ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ಮೂರು ವರ್ಷ ಭಾರತದ್ದೇ ಅತೀ ಸ್ಪೀಡ್: ವಿಶ್ವಬ್ಯಾಂಕ್ ಅಭಿಪ್ರಾಯ

World bank report on India and Global growth: 2023-24ರಿಂದ ಆರಂಭವಾಗಿ ಮೂರು ವರ್ಷದವರೆಗೆ ಭಾರತದ ಆರ್ಥಿಕತೆ ವಾರ್ಷಿಕ ಶೇ. 6.7ರ ದರದಲ್ಲಿ ಬೆಳೆಯಬಹುದು ಎಂದು ವಿಶ್ವಬ್ಯಾಂಕ್ ವರದಿಯೊಂದು ಅಭಿಪ್ರಾಯಪಟ್ಟಿದೆ. ಜನವರಿಯಲ್ಲಿ ಮಾಡಿದ ಅಂದಾಜಿಗಿಂತಲೂ 40 ಮೂಲಾಂಕಗಳಷ್ಟು ಹೆಚ್ಚಿನ ವೇಗ ಸಾಧ್ಯತೆಯನ್ನು ಹೊಸ ವರದಿಯಲ್ಲಿ ಮಾಡಲಾಗಿದೆ. 2023-24ರಲ್ಲಿ ಗಳಿಸಿದ ವೇಗವನ್ನು ಭಾರತ ಕಾಯ್ದುಕೊಳ್ಳಲು ಸಾಧ್ಯವಾಗದೇ ಹೋದರು ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತಿ ವೇಗಿ ಎನಿಸಲಿದೆಯಂತೆ.

ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ಮೂರು ವರ್ಷ ಭಾರತದ್ದೇ ಅತೀ ಸ್ಪೀಡ್: ವಿಶ್ವಬ್ಯಾಂಕ್ ಅಭಿಪ್ರಾಯ
ಜಾಗತಿಕ ಆರ್ಥಿಕ ಬೆಳವಣಿಗೆ
Follow us
|

Updated on: Jun 12, 2024 | 4:14 PM

ನವದೆಹಲಿ, ಜೂನ್ 12: ಪ್ರಸಕ್ತ ವರ್ಷದಿಂದ ಆರಂಭವಾಗಿ ಮುಂದಿನ ಮೂರು ವರ್ಷ ಭಾರತದ ಆರ್ಥಿಕತೆ (Indian economy) ಸ್ಥಿರ ವೇಗದಲ್ಲಿ ಬೆಳೆಯುತ್ತದೆ. ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಅತಿವೇಗವಾಗಿ ಬೆಳವಣಿಗೆ ಕಾಣಲಿದೆ. ಮೂರು ವರ್ಷ ಶೇ. 6.7ರ ಜಿಡಿಪಿ ದರ ಭಾರತದ್ದಾಗಿರಲಿದೆ ಎಂದು ವಿಶ್ವಬ್ಯಾಂಕ್​ನ ವರದಿಯೊಂದರಲ್ಲಿ (World Bank report) ಹೇಳಲಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.3ರಷ್ಟು ಮಾತ್ರವೇ ಬೆಳೆಯಬಹುದು ಎಂದು ಜನವರಿಯ ವರದಿಯಲ್ಲಿ ವರ್ಲ್ಡ್ ಬ್ಯಾಂಕ್ ಹೇಳಿತ್ತು. ಇದೀಗ ಕೊನೆಯ ಕ್ವಾರ್ಟರ್​ನಲ್ಲೂ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಹೊಸ ವರದಿಯಲ್ಲಿ ಆ ವರ್ಷದ ಭಾರತದ ಬೆಳವಣಿಗೆ ದರವನ್ನು ಶೇ. 8.2ರಷ್ಟಿರಬಹುದು ಎಂದು ಅದು ಅಂದಾಜಿಸಿದೆ.

ಇದೇ ವೇಳೆ, 2024ರ ಕ್ಯಾಲಂಡರ್ ವರ್ಷದಲ್ಲಿ ಜಾಗತಿಕವಾಗಿ ಸರಾಸರಿ ಆರ್ಥಿಕ ಬೆಳವಣಿಗೆ ಶೇ. 2.6ರಷ್ಟು ಇರಲಿದೆ. 2025-26ರ ಹಣಕಾಸು ವರ್ಷದಲ್ಲಿ ಇದು ಸರಾಸರಿಯಾಗಿ ಶೇ 2.7ರಷ್ಟು ಇರಬಹುದು ಎಂದು ಈ ವರದಿ ಅಭಿಪ್ರಾಯಪಟ್ಟಿದೆ. ಇದಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆಯ ವೇಗ ಬಹಳ ಎತ್ತರದಲ್ಲಿ ಇದೆ. ಆದರೂ ಕೂಡ ಭಾರತದ ಈಗಿನ ಆರ್ಥಿಕ ಓಟದ ವೇಗಕ್ಕೆ ಹೋಲಿಸಿದರೆ ಇದು ಕಡಿಮೆಯೇ.

ವಿಶ್ವ ಬ್ಯಾಂಕ್ ವರದಿಯಲ್ಲಿನ ಇನ್ನೊಂದು ಪ್ರಮುಖ ಅಂಶವೆಂದರೆ, ವಿಶ್ವದ ಶೇ. 80ರಷ್ಟು ಜನಸಂಖ್ಯೆ ಇರುವ ದೇಶಗಳಲ್ಲಿ ಜಿಡಿಪಿ ಬೆಳವಣಿಗೆ ಕೋವಿಡ್ ಪೂರ್ವದ ಮಟ್ಟದಲ್ಲಿದ್ದುದಕ್ಕಿಂತಲೂ ನಿಧಾನಗತಿಯಲ್ಲಿ ಇರಲಿದೆಯಂತೆ. ಭಾರತ, ಪಾಕಿಸ್ತಾನ ಮೊದಲಾದ ದೇಶಗಳಿರುವ ದಕ್ಷಿಣ ಏಷ್ಯಾ ಪ್ರದೇಶದಲ್ಲಿ 2023ರಲ್ಲಿ ಸರಾಸರಿ ಜಿಡಿಪಿ ಬೆಳವಣಿಗೆ ಶೇ. 6.6ರಷ್ಟಿತ್ತು. 2024ರಲ್ಲಿ ಇದು ಶೇ. 6.2ಕ್ಕೆ ಇಳಿಯಬಹುದು. ಭಾರತದಲ್ಲಿ ಆರ್ಥಿಕತೆ ಮಂದಗೊಳ್ಳುವ ಸಾಧ್ಯತೆ ಇರುವುದು ಈ ಇಳಿಮುಖಕ್ಕೆ ಕಾರಣ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: ಟೆಸ್ಲಾ ಕಂಪನಿ ಕರ್ನಾಟಕಕ್ಕೆ ಬರುತ್ತಾ? ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಹೇಳಿದ್ದಿದು

2023-24ರಲ್ಲಿ ತೋರಿದ ಆರ್ಥಿಕ ಬೆಳವಣಿಗೆಯ ವೇಗವನ್ನು ಭಾರತಕ್ಕೆ ಕಾಯ್ದುಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಹೂಡಿಕೆಗಳು ಹೆಚ್ಚಾಗುತ್ತಿರುವುದು ಹೌದಾದರೂ ಅವಶ್ಯಕತೆಯಷ್ಟು ಆಗದೇ ಇರಬಹುದು. ಇದು ಜಿಡಿಪಿ ದರ ಕಡಿಮೆಗೊಳ್ಳಲು ಕಾರಣವಾಗಬಹುದು ಎಂಬ ಸಂಗತಿಯನ್ನು ವಿಶ್ವ ಬ್ಯಾಂಕ್ ವರದಿಯಲ್ಲಿ ಕಾಣಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ