Gold Price Today: ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ. ಬೆಳ್ಳಿ ದರ ಇಂದು 350 ರೂ. ಹೆಚ್ಚಳ

| Updated By: ಸುಷ್ಮಾ ಚಕ್ರೆ

Updated on: Jun 18, 2022 | 6:22 AM

Silver Price Today: ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿ ಇಂದು 350 ರೂ. ಏರಿಕೆಯಾಗಿದೆ. ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 51,870 ರೂ. ಇದ್ದುದು 52,100 ರೂ. ಆಗಿದೆ.

Gold Price Today: ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ. ಬೆಳ್ಳಿ ದರ ಇಂದು 350 ರೂ. ಹೆಚ್ಚಳ
ಚಿನ್ನದ ಬೆಲೆ
Follow us on

ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇರುತ್ತದೆ. ಭಾರತದಲ್ಲಿ ಚಿನ್ನದ ಬೆಲೆ (Gold Rate) ಇಂದು 230 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 350 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,550 ರೂ. ಇದ್ದುದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,870 ರೂ. ಇದ್ದುದು 52,100 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,850 ರೂ. ಮುಂಬೈ- 47,750 ರೂ, ದೆಹಲಿ- 47,780 ರೂ, ಕೊಲ್ಕತ್ತಾ- 47,780 ರೂ, ಬೆಂಗಳೂರು- 47,780 ರೂ, ಹೈದರಾಬಾದ್- 47,750 ರೂ, ಕೇರಳ- 47,750 ರೂ, ಪುಣೆ- 47,820 ರೂ, ಮಂಗಳೂರು- 47,780 ರೂ, ಮೈಸೂರು- 47,780 ರೂ. ಇದೆ.

ಇದನ್ನೂ ಓದಿ: Gold Price Today: ಭಾರತದ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿ ದರ 200 ರೂ. ಏರಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,180 ರೂ, ಮುಂಬೈ- 52,100 ರೂ, ದೆಹಲಿ- 52,120 ರೂ, ಕೊಲ್ಕತ್ತಾ- 52,100 ರೂ, ಬೆಂಗಳೂರು- 52,120 ರೂ, ಹೈದರಾಬಾದ್- 52,100 ರೂ, ಕೇರಳ- 52,100 ರೂ, ಪುಣೆ- 52,150 ರೂ, ಮಂಗಳೂರು- 52,100 ರೂ, ಮೈಸೂರು- 52,100 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ಇಂದು 350 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 61,150 ರೂ. ಇದ್ದುದು ಇಂದು 61,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 61,500 ರೂ, ಚೆನ್ನೈ- 66,000 ರೂ, ದೆಹಲಿ- 61,500 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 61,500 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ