Gold Price Today: ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರ ಒಂದೇ ದಿನ 1,150 ರೂ. ಹೆಚ್ಚಳ

Silver Price Today: ಬೆಳ್ಳಿ ಬೆಲೆಯಲ್ಲಿ ಇಂದು ಬರೋಬ್ಬರಿ 1,150 ರೂ. ಏರಿಕೆಯಾಗಿದೆ. ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 51,440 ರೂ. ಇದ್ದುದು 51,870 ರೂ. ಆಗಿದೆ.

Gold Price Today: ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರ ಒಂದೇ ದಿನ 1,150 ರೂ. ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Jun 17, 2022 | 5:53 AM

ಬೆಂಗಳೂರು: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇರುತ್ತದೆ. ಭಾರತದಲ್ಲಿ ನಿನ್ನೆ ಚಿನ್ನದ ಬೆಲೆ (Gold Rate) 270 ರೂ. ಕುಸಿತವಾಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ 430 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 1,150 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,150 ರೂ. ಇದ್ದುದು 47,550 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,440 ರೂ. ಇದ್ದುದು 51,870 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,650 ರೂ. ಮುಂಬೈ- 47,550 ರೂ, ದೆಹಲಿ- 47,580 ರೂ, ಕೊಲ್ಕತ್ತಾ- 47,580 ರೂ, ಬೆಂಗಳೂರು- 47,580 ರೂ, ಹೈದರಾಬಾದ್- 47,580 ರೂ, ಕೇರಳ- 47,580 ರೂ, ಪುಣೆ- 47,620 ರೂ, ಮಂಗಳೂರು- 47,580 ರೂ, ಮೈಸೂರು- 47,580 ರೂ. ಇದೆ.

ಇದನ್ನೂ ಓದಿ: Gold Price Today: ಒಂದೇ ದಿನದಲ್ಲಿ ಚಿನ್ನದ ಬೆಲೆ 1,050 ರೂ. ಕುಸಿತ; ಬೆಳ್ಳಿ ದರ 1,700 ರೂ. ಇಳಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 51,980 ರೂ, ಮುಂಬೈ- 51,870 ರೂ, ದೆಹಲಿ- 51,900 ರೂ, ಕೊಲ್ಕತ್ತಾ- 51,900 ರೂ, ಬೆಂಗಳೂರು- 51,900 ರೂ, ಹೈದರಾಬಾದ್- 51,870 ರೂ, ಕೇರಳ- 51,870 ರೂ, ಪುಣೆ- 51,940 ರೂ, ಮಂಗಳೂರು- 51,900 ರೂ, ಮೈಸೂರು- 51,900 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ಇಂದು ಬರೋಬ್ಬರಿ 1,150 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,000 ರೂ. ಇದ್ದುದು ಇಂದು 61,150 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 61,150 ರೂ, ಚೆನ್ನೈ- 66,000 ರೂ, ದೆಹಲಿ- 61,150 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 61,150 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ