Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೊತ್ತಾ ಆಭರಣಗಳ ಬೆಲೆ?

| Updated By: sandhya thejappa

Updated on: Dec 04, 2021 | 9:01 AM

Gold Rate Today: ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,600 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,46,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಬದಲಾವಣೆಯಾಗಿಲ್ಲ.

Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೊತ್ತಾ ಆಭರಣಗಳ ಬೆಲೆ?
ಚಿನ್ನಾಭರಣ
Follow us on

Gold and Silver Price Today | ಬೆಂಗಳೂರು: ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸಬೇಕು ಅಂದುಕೊಂಡಿದ್ದರೆ ಈ ಕುರಿತಾಗಿ ಯೋಚಿಸುವ ಸಮಯವಿದು. ಚಿನ್ನ ದರ ಇಂದು ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಬೆಳ್ಳಿಯ ದರ ಇಳಿಕೆಯತ್ತ ಸಾಗಿದೆ. ಆಭರಣ ಖರೀದಿಸಬೇಕು ಎನ್ನುವವರು ಇಂದಿನ ದರ ವಿವರ ಪರಿಶೀಲಿಸಿ.  ಇಂದು ಶುಕ್ರವಾರ (ಡಿಸೆಂಬರ್​ 3) ಚಿನ್ನದ ದರದಲ್ಲಿ (Gold price) ಯಾವುದೇ ಬದಲಾವಣೆಯಾಗಿಲ್ಲ. ಅಂದರೆ ಚಿನ್ನದ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಬೆಳ್ಳಿ ದರದಲ್ಲಿ (Silver Price) ಇಳಿಕೆಯಾಗಿದೆ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಇಂದು ಚಿನ್ನದ ದರ ಸ್ಥಿರವಾಗಿದೆ. 

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price)
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,600 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,46,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಬದಲಾವಣೆಯಾಗಿಲ್ಲ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,6500 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,86,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಬದಲಾವಣೆಯಾಗಿಲ್ಲ. ಅಂದರೆ ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಬೆಳ್ಳಿ ದರದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 60,700 ರೂಪಾಯಿ ದಾಖಲಾಗಿದೆ. ಸುಮಾರು 1000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price)
ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,670 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,46,700 ರೂಪಾಯಿ ನಿಗದಿಯಾಗಿದೆ. ಸುಮಾರು 2,100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,730 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,87,300 ರೂಪಾಯಿ ನಿಗದಿಯಾಗಿದೆ. ಸುಮಾರು 2300 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 65,000 ರೂಪಾಯಿ ನಿಗದಿಯಾಗಿದೆ. ಸುಮಾರು 1,300 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಹೈದರಾಬಾದ್​ನಲ್ಲಿ ಚಿನ್ನ, ಬೆಳ್ಳಿ ದರ (Hyderabad Gold Price)
ಹೈದರಾಬಾದ್​ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,600 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,46,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,650 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,86,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರದಲ್ಲಿ ಇಂದು ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 65,000 ರೂಪಾಯಿ ನಿಗದಿಯಾಗಿದೆ. ಸುಮಾರು 1,300 ರೂಪಾಯಿಯಷ್ಟು ಇಳಿಕೆ ಆಗಿದೆ.

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ (Mumbai Gold price)
ಮುಂಬೈನಲ್ಲಿ ಇಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,580 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,65,800 ರೂಪಾಯಿ ನಿಗದಿಯಾಗಿದೆ. ಸುಮಾರು 5,400 ರೂಪಾಯಿಯಷ್ಟು ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,580 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,75,800 ರೂಪಾಯಿ ನಿಗದಿಯಾಗಿದೆ. ಸುಮಾರು 5,400 ರೂಪಾಯಿಯಷ್ಟು ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದ್ದು, ಕೆಜಿ ಬೆಳ್ಳಿಗೆ 60,700 ರೂಪಾಯಿ ನಿಗದಿಯಾಗಿದೆ. ಸುಮಾರು 1000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ:

Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ

Gold Price Today: ಚಿನ್ನ, ಬೆಳ್ಳಿ ದರ ಇಳಿಕೆ; ಡಿಸೆಂಬರ್​ ತಿಂಗಳ ಮೊದಲ ದಿನ ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​

Published On - 7:33 am, Fri, 3 December 21