Gold Rate Today Bangalore: ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿಕೆ; ಚಿನ್ನದ ದರವೂ ಹೆಚ್ಚಳ

Bullion Market 2025 October 12th: ಈ ವಾರಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಣನೀಯವಾಗಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಂತೂ ಹೊಸ ಎತ್ತರಕ್ಕೆ ಹೋಗಿದೆ. ಆಭರಣ ಚಿನ್ನದ ಬೆಲೆ 11,390 ರೂಗೆ ಏರಿದೆ. ಇದು ಸಾರ್ವಕಾಲಿಕ ಗರಿಷ್ಠ ಬೆಲೆ ಮಟ್ಟ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ದಾಖಲೆಯ 177 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ 187 ರೂ ಆಗಿದೆ.

Gold Rate Today Bangalore: ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿಕೆ; ಚಿನ್ನದ ದರವೂ ಹೆಚ್ಚಳ
ಚಿನ್ನ ಮತ್ತು ಬೆಳ್ಳಿ

Updated on: Oct 12, 2025 | 4:52 AM

ಬೆಂಗಳೂರು, ಅಕ್ಟೋಬರ್ 12: ಚಿನ್ನ ಮತ್ತು ಬೆಳ್ಳಿ ಬೆಲೆಗಳ ದಾಖಲೆ ಏರಿಕೆ ಮುಂದುವರಿಯುತ್ತಲೇ ಇದೆ. ಬೆಳ್ಳಿ ಬೆಲೆಯಂತೂ (silver rates) ಎಗ್ಗಿಲ್ಲದೇ ಏರುತ್ತಿದೆ. ದಾಖಲೆಯ 177 ರೂ ಬೆಲೆ ಮುಟ್ಟಿದೆ. ಚೆನ್ನೈ ಮೊದಲಾದ ಕೆಲ ನಗರಗಳಲ್ಲಂತೂ 187 ರೂ ಬೆಲೆ ತಲುಪಿದ್ದು ಕೆಲವೇ ದಿನಗಳಲ್ಲಿ 200 ರೂ ಗಡಿ ದಾಟಿದರೆ ಅಚ್ಚರಿ ಎನಿಸುವುದಿಲ್ಲ. ಅಪರಂಜಿ ಚಿನ್ನದ ಬೆಲೆ 12,400 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,13,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,24,260 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,13,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 17,700 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 18,700 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,426 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,390 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,319 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 177 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,426 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,390 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 177 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,390 ರೂ
  • ಚೆನ್ನೈ: 11,390 ರೂ
  • ಮುಂಬೈ: 11,390 ರೂ
  • ದೆಹಲಿ: 11,405 ರೂ
  • ಕೋಲ್ಕತಾ: 11,390 ರೂ
  • ಕೇರಳ: 11,390 ರೂ
  • ಅಹ್ಮದಾಬಾದ್: 11,395 ರೂ
  • ಜೈಪುರ್: 11,405 ರೂ
  • ಲಕ್ನೋ: 11,405 ರೂ
  • ಭುವನೇಶ್ವರ್: 11,390 ರೂ

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ರದ್ದುಗೊಳಿಸಿದರೆ ಪರಿಣಾಮಗಳೇನು? ಕ್ರೆಡಿಟ್ ಸ್ಕೋರ್ ಕಡಿಮೆಗೊಳ್ಳುತ್ತಾ? ಇಲ್ಲಿದೆ ಮಾಹಿತಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 532 ರಿಂಗಿಟ್ (11,173 ರುಪಾಯಿ)
  • ದುಬೈ: 444.25 ಡಿರಾಮ್ (10,732 ರುಪಾಯಿ)
  • ಅಮೆರಿಕ: 124.50 ಡಾಲರ್ (11,047 ರುಪಾಯಿ)
  • ಸಿಂಗಾಪುರ: 162 ಸಿಂಗಾಪುರ್ ಡಾಲರ್ (11,083 ರುಪಾಯಿ)
  • ಕತಾರ್: 448 ಕತಾರಿ ರಿಯಾಲ್ (10,905 ರೂ)
  • ಸೌದಿ ಅರೇಬಿಯಾ: 456 ಸೌದಿ ರಿಯಾಲ್ (10,787 ರುಪಾಯಿ)
  • ಓಮನ್: 47.20 ಒಮಾನಿ ರಿಯಾಲ್ (10,878 ರುಪಾಯಿ)
  • ಕುವೇತ್: 36.24 ಕುವೇತಿ ದಿನಾರ್ (10,487 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 177 ರೂ
  • ಚೆನ್ನೈ: 187 ರೂ
  • ಮುಂಬೈ: 177 ರೂ
  • ದೆಹಲಿ: 177 ರೂ
  • ಕೋಲ್ಕತಾ: 177 ರೂ
  • ಕೇರಳ: 187 ರೂ
  • ಅಹ್ಮದಾಬಾದ್: 177 ರೂ
  • ಜೈಪುರ್: 177 ರೂ
  • ಲಕ್ನೋ: 177 ರೂ
  • ಭುವನೇಶ್ವರ್: 187 ರೂ
  • ಪುಣೆ: 177

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us