Gold Silver Price on 31 August: ಭಾರತದಲ್ಲಿ ಚಿನ್ನದ ಬೆಲೆ ಗ್ರಾಂಗೆ 30 ರೂನಷ್ಟು ಏರಿಕೆ; ದೇಶ ವಿದೇಶಗಳಲ್ಲಿ ಇವತ್ತಿನ ಚಿನ್ನ, ಬೆಳ್ಳಿ ದರ ಪಟ್ಟಿ

Bullion Market 2023, August 31st: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,000 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 77.60 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 31 August: ಭಾರತದಲ್ಲಿ ಚಿನ್ನದ ಬೆಲೆ ಗ್ರಾಂಗೆ 30 ರೂನಷ್ಟು ಏರಿಕೆ; ದೇಶ ವಿದೇಶಗಳಲ್ಲಿ ಇವತ್ತಿನ ಚಿನ್ನ, ಬೆಳ್ಳಿ ದರ ಪಟ್ಟಿ
ಚಿನ್ನ

Updated on: Aug 31, 2023 | 5:00 AM

ಬೆಂಗಳೂರು, ಆಗಸ್ಟ್ 31: ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Rates) ಏರಿಕೆ ಮುಂದುವರಿದಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಬಹುತೇಕ ಎಲ್ಲೆಡೆ ಚಿನ್ನದ ಬೆಲೆ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ ಕೂಡ ಸತತವಾಗಿ ಹೆಚ್ಚುವುದು ಮುಂದುವರಿದಿದೆ. ತಜ್ಞರು ನಿರೀಕ್ಷಿಸಿದಂತೆ ಈ ಏರಿಕೆ ಇನ್ನೂ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ. ಅಮೆರಿಕದ ಆರ್ಥಿಕತೆ ಬಗ್ಗೆ ಮತ್ತೆ ಸಂಶಯದ ಗೆರೆಗಳು ಮೂಡುತ್ತಿರುವಂತೆಯೇ ಹೂಡಿಕೆದಾರರು ಸುರಕ್ಷತೆಗೆ ಚಿನ್ನದತ್ತ ಮುಗಿಬೀಳುತ್ತಿರುವ ಟ್ರೆಂಡ್ ನಿರೀಕ್ಷೆಯಂತೆ ಈ ವಾರ ಮುಂದುವರಿಯುತ್ತಿದೆ. ಡಾಲರ್ ಮೌಲ್ಯವೃದ್ಧಿ ಬಳಿಕ ಹೂಡಿಕೆದಾರರು ಚಿನ್ನದಿಂದ ದೂರ ಸರಿದರಾದರೂ ಅದು ತಾತ್ಕಾಲಿಕ ಹಂತ ಎಂಬುದು ರುಜುವಾತಾಗಿದೆ. ಈಗ ಚಿನ್ನ ಮತ್ತು ಬೆಳ್ಳಿ ಮತ್ತೆ ಬೇಡಿಕೆ ಕಂಡುಕೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,760 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,620 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 31ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 776 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,000 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 762 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 55,000 ರೂ
  • ಚೆನ್ನೈ: 55,300 ರೂ
  • ಮುಂಬೈ: 55,000 ರೂ
  • ದೆಹಲಿ: 55,150 ರೂ
  • ಕೋಲ್ಕತಾ: 55,000 ರೂ
  • ಕೇರಳ: 55,000 ರೂ
  • ಅಹ್ಮದಾಬಾದ್: 55,050 ರೂ
  • ಜೈಪುರ್: 55,150 ರೂ
  • ಲಕ್ನೋ: 55,150 ರೂ
  • ಭುವನೇಶ್ವರ್: 55,000 ರೂ

ಇದನ್ನೂ ಓದಿ: Arecanut Price 30 August: ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ ಹೀಗಿದೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,850 ರಿಂಗಿಟ್ (50,749 ರುಪಾಯಿ)
  • ದುಬೈ: 2172.50 ಡಿರಾಮ್ (48,863 ರುಪಾಯಿ)
  • ಅಮೆರಿಕ: 595 ಡಾಲರ್ (49,164 ರುಪಾಯಿ)
  • ಸಿಂಗಾಪುರ: 814 ಸಿಂಗಾಪುರ್ ಡಾಲರ್ (49,784 ರುಪಾಯಿ)
  • ಕತಾರ್: 2,235 ಕತಾರಿ ರಿಯಾಲ್ (50,667 ರೂ)
  • ಓಮನ್: 237.50 ಒಮಾನಿ ರಿಯಾಲ್ (51,039 ರುಪಾಯಿ)
  • ಕುವೇತ್: 186.50 ಕುವೇತಿ ದಿನಾರ್ (50,018 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,620 ರೂ
  • ಚೆನ್ನೈ: 8,070 ರೂ
  • ಮುಂಬೈ: 7,760 ರೂ
  • ದೆಹಲಿ: 7,760 ರೂ
  • ಕೋಲ್ಕತಾ: 7,760 ರೂ
  • ಕೇರಳ: 8,070 ರೂ
  • ಅಹ್ಮದಾಬಾದ್: 7,760 ರೂ
  • ಜೈಪುರ್: 7,760 ರೂ
  • ಲಕ್ನೋ: 7,760 ರೂ
  • ಭುವನೇಶ್ವರ್: 8,070 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us