Gold Rate Today: ಚಿನ್ನ, ಬೆಳ್ಳಿ ಬೆಲೆ ವಿದೇಶಗಳಲ್ಲಿ ಏರಿದರೂ ಭಾರತದಲ್ಲಿ ಇಳಿಕೆ

Bullion Market 2026 March 3rd: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಮಂಗಳವಾರ ಇಳಿಕೆಯಾಗಿವೆ. ಚಿನ್ನದ ಬೆಲೆ ಗ್ರಾಮ್​ಗೆ 45 ರೂ, ಬೆಳ್ಳಿ ಬೆಲೆ 20 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 15,585 ರೂಗೆ ಇಳಿದರೆ, 24 ಕ್ಯಾರಟ್ ಚಿನ್ನದ ಬೆಲೆ 17,002 ರೂಗೆ ಕುಸಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 295 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 315 ರೂ ಆಗಿದೆ.

Gold Rate Today: ಚಿನ್ನ, ಬೆಳ್ಳಿ ಬೆಲೆ ವಿದೇಶಗಳಲ್ಲಿ ಏರಿದರೂ ಭಾರತದಲ್ಲಿ ಇಳಿಕೆ
ಚಿನ್ನ

Updated on: Mar 03, 2026 | 11:13 AM

ಬೆಂಗಳೂರು, ಮಾರ್ಚ್ 3: ಇರಾನ್ ಯುದ್ಧದ ಪರಿಣಾಮ ವಿದೇಶಗಳಲ್ಲಿ ಭರ್ಜರಿ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ (Gold Rate) ಭಾರತದಲ್ಲಿ ಸತತ ಎರಡನೇ ಬಾರಿ ಇಳಿಕೆ ಕಂಡಿದೆ. ನಿನ್ನೆ ಸೋಮವಾರ 235 ರೂಗಳಷ್ಟು ಇಳಿಕೆ ಕಂಡಿದ್ದ ಸ್ವರ್ಣ ದರ ಇವತ್ತು ಮಂಗಳವಾರ 45 ರೂ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 17,000 ರೂ ಸಮೀಪಕ್ಕೆ ಇಳಿದಿದೆ. ಬೆಳ್ಳಿ ಬೆಲೆಯೂ ತಗ್ಗಿದೆ. ನಿನ್ನೆ 20 ರೂ ಹೆಚ್ಚಿದ್ದ ಬೆಳ್ಳಿ ಬೆಲೆ ಇವತ್ತು ಅಷ್ಟೇ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,55,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,70,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,55,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 31,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 3ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 17,002 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,585 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,752 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 17,002 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,585 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 15,585 ರೂ
  • ಚೆನ್ನೈ: 15,650 ರೂ
  • ಮುಂಬೈ: 15,585 ರೂ
  • ದೆಹಲಿ: 15,600 ರೂ
  • ಕೋಲ್ಕತಾ: 15,585 ರೂ
  • ಕೇರಳ: 15,585 ರೂ
  • ಅಹ್ಮದಾಬಾದ್: 15,590 ರೂ
  • ಜೈಪುರ್: 15,600 ರೂ
  • ಲಕ್ನೋ: 15,600 ರೂ
  • ಭುವನೇಶ್ವರ್: 15,585 ರೂ

ಇದನ್ನೂ ಓದಿ: ಇಪಿಎಫ್ ಅಕೌಂಟ್​ಗೆ ಜಮೆ ಆಗಲಿದೆ ಈ ವರ್ಷದ ಬಡ್ಡಿ ಹಣ; ಬ್ಯಾಲನ್ಸ್ ಹೇಗೆ ಪರಿಶೀಲಿಸುವುದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 637 ರಿಂಗಿಟ್ (14,845 ರುಪಾಯಿ)
  • ದುಬೈ: 590.25 ಡಿರಾಮ್ (14,748 ರುಪಾಯಿ)
  • ಅಮೆರಿಕ: 167 ಡಾಲರ್ (15,324 ರುಪಾಯಿ)
  • ಸಿಂಗಾಪುರ: 212 ಸಿಂಗಾಪುರ್ ಡಾಲರ್ (15,288 ರುಪಾಯಿ)
  • ಕತಾರ್: 588.50 ಕತಾರಿ ರಿಯಾಲ್ (14,811 ರೂ)
  • ಸೌದಿ ಅರೇಬಿಯಾ: 602 ಸೌದಿ ರಿಯಾಲ್ (14,719 ರುಪಾಯಿ)
  • ಓಮನ್: 62.85 ಒಮಾನಿ ರಿಯಾಲ್ (14,974 ರುಪಾಯಿ)
  • ಕುವೇತ್: 48.22 ಕುವೇತಿ ದಿನಾರ್ (14,475 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 295 ರೂ
  • ಚೆನ್ನೈ: 315 ರೂ
  • ಮುಂಬೈ: 295 ರೂ
  • ದೆಹಲಿ: 295 ರೂ
  • ಕೋಲ್ಕತಾ: 295 ರೂ
  • ಕೇರಳ: 315 ರೂ
  • ಅಹ್ಮದಾಬಾದ್: 295 ರೂ
  • ಜೈಪುರ್: 295 ರೂ
  • ಲಕ್ನೋ: 295 ರೂ
  • ಭುವನೇಶ್ವರ್: 315 ರೂ
  • ಪುಣೆ: 295

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us