Gold Rate Today Bangalore: 9,400 ರೂ ಗಡಿ ಮುಟ್ಟಿದ ಆಭರಣ ಚಿನ್ನದ ಬೆಲೆ

Bullion Market 2025 August 7th: ಇಂದು ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆಗೊಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ ಮೊದಲ ಬಾರಿಗೆ 9,400 ರೂ ಗಡಿ ಮುಟ್ಟಿದೆ. ನಿನ್ನೆ 9,380 ರೂ ಇದ್ದ ಇದರ ಬೆಲೆ ಇವತ್ತು 9,400 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10,233 ರೂನಿಂದ 10,255 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 117 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ ಬೆಲೆ 127 ರೂಗೆ ಏರಿದೆ.

Gold Rate Today Bangalore: 9,400 ರೂ ಗಡಿ ಮುಟ್ಟಿದ ಆಭರಣ ಚಿನ್ನದ ಬೆಲೆ
ಚಿನ್ನ

Updated on: Aug 07, 2025 | 10:30 AM

ಬೆಂಗಳೂರು, ಆಗಸ್ಟ್ 7: ಚಿನ್ನ, ಬೆಳ್ಳಿ ಬೆಲೆಗಳ ಏರಿಕೆ ಗುರುವಾರವೂ ಮುಂದುವರಿದಿದೆ. ನಿನ್ನೆಯಂತೆ ಇವತ್ತೂ ಅಲ್ಪ ಏರಿಕೆ ಕಂಡಿದೆ. ನಿನ್ನೆ 10 ರೂ ಹೆಚ್ಚಿದ್ದ ಸ್ವರ್ಣ ಬೆಲೆ (gold rate) ಇವತ್ತು 20 ರೂ ಏರಿಕೆಗೊಂಡಿದೆ. ಆಭರಣ ಚಿನ್ನದ ಬೆಲೆ 9,400 ರೂ ಗಡಿ ದಾಟಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಗ್ರಾಮ್​ಗೆ ಒಂದು ರೂ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 94,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,02,550 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 94,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,700 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 7ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 94,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,02,550 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 76,910 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 94,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,02,550 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 94,000 ರೂ
  • ಚೆನ್ನೈ: 94,000 ರೂ
  • ಮುಂಬೈ: 94,000 ರೂ
  • ದೆಹಲಿ: 94,150 ರೂ
  • ಕೋಲ್ಕತಾ: 94,000 ರೂ
  • ಕೇರಳ: 94,000 ರೂ
  • ಅಹ್ಮದಾಬಾದ್: 94,050 ರೂ
  • ಜೈಪುರ್: 94,150 ರೂ
  • ಲಕ್ನೋ: 94,150 ರೂ
  • ಭುವನೇಶ್ವರ್: 94,000 ರೂ

ಇದನ್ನೂ ಓದಿ: ಪಿಎಂ ಜನ್ ಧನ್ ಅಕೌಂಟ್, ಹೊಸದಾಗಿ ಕೆವೈಸಿ ಮಾಡಿಸಿ: ನಿಮ್ಮ ಊರಿಗೇ ಬಂದಿದೆ ಬ್ಯಾಂಕ್​ನ ಕ್ಯಾಂಪ್

ಇದನ್ನೂ ಓದಿ
ಷೇರು, ಚಿನ್ನದ ಮುಂದೆ ರಿಯಲ್ ಎಸ್ಟೇಟ್ ನಗಣ್ಯ?
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,430 ರಿಂಗಿಟ್ (91,860 ರುಪಾಯಿ)
  • ದುಬೈ: 3,762.50 ಡಿರಾಮ್ (89,840 ರುಪಾಯಿ)
  • ಅಮೆರಿಕ: 1,050 ಡಾಲರ್ (92,090 ರುಪಾಯಿ)
  • ಸಿಂಗಾಪುರ: 1,351 ಸಿಂಗಾಪುರ್ ಡಾಲರ್ (92,270 ರುಪಾಯಿ)
  • ಕತಾರ್: 3,790 ಕತಾರಿ ರಿಯಾಲ್ (91,200 ರೂ)
  • ಸೌದಿ ಅರೇಬಿಯಾ: 3,850 ಸೌದಿ ರಿಯಾಲ್ (89,990 ರುಪಾಯಿ)
  • ಓಮನ್: 400 ಒಮಾನಿ ರಿಯಾಲ್ (91,110 ರುಪಾಯಿ)
  • ಕುವೇತ್: 307.20 ಕುವೇತಿ ದಿನಾರ್ (88,200 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,700 ರೂ
  • ಚೆನ್ನೈ: 12,700 ರೂ
  • ಮುಂಬೈ: 11,700 ರೂ
  • ದೆಹಲಿ: 11,700 ರೂ
  • ಕೋಲ್ಕತಾ: 11,700 ರೂ
  • ಕೇರಳ: 12,700 ರೂ
  • ಅಹ್ಮದಾಬಾದ್: 11,700 ರೂ
  • ಜೈಪುರ್: 11,700 ರೂ
  • ಲಕ್ನೋ: 11,700 ರೂ
  • ಭುವನೇಶ್ವರ್: 12,700 ರೂ
  • ಪುಣೆ: 11,700

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us