ಆಭರಣ ಎಷ್ಟಿದ್ದರೂ ಮತ್ತೆ ಮತ್ತೆ ಖರೀದಿಸಬೇಕು ಅನ್ನೊ ವ್ಯಾಮೋಹ ಹಲವರಿಗಿದೆ. ಹಾಗಂತ ಇದು ತಪ್ಪಲ್ಲ. ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಹೆಚ್ಚು ಆಸಕ್ತಿ, ಆಸೆ ಇರುತ್ತೆ. ಕೆಲವರಿಗೆ ಆಭರಣ ಕೊಳ್ಳುವ ಸಾಮರ್ಥ್ಯವಿದ್ದರೂ ಆಭರಣದ ಬಗ್ಗೆ ಹೆಚ್ಚು ಆಸಕ್ತಿ ಇರಲ್ಲ. ಇನ್ನು ಕೆಲವರಿಗೆ ಮಾರುಕಟ್ಟೆಯಲ್ಲಿ ಬರುವ ನಾನಾ ವಿನ್ಯಾಸಗಳು ಕಣ್ಣಿಗೆ ಬಿದ್ದರೆ ಅದನ್ನ ಖರೀದಿಸಿ ಬಿಡ್ತಾರೆ. ಅದೇನೆಯಿರಲಿ, ಇಂದು (ಜ.3) ಆಭರಣ ಕೊಳ್ಳುವವರಿಗೆ ಆಭರಣದ ದರ ಎಷ್ಟಿದೆ ಅಂತ ಇಲ್ಲಿ ತಿಳಿಸಿದ್ದೇವೆ. ಯಾವ ಯಾವ ನಗರಗಳಲ್ಲಿ ಆಭರಣ ದರ ಏರಿಳಿತವಾಗಿದೆ ಅಂತ ಗಮನಿಸಿ.
ಬೆಂಗಳೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ?
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ (Gold Price) ನಿನ್ನೆಗಿಂತ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,460 ರೂ. ಇದೆ. ಇದೇ 100 ಗ್ರಾಂ ಚಿನ್ನಕ್ಕೆ 4,54,600 ರೂ. ನಿಗದಿಯಾಗಿದೆ. ನಿನ್ನೆ ಇದೇ 10 ಗ್ರಾಂ ಚಿನ್ನಕ್ಕೆ 45,450 ರೂಪಾಯಿ ಇತ್ತು. ಅಂದರೆ ಇವತ್ತು 10 ಗ್ರಾಂ ಚಿನ್ನಕ್ಕೆ ಕೇವಲ 10 ರೂ. ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇಂದಿನ ದರ 49,600 ರೂ. ಇದ್ದರೆ. 100 ಗ್ರಾಂಗೆ 4,96,600 ರೂಪಾಯಿ ಆಗಿದೆ. ಈ ಚಿನ್ನಕ್ಕೂ ನಿನ್ನೆಗಿಂತ 10 ಗ್ರಾಂಗೆ 10 ರೂಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಗೆ (Silver Price) ಇಂದು 62,700 ರೂಪಾಯಿ ಇದೆ.
ದೆಹಲಿಯಲ್ಲಿ ಆಭರಣದ ಬೆಲೆ ಹೀಗಿದೆ
ದೆಹಲಿಯಲ್ಲೂ 10 ಗ್ರಾಂ ಚಿನ್ನಕ್ಕೆ 10 ರೂ. ಏರಿಕೆಯಾಗಿದೆ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,610 ರೂ. ನಿಗದಿಯಾಗಿದ್ದು, 100 ಗ್ರಾಂಗೆ 4,76,100 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂಗೆ ದೆಹಲಿಯಲ್ಲಿ ಇಂದು 51,940 ರೂಪಾಯಿ ಇದೆ. ಇದೇ 100 ಗ್ರಾಂ ಚಿನ್ನಕ್ಕೆ 5,19,400 ರೂ. ಆಗಿದೆ. ಇಲ್ಲಿ ಒಂದು ಕೆಜಿ ಬೆಳ್ಳಿಗೆ 62,700 ರೂ. ಇದೆ. ನಿನ್ನೆ ಕೂಡಾ ಇಷ್ಟೆ ದರ ನಿಗದಿಯಾಗಿತ್ತು.
ಹೈದರಾಬಾದ್ನಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ
22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,460 ರೂ. ಇದ್ದರೆ 100 ಗ್ರಾಂಗೆ 4,54,600 ರೂಪಾಯಿ ದರ ಇದೆ. ಇನ್ನು 24 ಕ್ಯಾರೆಟ್ 10 ಗ್ರಾಂಗೆ 49,600 ರೂ. ಮತ್ತು 100 ಗ್ರಾಂಗೆ 4,96,600 ರೂಪಾಯಿ ಇದೆ. ಹೈದರಾಬಾದ್ನಲ್ಲಿ ಇಂದು ಒಂದು ಕೆಜಿ ಬೆಳ್ಳಿಗೆ 66,600 ರೂಪಾಯಿ ಇದೆ.
ಇದನ್ನೂ ಓದಿ
ಉಚಿತ ಲಸಿಕೆ: ಇಂದಿನಿಂದ ರಾಜ್ಯಾದ್ಯಂತ ಶಾಲೆ ಕಾಲೇಜುಗಳಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊವಿಡ್ ಲಸಿಕೆ ಅಭಿಯಾನ
ಕಿಡ್ನಿ ಸಮಸ್ಯೆ ಎದುರಾಗುವ ಮೊದಲೇ ಮುನ್ನೆಚ್ಚರಿಕೆ ವಹಿಸಿ; ಆರೋಗ್ಯ ಕಾಳಜಿಗಾಗಿ ಫೋಟೋ ಸಹಿತ ಮಾಹಿತಿ ಇದೆ ನೋಡಿ
Published On - 8:47 am, Mon, 3 January 22