Gold Rate Today Bangalore: ಬೆಳ್ಳಿ ಬೆಲೆ ಮತ್ತೆ ದಾಖಲೆ; ಇಲ್ಲಿದೆ ಚಿನ್ನ, ಬೆಳ್ಳಿ ದರಪಟ್ಟಿ

Bullion Market 2025 September 14th: ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 10 ರೂ ಕಡಿಮೆ ಆದರೆ, ಬೆಳ್ಳಿ ಬೆಲೆ 1 ರೂ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 10,200 ರೂನಿಂದ 10,190 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 11,117 ರೂ ಆಗಿದೆ. ಬೆಂಗಳೂರು, ಮುಂಬೈ ಮೊದಲಾದ ಕಡೆ ಬೆಳ್ಳಿ ಬೆಲೆ 133 ರೂಗೆ ಏರಿದರೆ, ಚೆನ್ನೈ ಮೊದಲಾದೆಡೆ ಬೆಲೆ 143 ರೂಗೆ ಹೆಚ್ಚಿದೆ.

Gold Rate Today Bangalore: ಬೆಳ್ಳಿ ಬೆಲೆ ಮತ್ತೆ ದಾಖಲೆ; ಇಲ್ಲಿದೆ ಚಿನ್ನ, ಬೆಳ್ಳಿ ದರಪಟ್ಟಿ
ಚಿನ್ನ

Updated on: Sep 14, 2025 | 8:36 AM

ಬೆಂಗಳೂರು, ಸೆಪ್ಟೆಂಬರ್ 14: ಭಾರತದಲ್ಲಿ ಬೆಳ್ಳಿ ಬೆಲೆ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. ಚೆನ್ನೈ ಮೊದಲಾದ ಕಡೆ ಅದರ ಬೆಲೆ (silver rates) ಗ್ರಾಮ್​ಗೆ ಬರೋಬ್ಬರಿ 143 ರೂ ಮುಟ್ಟಿದೆ. ವರ್ಷದ ಹಿಂದಿನದಕ್ಕೆ ಹೋಲಿಸಿದರೆ ಇದರ ಬೆಲೆ ಬರೋಬ್ಬರಿ ಶೇ. 150ರಷ್ಟು ಏರಿದೆ. ಚಿನ್ನದ ಬೆಲೆಯೂ ಮೊನ್ನೆ ಸಾರ್ವಕಾಲಿಕ ಗರಿಷ್ಠ ದಾಖಲೆ ಸ್ಥಾಪಿಸಿದೆ. ವಾರಾಂತ್ಯದಲ್ಲಿ ಚಿನ್ನದ ಬೆಲೆ ಕಡಿಮೆ ಆದರೆ, ಬೆಳ್ಳಿ ಬೆಲೆಯ ಏರಿಕೆ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,01,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,11,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 13,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,01,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 13,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 14,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 14ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,11,170 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 83,370 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,330 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,11,170 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,330 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 1,01,900 ರೂ
  • ಚೆನ್ನೈ: 1,01,900 ರೂ
  • ಮುಂಬೈ: 1,01,900 ರೂ
  • ದೆಹಲಿ: 1,02,050 ರೂ
  • ಕೋಲ್ಕತಾ: 1,01,900 ರೂ
  • ಕೇರಳ: 1,01,900 ರೂ
  • ಅಹ್ಮದಾಬಾದ್: 1,01,950 ರೂ
  • ಜೈಪುರ್: 1,02,050 ರೂ
  • ಲಕ್ನೋ: 1,02,050 ರೂ
  • ಭುವನೇಶ್ವರ್: 1,01,900 ರೂ

ಇದನ್ನೂ ಓದಿ: ಭಾರತದ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 2.07ಕ್ಕೆ ಏರಿಕೆ; ತಾಳಿಕೆ ಮಿತಿಗಿಂತ ಬಹಳ ಕಡಿಮೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,750 ರಿಂಗಿಟ್ (99,720 ರುಪಾಯಿ)
  • ದುಬೈ: 4,072.50 ಡಿರಾಮ್ (97,880 ರುಪಾಯಿ)
  • ಅಮೆರಿಕ: 1,135 ಡಾಲರ್ (1,00,190 ರುಪಾಯಿ)
  • ಸಿಂಗಾಪುರ: 1,449 ಸಿಂಗಾಪುರ್ ಡಾಲರ್ (99,730 ರುಪಾಯಿ)
  • ಕತಾರ್: 4,075 ಕತಾರಿ ರಿಯಾಲ್ (98,800 ರೂ)
  • ಸೌದಿ ಅರೇಬಿಯಾ: 4,140 ಸೌದಿ ರಿಯಾಲ್ (97,420 ರುಪಾಯಿ)
  • ಓಮನ್: 430 ಒಮಾನಿ ರಿಯಾಲ್ (98,590 ರುಪಾಯಿ)
  • ಕುವೇತ್: 330.30 ಕುವೇತಿ ದಿನಾರ್ (95,490 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 13,300 ರೂ
  • ಚೆನ್ನೈ: 14,300 ರೂ
  • ಮುಂಬೈ: 13,300 ರೂ
  • ದೆಹಲಿ: 13,300 ರೂ
  • ಕೋಲ್ಕತಾ: 13,300 ರೂ
  • ಕೇರಳ: 14,300 ರೂ
  • ಅಹ್ಮದಾಬಾದ್: 13,300 ರೂ
  • ಜೈಪುರ್: 13,300 ರೂ
  • ಲಕ್ನೋ: 13,300 ರೂ
  • ಭುವನೇಶ್ವರ್: 14,300 ರೂ
  • ಪುಣೆ: 13,300

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us