ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ, ಆದರೆ ಇನ್ನೂ ಮೇಲ್ಮಟ್ಟದಲ್ಲಿ; ಹಣದುಬ್ಬರ ಕಡಿಮೆಯಾದರೂ ಗುರಿಗಿಂತ ಮೇಲೆ

US Fed Rates updates 2024 June: ಅಮೆರಿಕದಲ್ಲಿ ನಿರೀಕ್ಷೆಯಂತೆ ಈ ಬಾರಿಯೂ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಣದುಬ್ಬರ ನಿರೀಕ್ಷಿತ ರೀತಿಯಲ್ಲಿ ಇನ್ನೂ ಇಳಿಕೆ ಆಗದೇ ಇರುವುದರಿಂದ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರ ಯಥಾಸ್ಥಿತಿ ಮುಂದುವರಿಸಿದ್ದಾರೆ. ಅಲ್ಲಿ ಈಗ ಬಡ್ಡಿದರ ಶೇ. 5.25ರಿಂದ ಶೇ. 5.50ರ ಶ್ರೇಣಿಯಲ್ಲಿದೆ. ಈ ವರ್ಷದೊಳಗೆ ಮೂರು ಬಾರಿ ಬಡ್ಡಿದರ ಕಡಿತವನ್ನು ತಳ್ಳಿಹಾಕಲಾಗಿದ್ದು, ಒಮ್ಮೆ ಮಾತ್ರವೇ ಕಡಿತಗೊಳಿಸುವ ಸಾಧ್ಯತೆ ಇದೆ.

ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ, ಆದರೆ ಇನ್ನೂ ಮೇಲ್ಮಟ್ಟದಲ್ಲಿ; ಹಣದುಬ್ಬರ ಕಡಿಮೆಯಾದರೂ ಗುರಿಗಿಂತ ಮೇಲೆ
ಫೆಡರಲ್ ರಿಸರ್ವ್ ಮಂಡಳಿ ಸಭೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 13, 2024 | 11:02 AM

ವಾಷಿಂಗ್ಟನ್, ಜೂನ್ 13: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿರುವ ಫೆಡರಲ್ ರಿಸರ್ವ್ (US Fed Reserve) ನಿರೀಕ್ಷೆಯಂತೆ ಈ ಬಾರಿ ಬಡ್ಡಿದರ ಕಡಿತಗೊಳಿಸಿಲ್ಲ. ಅಷ್ಟೇ ಅಲ್ಲ ಈ ವರ್ಷಾಂತ್ಯದವರೆಗೂ ಬಡ್ಡಿಕಡಿತ ಕ್ರಮವನ್ನು ತಳ್ಳಿಹಾಕಿದೆ. ಡಿಸೆಂಬರ್​ನಲ್ಲಿ ಅಲ್ಪಮಟ್ಟದಲ್ಲಿ ಬಡ್ಡಿ ಇಳಿಸುವ ಇರಾದೆ ಇದೆ ಎನ್ನುವ ಸುಳಿವನ್ನು ಫೆಡರಲ್ ರಿಸರ್ವ್ ಅಧಿಕಾರಿಗಳು ಬಿಟ್ಟುಕೊಟ್ಟಿದ್ದಾರೆ. ಸದ್ಯ ಅಲ್ಲಿ ಬಡ್ಡಿದರ ಶೇ. 5.25ರಿಂದ ಶೇ. 5.50ರವರೆಗೆ ಇದೆ. ಫೆಡರಲ್ ರಿಸರ್ವ್​ನ ನಿರ್ಧಾರ ಬರುವ ಮುನ್ನ ಅಮೆರಿಕದ ಹಣದುಬ್ಬರದ ವರದಿಯೂ ಹೊರಬಂದಿತ್ತು. ಅದರ ಪ್ರಕಾರ ಮೇ ತಿಂಗಳಲ್ಲಿ ಹಣದುಬ್ಬರ ಶೇ. 3.3ರಷ್ಟಿದೆ. ಕೇವಲ 10 ಬೇಸಿಸ್ ಪಾಯಿಂಟ್​ಗಳಷ್ಟು ಮಾತ್ರವೇ ಹಣದುಬ್ಬರ ಕಡಿಮೆ ಆಗಿದೆ. ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ದರ ಶೇ. 3.2 ಇತ್ತು.

ಹಣದುಬ್ಬರ ದರ ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಕಡಿಮೆ ಆಗಿಲ್ಲ. ಶೇ. 2ಕ್ಕೆ ದರವನ್ನು ಇಳಿಸುವ ಗುರಿ ಇನ್ನೂ ದೂರವೇ ಇದೆ. ಹೀಗಾಗಿ, ಫೆಡರಲ್ ರಿಸರ್ವ್ ಸದ್ಯದ ಮಟ್ಟಿಗೆ ಬಡ್ಡಿ ದರ ಇರಿಸುವ ಆಲೋಚನೆಯನ್ನೇ ಕೈಬಿಟ್ಟಿದೆ. ಹಿಂದಿನ ಸಭೆಯಲ್ಲಿ ಈ ವರ್ಷ ಮೂರು ಬಾರಿ ಬಡ್ಡಿದರ ಇಳಿಸಲು ಮುಂದಾಗಿದ್ದ ಫೆಡರಲ್ ರಿಸರ್ವ್ ಈಗ ಡಿಸೆಂಬರ್​ನಲ್ಲಿ ಮಾತ್ರವೇ ರೇಟ್ ಕಟ್ ಕ್ರಮಕ್ಕೆ ಕೈಹಾಕಲು ನಿರ್ಧರಿಸಿದೆ. ಅದೂ ಹಣದುಬ್ಬರ ಹತೋಟಿಗೆ ಬಂದರೆ ಮಾತ್ರ. ಇಲ್ಲವಾದರೆ ಅದೂ ಇಲ್ಲ.

ಇದನ್ನೂ ಓದಿ: ಭಾರತದ ಹಣದುಬ್ಬರ ಶೇ. 4.75ಕ್ಕೆ ಇಳಿಕೆ; ಬಡ್ಡಿದರ ಕಡಿತಕ್ಕೆ ಮನಸು ಮಾಡುತ್ತಾ ಆರ್​ಬಿಐ?

ಭಾರತೀಯ ಕಾಲಮಾನದಲ್ಲಿ ನಿನ್ನೆ ಮಧ್ಯರಾತ್ರಿ (ಜೂನ್ 12) ಮಾಧ್ಯಮಗಳೊಂದಿಗೆ ಮಾತನಾಡಿದ ಫೆಡರಲ್ ರಿಸರ್ವ್ ಮುಖ್ಯಸ್ಥ ಜಿರೋಮ್ ಪೋವೆಲ್, ಅಮೆರಿಕದ ಆರ್ಥಿಕತೆ ಬಗ್ಗೆ ಆಶಾದಾಯಕವಾಗಿದ್ದಾರೆ. ಆದರೆ, ಅವರು ಹಣದುಬ್ಬರದ ಬಗ್ಗೆ ಮಾತ್ರವೇ ವ್ಯಾಕುಲಗೊಂಡಿರುವುದು. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಬಡ್ಡಿದರವನ್ನೂ ಇದೇ ಮಟ್ಟದಲ್ಲಿ ಮುಂದುವರಿಸಬೇಕಾಗಬಹುದು. ಸದ್ಯಕ್ಕೆ ಈ ವರ್ಷದೊಳಗೆ ಒಮ್ಮೆ ಮಾತ್ರವೇ ಬಡ್ಡಿದರ ಇಳಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಪೋವೆಲ್ ತಿಳಿಸಿದ್ದಾರೆ. ವರದಿಗಳ ಪ್ರಕಾರ ಡಿಸೆಂಬರ್​ನಲ್ಲಿ 25 ಬೇಸಿಸ್ ಪಾಯಿಂಟ್​​ಗಳಷ್ಟು ಮಾತ್ರವೇ ದರ ಕಡಿಮೆಗೊಳಿಸಬಹುದು ಎನ್ನಲಾಗಿದೆ.

ಎಲ್ಲವೂ ಕೂಡ ಹಣದುಬ್ಬರ ಎತ್ತ ಸಾಗಲಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈ ಬೆಲೆ ಏರಿಕೆ ದರವು ನಿರೀಕ್ಷಿ ರೀತಿಯಲ್ಲಿ ಹತೋಟಿಗೆ ಬರುತ್ತಿಲ್ಲ. ಮಾರ್ಚ್ ತಿಂಗಳಲ್ಲಿ ನಡೆದ ಸಭೆಯ ವೇಳೆ ಅಧಿಕಾರಿಗಳು ವಾರ್ಷಾಂತ್ಯದ ಹಣದುಬ್ಬರ ಶೇ. 2.4ರಷ್ಟಿರಬಹುದು ಎಂದು ಅಂದಾಜಿಸಿದ್ದರು. ಈಗ ನಡೆದ ಸಭೆಯಲ್ಲಿ ಆ ಹಣದುಬ್ಬರ ಶೇ. 2.6ರಷ್ಟಿರಬಹುದು ಎಂದು ಅಭಿಪ್ರಾಯ ಬದಲಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ಮೂರು ವರ್ಷ ಭಾರತದ್ದೇ ಅತೀ ಸ್ಪೀಡ್: ವಿಶ್ವಬ್ಯಾಂಕ್ ಅಭಿಪ್ರಾಯ

ಫೆಡರಲ್ ರಿಸರ್ವ್ ಬಡ್ಡಿದರ ಸದ್ಯಕ್ಕೆ ಕಡಿಮೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಹೂಡಿಕೆದಾರರಿಗೆ ಒಂದು ಸ್ಪಷ್ಟತೆ ಸಿಕ್ಕಂತಾಗಿದೆ. ಚಿನ್ನ ಇತ್ಯಾದಿ ಬೆಲೆಗಳು ತುಸು ಕಡಿಮೆ ಆಗಬಹುದು. ಈಕ್ವಿಟಿ ಮಾರುಕಟ್ಟೆ ಉಬ್ಬರ ತುಸು ತಗ್ಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ