AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ, ಭಾರತ ಸರ್ಕಾರ ಮಾಡಬೇಕು ಮನಸು: ವೇದಾಂತ ಛೇರ್ಮನ್ ಅನಿಲ್ ಅಗರ್ವಾಲ್ ‘ಚಿನ್ನ’ದ ಕನಸು

Hatti Gold mines, Bharat Gold mines privatisation proposal: ಚಿನ್ನ ಮತ್ತು ತಾಮ್ರ ಭಾರತದಲ್ಲಿ ಲಭ್ಯ ಇದ್ದರೂ ಶೇ. 90ಕ್ಕಿಂತಲೂ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಿ ಇಲ್ಲಿಯೇ ಉತ್ಪಾದನೆ ಹೆಚ್ಚಾಗುವಂತೆ ಮಾಡಬೇಕು ಎಂದು ವೇದಾಂತ ಛೇರ್ಮನ್ ಅನಿಲ್ ಅಗರ್ವಾಲ್ ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲಿರುವ ಹಟ್ಟಿ ಗೋಲ್ಡ್ ಮೈನ್, ಭಾರತ್ ಗೋಲ್ಡ್ ಮೈನ್ ಮತ್ತು ಹಿಂದೂಸ್ತಾನ್ ಕಾಪರ್ ಕಂಪನಿಗಳನ್ನು ಖಾಸಗೀಕರಣಗೊಳಿಸುವಂತೆ ಸಲಹೆ ನೀಡಿದ್ದಾರೆ.

ಕರ್ನಾಟಕ, ಭಾರತ ಸರ್ಕಾರ ಮಾಡಬೇಕು ಮನಸು: ವೇದಾಂತ ಛೇರ್ಮನ್ ಅನಿಲ್ ಅಗರ್ವಾಲ್ ‘ಚಿನ್ನ’ದ ಕನಸು
ಚಿನ್ನದ ಗಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2024 | 1:47 PM

Share

ನವದೆಹಲಿ, ಜೂನ್ 12: ಕರ್ನಾಟಕದಲ್ಲಿರುವ ಹಟ್ಟಿ ಚಿನ್ನದ ಗಣಿಯನ್ನು (Hatti gold mines) ಖಾಸಗೀಕರಣಗೊಳಿಸುವಂತೆ ವೇದಾಂತ ಸಂಸ್ಥೆಯ ಛೇರ್ಮನ್ ಅನಿಲ್ ಅಗರ್ವಾಲ್ (Anil Agarwal) ಸಲಹೆ ನೀಡಿದ್ದಾರೆ. ಭಾರತದಲ್ಲಿ ಚಿನ್ನ ಮತ್ತು ತಾಮ್ರ ಸಂಪನ್ಮೂಲ ಹೇರಳವಾಗಿದ್ದರೂ ಅವೆರಡು ಲೋಹಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಅವಲಂಬನೆಯನ್ನು ತಗ್ಗಿಸಬೇಕಾದರೆ ಚಿನ್ನ ಮತ್ತು ತಾಮ್ರ ಗಣಿಗಾರಿಕೆಯಲ್ಲಿ ಖಾಸಗಿ ವಲಯವನ್ನೂ ಭಾಗೀದಾರವನ್ನಾಗಿಸುವುದು ಉತ್ತಮ ಎಂದು ಭಾರತದ ಅತಿದೊಡ್ಡ ಉದ್ಯಮಿಗಳಲ್ಲೊಬ್ಬರೆನಿಸಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಭಾರತಕ್ಕೆ ಪ್ರತೀ ವರ್ಷ 900 ಟನ್​ಗಳಷ್ಟು ಚಿನ್ನ ಬೇಕು. ಆದರೆ, ದೇಶೀಯವಾಗಿ ತಯಾರಾಗುವ ಚಿನ್ನ ಒಂದು ವರ್ಷದಲ್ಲಿ ಒಂದು ಟನ್ ಮಾತ್ರವೇ. ವರ್ಷದಲ್ಲಿ 3.4 ಲಕ್ಷ ಕೋಟಿ ರೂ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಕಾಪರ್ ವಿಚಾರದಲ್ಲಿ ನಮ್ಮ ಅವಶ್ಯಕತೆಯ ಶೇ. 95ರಷ್ಟು ಭಾಗ ಅಥವಾ 24,000 ಕೋಟಿ ರೂ ಮೊತ್ತದ ತಾಮ್ರವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ,’ ಎಂದು ಅನಿಲ್ ಅಗರ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದಲ್ಲಿ ಚಿನ್ನ ಮತ್ತು ಕಾಪರ್ ಗಣಿಗಾರಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳೇ ಇರುವುದನ್ನು ಎತ್ತಿತೋರಿಸಿರುವ ಅಗರ್ವಾಲ್, ಈ ಕ್ಷೇತ್ರಗಳಲ್ಲಿ ಖಾಸಗಿಯವರನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಟೆಸ್ಲಾ ಕಂಪನಿ ಕರ್ನಾಟಕಕ್ಕೆ ಬರುತ್ತಾ? ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಹೇಳಿದ್ದಿದು

‘ಚಿನ್ನದ ವಿಚಾರಕ್ಕೆ ಬಂದರೆ ಹಟ್ಟಿ ಚಿನ್ನದ ಗಣಿ ಇದೆ. ಭಾರತ್ ಗೋಲ್ಡ್ ಮೈನ್ಸ್ ಇದೆ. ಹಟ್ಟಿ ಗೋಲ್ಡ್ ಮೈನ್ ಅನ್ನು ಕರ್ನಾಟಕ ಸರ್ಕಾರ ನಿರ್ವಹಿಸುತ್ತದೆ. ಭಾರತ್ ಗೋಲ್ಡ್ ಮೈನ್ಸ್ ಭಾರತ ಸರ್ಕಾರಕ್ಕೆ ಸೇರಿದ್ದಾಗಿದೆ. ತಾಮ್ರದ ವಿಚಾರವಕ್ಕೆ ಬಂದರೆ, ಹಿಂದೂಸ್ತಾನ್ ಕಾಪರ್ ಇದೆ. ಇಷ್ಟು ಸಂಪನ್ಮೂಲ ಇದ್ದರೂ ಉತ್ಪಾದನೆ ಮಾತ್ರ ನಿಂತ ನೀರಾಗಿದೆ.

‘ಬೇರೆ ಯಾವ ನಿಕ್ಷೇಪವಾಗಲೀ, ಸಂಪನ್ಮೂಲವಾಗಲೀ ಉಳಿದಿಲ್ಲ ಎಂದು ಕೆಲವರು ವಾದಿಸಬಹುದು. ಆದರೆ, ಹೆಚ್ಚುವರಿ ಹೂಡಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿದರೆ ಈ ಗಣಿಗಳು ಒಳ್ಳೆಯ ಮೌಲ್ಯ ತರುತ್ತವೆ,’ ಎಂದು ಅನಿಲ್ ಅಗರ್ವಾಲ್ ಆಶಾದಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ, ಭಾರತ ಸರ್ಕಾರ ಮನಸು ಮಾಡಬೇಕು

ಈ ಗಣಿಗಳಿಂದ ಎಷ್ಟು ಉತ್ಪಾದನೆ ಮಾಡಬಹುದು ಎಂಬುದು ಖಾತ್ರಿ ಇಲ್ಲದಿರುವುದರಿಂದ ಹೂಡಿಕೆ ಎನ್ನುವುದು ರಿಸ್ಕಿ ಎನಿಸಬಹುದು. ಸರ್ಕಾರಕ್ಕೆ ಬೇರೆ ವಲಯಗಳಲ್ಲಿ ವೆಚ್ಚದ ಅವಶ್ಯಕತೆ ಇರುವುದರಿಂದ ಇದರ ಮೇಲೆ ಗಮನ ಕೊಡಲು ಆಗದಿರಬಹುದು. ಈ ಪರಿಸ್ಥಿತಿಯಲ್ಲಿ ಖಾಸಗಿ ವಲಯವನ್ನು ಭಾಗಿಯಾಗಿಸಿಕೊಂಡರೆ ಏನಾದರೂ ಸುಧಾರಣೆ ಆಗಬಹುದು ಎಂದು ವೇದಾಂತ ಸಂಸ್ಥೆಯ ಛೇರ್ಮನ್ ಹೇಳಿದ್ದಾರೆ.

ಇದನ್ನೂ ಓದಿ: ಝೀರೋಧದಲ್ಲಿ ಈಕ್ವಿಟಿ ಹೂಡಿಕೆದಾರರು ನಾಲ್ಕು ವರ್ಷದಲ್ಲಿ ಪಡೆದ ಲಾಭ 50,000 ಕೋಟಿ ರೂ: ನಿತಿನ್ ಕಾಮತ್

‘ಕರ್ನಾಟಕ ಮತ್ತು ಭಾರತ ಸರ್ಕಾರಗಳು ಹಟ್ಟಿ ಗೋಲ್ಡ್ ಮೈನ್ಸ್ ಮತ್ತು ಭಾರತ್ ಗೋಲ್ಡ್ ಮೈನ್ಸ್​ನಲ್ಲಿರುವ ತಮ್ಮ ಪಾಲನ್ನು ಮಾರಿದರೆ ಅದನ್ನು ಪಡೆಯಲು ಖಾಸಗಿ ಕಂಪನಿಗಳು ಸಮರ್ಥವಾಗಿವೆ. ಹೀಗಾದಲ್ಲಿ ಸರ್ಕಾರಕ್ಕೆ ತೆರಿಗೆ ಮತ್ತು ರಾಯಲ್ಟಿ ಮೂಲಕ ದೊಡ್ಡ ಮೊತ್ತದ ಆದಾಯ ಪ್ರಾಪ್ತವಾಗುತ್ತದೆ,’ ಎಂದು ಅನಿಲ್ ಅಗರ್ವಾಲ್ ತಿಳಿಸಿದ್ದಾರೆ.

ಆಮದು ಬದಲು ಅದನ್ನು ದೇಶೀಯವಾಗಿ ಉತ್ಪಾದಿಸುವುದರಿಂದ ಉದ್ಯಮ ಬೆಳೆಯುವುದು ಮಾತ್ರವಲ್ಲ, ಸಾವಿರಾರು ಜೋಡಿತ ಉದ್ದಿಮೆಗಳ ಅಭಿವೃದ್ದಿಗೂ ಅನುವಾಗುತ್ತದೆ. ಬಹಳಷ್ಟು ಉದ್ಯೋಗ ಸೃಷ್ಟಿ ಕೂಡ ಆಗುತ್ತದೆ. ಇದು ಇಂದಿನ ಅಗತ್ಯತೆ ಆಗಿದೆ ಎಂಬುದು ಅವರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ