Gold Rate Today: ಸಿಕ್ಕಾಪಟ್ಟೆ ಕುಸಿದ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ಪಟ್ಟಿ

Bullion Market 2026 January 31st: ಚಿನ್ನ, ಬೆಳ್ಳಿ ಬೆಲೆಗಳು ಶನಿವಾರ ಗಣನೀಯವಾಗಿ ಇಳಿಕೆಗೊಂಡಿವೆ. ಚಿನ್ನದ ಬೆಲೆ 920 ರೂ ಇಳಿದರೆ, ಬೆಳ್ಳಿ ಬೆಲೆ 45 ರೂ ಕಡಿಮೆಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 15,640 ರೂನಿಂದ 14,720 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 16,058 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 350 ರೂಗೆ ತಗ್ಗಿದೆ. ಚೆನ್ನೈ ಮೊದಲಾದೆಡೆಯೂ 350 ರೂ ಇದೆ.

Gold Rate Today: ಸಿಕ್ಕಾಪಟ್ಟೆ ಕುಸಿದ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ಪಟ್ಟಿ
ಚಿನ್ನ

Updated on: Jan 31, 2026 | 11:45 AM

ಬೆಂಗಳೂರು, ಜನವರಿ 31: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಹಾಕುಸಿತ ಮುಂದುವರಿದಿದೆ. ನಿನ್ನೆ ಗ್ರಾಮ್​ಗೆ 800 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ (gold rates) ಇವತ್ತು ಶನಿವಾರ 920 ರೂಗಳಷ್ಟು ತಗ್ಗಿದೆ. ಎರಡು ದಿನದಲ್ಲಿ ಒಂದೂವರೆ ಸಾವಿರ ರೂಗೂ ಅಧಿಕದಷ್ಟು ಬೆಲೆ ಕಡಿಮೆ ಆಗಿದೆ. ವಿದೇಶಗಳಲ್ಲೂ ಅನೇಕ ಕಡೆ ಚಿನ್ನದ ಬೆಲೆ ಕುಸಿದಿದೆ. ಬೆಳ್ಳಿ ಬೆಲೆಯಂತೂ ಮಹಾ ಕುಸಿತ ಕಂಡಿದೆ. ಒಂದೇ ದಿನ 45 ರೂಗಳಷ್ಟು ಬೆಲೆ ಇಳಿಕೆ ಆಗಿದೆ. ಎರಡು ದಿನದಲ್ಲಿ ಬರೋಬ್ಬರಿ 60 ರೂಗಳಷ್ಟು ತಗ್ಗಿದೆ ಬೆಳ್ಳಿ ಬೆಲೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,47,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,60,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 35,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,47,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 35,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 35,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 31ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,058 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,720 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,044 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 350 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,058 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,720 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 350 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,720 ರೂ
  • ಚೆನ್ನೈ: 14,900 ರೂ
  • ಮುಂಬೈ: 14,720 ರೂ
  • ದೆಹಲಿ: 14,735 ರೂ
  • ಕೋಲ್ಕತಾ: 14,720 ರೂ
  • ಕೇರಳ: 14,720 ರೂ
  • ಅಹ್ಮದಾಬಾದ್: 14,725 ರೂ
  • ಜೈಪುರ್: 14,735 ರೂ
  • ಲಕ್ನೋ: 14,735 ರೂ
  • ಭುವನೇಶ್ವರ್: 14,720 ರೂ

ಇದನ್ನೂ ಓದಿ: ಈ ಡೇಂಜರಸ್ ಆ್ಯಪ್​ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು; ನಿಮ್ಮ ಫೋನ್​ನಲ್ಲಿ ಇವು ಇವೆಯಾ ಪರಿಶೀಲಿಸಿ…

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 655 ರಿಂಗಿಟ್ (15,236 ರುಪಾಯಿ)
  • ದುಬೈ: 546.75 ಡಿರಾಮ್ (13,649 ರುಪಾಯಿ)
  • ಅಮೆರಿಕ: 150 ಡಾಲರ್ (13,754 ರುಪಾಯಿ)
  • ಸಿಂಗಾಪುರ: 201.90 ಸಿಂಗಾಪುರ್ ಡಾಲರ್ (14,550 ರುಪಾಯಿ)
  • ಕತಾರ್: 555 ಕತಾರಿ ರಿಯಾಲ್ (13,964 ರೂ)
  • ಸೌದಿ ಅರೇಬಿಯಾ: 556 ಸೌದಿ ರಿಯಾಲ್ (13,596 ರುಪಾಯಿ)
  • ಓಮನ್: 59.60 ಒಮಾನಿ ರಿಯಾಲ್ (14,195 ರುಪಾಯಿ)
  • ಕುವೇತ್: 43.83 ಕುವೇತಿ ದಿನಾರ್ (11,188 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 350 ರೂ
  • ಚೆನ್ನೈ: 350 ರೂ
  • ಮುಂಬೈ: 350 ರೂ
  • ದೆಹಲಿ: 350 ರೂ
  • ಕೋಲ್ಕತಾ: 350 ರೂ
  • ಕೇರಳ: 350 ರೂ
  • ಅಹ್ಮದಾಬಾದ್: 350 ರೂ
  • ಜೈಪುರ್: 350 ರೂ
  • ಲಕ್ನೋ: 350 ರೂ
  • ಭುವನೇಶ್ವರ್: 350 ರೂ
  • ಪುಣೆ: 350

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us