Gold Silver Price on 14th June: ಇಂದು ಬೆಳ್ಳಿ ಬೆಲೆ ಇಳಿಕೆ; ಚಿನ್ನದ ದರ ಯಥಾಸ್ಥಿತಿಯಲ್ಲಿ… ಇಲ್ಲಿದೆ ದರಪಟ್ಟಿ

Bullion Market 2024 June 14th: ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,160 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 90.70 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 66,150 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,050 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 14th June: ಇಂದು ಬೆಳ್ಳಿ ಬೆಲೆ ಇಳಿಕೆ; ಚಿನ್ನದ ದರ ಯಥಾಸ್ಥಿತಿಯಲ್ಲಿ... ಇಲ್ಲಿದೆ ದರಪಟ್ಟಿ
ಚಿನ್ನ

Updated on: Jun 14, 2024 | 5:00 AM

ಬೆಂಗಳೂರು, ಜೂನ್ 14: ಫೆಡರಲ್ ರಿಸರ್ವ್​ನಿಂದ ದರಕಡಿತ ಈ ವರ್ಷಾಂತ್ಯದವರೆಗೂ ಇಲ್ಲ ಎನ್ನುವ ವಿಚಾರ ವಿವಿಧ ಮಾರುಕಟ್ಟೆಗಳ ಮೇಲೆ ತುಸು ಪರಿಣಾಮ ಬೀರಲಿದೆ. ಇಂದು ಬೆಳ್ಳಿ ಬೆಲೆ (Gold and silver Rates) ತಗ್ತಿದೆ. ಚಿನ್ನದ ಬೆಲೆಯೂ ಕಡಿಮೆ ಆಗುವ ಸಾಧ್ಯತೆ ಇದೆ. ವಿದೇಶಗಳ ಕೆಲವೆಡೆ ಚಿನ್ನದ ಬೆಲೆ ಅಲ್ಪ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,160 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,070 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,050 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 14ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 907 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 905 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 66,150 ರೂ
  • ಚೆನ್ನೈ: 66,600 ರೂ
  • ಮುಂಬೈ: 66,150 ರೂ
  • ದೆಹಲಿ: 66,250 ರೂ
  • ಕೋಲ್ಕತಾ: 66,150 ರೂ
  • ಕೇರಳ: 66,150 ರೂ
  • ಅಹ್ಮದಾಬಾದ್: 66,200 ರೂ
  • ಜೈಪುರ್: 66,250 ರೂ
  • ಲಕ್ನೋ: 66,250 ರೂ
  • ಭುವನೇಶ್ವರ್: 66,150 ರೂ

ಇದನ್ನೂ ಓದಿ: ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ, ಆದರೆ ಇನ್ನೂ ಮೇಲ್ಮಟ್ಟದಲ್ಲಿ; ಹಣದುಬ್ಬರ ಕಡಿಮೆಯಾದರೂ ಗುರಿಗಿಂತ ಮೇಲೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,440 ರಿಂಗಿಟ್ (61,030 ರುಪಾಯಿ)
  • ದುಬೈ: 2,597.50 ಡಿರಾಮ್ (59,080 ರುಪಾಯಿ)
  • ಅಮೆರಿಕ: 710 ಡಾಲರ್ (59,320 ರುಪಾಯಿ)
  • ಸಿಂಗಾಪುರ: 975 ಸಿಂಗಾಪುರ್ ಡಾಲರ್ (60,380 ರುಪಾಯಿ)
  • ಕತಾರ್: 2,645 ಕತಾರಿ ರಿಯಾಲ್ (60,620 ರೂ)
  • ಸೌದಿ ಅರೇಬಿಯಾ: 2,660 ಸೌದಿ ರಿಯಾಲ್ (59,240 ರುಪಾಯಿ)
  • ಓಮನ್: 276.50 ಒಮಾನಿ ರಿಯಾಲ್ (6,000 ರುಪಾಯಿ)
  • ಕುವೇತ್: 220 ಕುವೇತಿ ದಿನಾರ್ (59,990 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,050 ರೂ
  • ಚೆನ್ನೈ: 9,520 ರೂ
  • ಮುಂಬೈ: 9,070 ರೂ
  • ದೆಹಲಿ: 9,070 ರೂ
  • ಕೋಲ್ಕತಾ: 9,070 ರೂ
  • ಕೇರಳ: 9,520 ರೂ
  • ಅಹ್ಮದಾಬಾದ್: 9,070 ರೂ
  • ಜೈಪುರ್: 9,070 ರೂ
  • ಲಕ್ನೋ: 9,070 ರೂ
  • ಭುವನೇಶ್ವರ್: 9,520 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us