆ. ಹೀಗಾಗಿ, ಶುಭ ದಿನವಾದ ಇಂದು ಲಕ್ಷ್ಮಿಯನ್ನು ನಿಮ್ಮ ಮನೆಯೊಳಗೆ ಕರೆತರಲು ಹಿಂದೇಟು ಹಾಕಬೇಡಿ. ಇಂದು ಚಿನ್ನದ ದರ (Gold Rate) 1,280 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 800 ರೂ. ಇಳಿಕೆಯಾಗಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 48,390 ರೂ. ಇದ್ದುದು 47,200 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,790 ರೂ. ಇದ್ದುದು 51,510 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,550 ರೂ. ಮುಂಬೈ- 47,200 ರೂ, ದೆಹಲಿ- 47,200 ರೂ, ಕೊಲ್ಕತ್ತಾ- 47,200 ರೂ, ಬೆಂಗಳೂರು- 47,200 ರೂ, ಹೈದರಾಬಾದ್- 47,200 ರೂ, ಕೇರಳ- 47,200 ರೂ, ಪುಣೆ- 47,280 ರೂ, ಮಂಗಳೂರು- 47,200 ರೂ, ಮೈಸೂರು- 47,200 ರೂ. ಇದೆ.
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,970 ರೂ, ಮುಂಬೈ- 51,510 ರೂ, ದೆಹಲಿ- 51,510 ರೂ, ಕೊಲ್ಕತ್ತಾ- 51,510 ರೂ, ಬೆಂಗಳೂರು- 51,510 ರೂ, ಹೈದರಾಬಾದ್- 51,510 ರೂ, ಕೇರಳ- 51,510 ರೂ, ಪುಣೆ- 51,590 ರೂ, ಮಂಗಳೂರು- 51,510 ರೂ, ಮೈಸೂರು- 51,510 ರೂ. ಆಗಿದೆ.
ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಭಾರೀ ಕುಸಿತವಾಗಿದೆ. ಬೆಳ್ಳಿ ಬೆಲೆ (Silver Price) ಕೂಡ ಇಳಿಕೆಯಾಗಿದೆ.
ಇಂದಿನ ಬೆಳ್ಳಿಯ ದರ: ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 800 ರೂ. ಇಳಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 63,500 ರೂ. ಇದ್ದುದು ಇಂದು 62,700 ರೂ.ಗೆ ಇಳಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,600 ರೂ, ಮೈಸೂರು- 67,600 ರೂ., ಮಂಗಳೂರು- 67,600 ರೂ., ಮುಂಬೈ- 62,700 ರೂ, ಚೆನ್ನೈ- 67,600 ರೂ, ದೆಹಲಿ- 62,700 ರೂ, ಹೈದರಾಬಾದ್- 67,600 ರೂ, ಕೊಲ್ಕತ್ತಾ- 62,700 ರೂ. ಆಗಿದೆ.
ಚಿನ್ನದ ಬೆಲೆಯ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ಮಾಡಲು ಮತ್ತು ಖರೀದಿ ಮಾಡಲು ಈ ದಿನ ಬಹಳ ಮಂಗಳಕರವಾದ ದಿನ. ಈ ದಿನದಂದು ಜನರು ವ್ಯಾಪಾರ, ಗೃಹಪ್ರವೇಶ, ಹೊಸ ಮನೆ-ಕಾರು, ಚಿನ್ನ ಮತ್ತು ಬೆಳ್ಳಿ ಖರೀದಿಯಂತಹ ಶುಭ ಕಾರ್ಯಗಳನ್ನು ಮಾಡುತ್ತಾರೆ. ಇದರಿಂದ ವರ್ಷವಿಡೀ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಅಕ್ಷಯ ತೃತೀಯದ ದಿನ ವಿಶೇಷವಾಗಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.