Gold Rate Today Bangalore: ಸತತ ಕುಸಿತದ ಬಳಿಕ ಭರ್ಜರಿ ಏರಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ

Bullion Market 2025 July 1st: ಸೋಮವಾರ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇವತ್ತು ಮಂಗಳವಾರ ಭಾರೀ ಹೆಚ್ಚಳ ಕಂಡಿವೆ. ಆಭರಣ ಚಿನ್ನದ ಬೆಲೆ 9,000 ರೂ ದಾಟಿ 9,020 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 9,840 ರೂಗೆ ಏರಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ ಮತ್ತೆ 110 ರೂ ಮುಟ್ಟಿದೆ, ತಮಿಳುನಾಡು ಕೇರಳ ಇತ್ಯಾದಿ ಕಡೆ ಬೆಲೆ 120 ರೂ ಆಗಿದೆ.

Gold Rate Today Bangalore: ಸತತ ಕುಸಿತದ ಬಳಿಕ ಭರ್ಜರಿ ಏರಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ
ಚಿನ್ನ

Updated on: Jul 01, 2025 | 11:01 AM

ಬೆಂಗಳೂರು, ಜುಲೈ 1: ಕಳೆದ ವಾರದಿಂದ ಸತತವಾಗಿ ಇಳಿಯುತ್ತಾ ಬಂದಿದ್ದ ಚಿನ್ನದ ಬೆಲೆ (Gold rate today) ಇವತ್ತು ಮಂಗಳವಾರ ಭರ್ಜರಿಯಾಗಿ ಹೆಚ್ಚಾಗಿದೆ. ಆಭರಣ ಚಿನ್ನದ ಬೆಲೆ ಗ್ರಾಮ್​​ಗೆ ಬರೋಬ್ಬರಿ 105 ರೂಗಳಷ್ಟು ಹೆಚ್ಚಾಗಿದೆ. ಅದರ ಬೆಲೆ 9,000 ರೂ ಗಡಿ ದಾಟಿದೆ. ಬೆಳ್ಳಿ ಬೆಲೆ ಇನ್ನೂ ದೊಡ್ಡ ಏರಿಕೆ ಕಂಡಿದೆ. ಗ್ರಾಮ್​​ಗೆ 2 ರೂ 30 ಪೈಸೆಯಷ್ಟು ಬೆಲೆ ಏರಿಕೆ ಕಂಡಿದೆ ಬೆಳ್ಳಿ. ಬೆಂಗಳೂರಿನಲ್ಲಿ ಅದರ ಬೆಲೆ 110 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,400 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,000 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 1ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,200 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,400 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,800 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,200 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,400 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,200 ರೂ
  • ಚೆನ್ನೈ: 90,200 ರೂ
  • ಮುಂಬೈ: 90,200 ರೂ
  • ದೆಹಲಿ: 90,350 ರೂ
  • ಕೋಲ್ಕತಾ: 90,200 ರೂ
  • ಕೇರಳ: 90,200 ರೂ
  • ಅಹ್ಮದಾಬಾದ್: 90,250 ರೂ
  • ಜೈಪುರ್: 90,350 ರೂ
  • ಲಕ್ನೋ: 90,350 ರೂ
  • ಭುವನೇಶ್ವರ್: 90,200 ರೂ

ಇದನ್ನೂ ಓದಿ: ಜುಲೈನಲ್ಲಿ ಆಧಾರ್, ಪ್ಯಾನ್, ಎಟಿಎಂ, ಕ್ರೆಡಿಟ್ ಕಾರ್ಡ್ ಇತ್ಯಾದಿಯಲ್ಲಿ ನಿಯಮ ಬದಲಾವಣೆಗಳಿವೆ, ಗಮನಿಸಿ

ಇದನ್ನೂ ಓದಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,380 ರಿಂಗಿಟ್ (89,440 ರುಪಾಯಿ)
  • ದುಬೈ: 3,667.50 ಡಿರಾಮ್ (85,560 ರುಪಾಯಿ)
  • ಅಮೆರಿಕ: 1,025 ಡಾಲರ್ (87,770 ರುಪಾಯಿ)
  • ಸಿಂಗಾಪುರ: 1,312 ಸಿಂಗಾಪುರ್ ಡಾಲರ್ (88,300 ರುಪಾಯಿ)
  • ಕತಾರ್: 3,695 ಕತಾರಿ ರಿಯಾಲ್ (86,800 ರೂ)
  • ಸೌದಿ ಅರೇಬಿಯಾ: 3,760 ಸೌದಿ ರಿಯಾಲ್ (85,840 ರುಪಾಯಿ)
  • ಓಮನ್: 389 ಒಮಾನಿ ರಿಯಾಲ್ (86,500 ರುಪಾಯಿ)
  • ಕುವೇತ್: 299 ಕುವೇತಿ ದಿನಾರ್ (83,800 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,000 ರೂ
  • ಚೆನ್ನೈ: 12,000 ರೂ
  • ಮುಂಬೈ: 11,000 ರೂ
  • ದೆಹಲಿ: 11,000 ರೂ
  • ಕೋಲ್ಕತಾ: 11,000 ರೂ
  • ಕೇರಳ: 11,200 ರೂ
  • ಅಹ್ಮದಾಬಾದ್: 11,000 ರೂ
  • ಜೈಪುರ್: 11,000 ರೂ
  • ಲಕ್ನೋ: 11,000 ರೂ
  • ಭುವನೇಶ್ವರ್: 12,000 ರೂ
  • ಪುಣೆ: 11,000

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us