ಝೀರೋಧದಲ್ಲಿ ಈಕ್ವಿಟಿ ಹೂಡಿಕೆದಾರರು ನಾಲ್ಕು ವರ್ಷದಲ್ಲಿ ಪಡೆದ ಲಾಭ 50,000 ಕೋಟಿ ರೂ: ನಿತಿನ್ ಕಾಮತ್

Zerodha investors profit data: ಭಾರತದ ಷೇರು ಬ್ರೋಕರ್ ಸಂಸ್ಥೆಗಳಲ್ಲಿ ಒಂದಾದ ಝೀರೋಧದಲ್ಲಿ ಈಕ್ವಿಟಿ ಹೂಡಿಕೆದಾರರು ಕಳೆದ ನಾಲ್ಕು ವರ್ಷಗಳಲ್ಲಿ 50,000 ಕೋಟಿ ರೂ ಲಾಭ ಪಡೆದಿದ್ದಾರೆ ಎಂದು ಆ ಪ್ಲಾಟ್​ಫಾರ್ಮ್​ನ ಮುಖ್ಯಸ್ಥ ನಿತಿನ್ ಕಾಮತ್ ಹೇಳಿದ್ದಾರೆ. ಇದು ಷೇರು ಮಾರಿ ನಷ್ಟ ಮಾಡಿಕೊಂಡಿದ್ದನ್ನು ಕಳೆದು, ಒಟ್ಟಾರೆ ಗಳಿಸಲಾಗಿರುವ ಲಾಭದ ಪ್ರಮಾಣವಾಗಿದೆ. ಝೀರೋಧದ ವಿವಿಧ ಹೂಡಿಕೆದಾರರ ಡೀಮ್ಯಾಟ್ ಅಕೌಂಟ್​​ಗಳಲ್ಲಿ 4.5 ಲಕ್ಷ ಕೋಟಿ ರೂ ಮೌಲ್ಯದ ಷೇರುಗಳಿವೆಯಂತೆ. ಅದರಲ್ಲಿ ಸಿಗಲಿರುವ ಲಾಭ ಒಂದು ಲಕ್ಷ ಕೋಟಿ ರೂ.

ಝೀರೋಧದಲ್ಲಿ ಈಕ್ವಿಟಿ ಹೂಡಿಕೆದಾರರು ನಾಲ್ಕು ವರ್ಷದಲ್ಲಿ ಪಡೆದ ಲಾಭ 50,000 ಕೋಟಿ ರೂ: ನಿತಿನ್ ಕಾಮತ್
ನಿತಿನ್ ಕಾಮತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 12, 2024 | 10:58 AM

ನವದೆಹಲಿ, ಜೂನ್ 12: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಷೇರು ಮಾರುಕಟ್ಟೆ (stock market) ಬಹಳ ಮಂದಿಯನ್ನು ಸೆಳೆಯುತ್ತಿದೆ. ಕಳೆದ ನಾಲ್ಕೈದು ವರ್ಷದಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಜನರು ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳತ್ತ ವಾಲುತ್ತಿದ್ದಾರೆ. ಉತ್ತಮ ಲಾಭ ಸಿಗುವ ನಿರೀಕ್ಷೆಯಲ್ಲಿ ಹೂಡಿಕೆದಾರರ ಒಲವು ಈಕ್ವಿಟಿ ಮಾರುಕಟ್ಟೆಯತ್ತ ಇದೆ. ಇತ್ತೀಚಿನ ವರ್ಷಗಳಲ್ಲಿ ಈ ನಿರೀಕ್ಷೆ ಹುಸಿಯಾಗಿದ್ದು ಕಡಿಮೆ. ನಷ್ಟ ಮಾಡಿಕೊಂಡ ಹೂಡಿಕೆದಾರರ ಸಂಖ್ಯೆ ವಿರಳ. ಇದೇ ವೇಳೆ ಷೇರುಮಾರುಕಟ್ಟೆ ಬ್ರೋಕರ್ ಸಂಸ್ಥೆಗಳಲ್ಲಿ ಒಂದಾದ ಝೀರೋಧದ ಮುಖ್ಯಸ್ಥ ನಿತಿನ್ ಕಾಮತ್ ಕುತೂಹಲದ ದತ್ತಾಂಶವೊಂದನ್ನು ಬಹಿರಂಗಪಡಿಸಿದ್ದಾರೆ. ಅವರ ಪ್ಲಾಟ್​ಫಾರ್ಮ್​ನಲ್ಲಿ ಹೂಡಿಕೆದಾರರು ಕಳೆದ ನಾಲ್ಕು ವರ್ಷದಲ್ಲಿ ನಡೆಸಿದ ವಹಿವಾಟುಗಳಲ್ಲಿ 50,000 ಕೋಟಿ ರೂ ಲಾಭ (realized profit) ಪಡೆದಿದ್ದಾರೆ.

‘ಝೀರೋಧದ ಈಕ್ವಿಟಿ ಹೂಡಿಕೆದಾರರು ಕಳೆದ 4ಕ್ಕೂ ಹೆಚ್ಚು ವರ್ಷಗಳಿಂದ 50,000 ಕೋಟಿ ರೂ ರಿಯಲೈಸ್ಡ್ ಪ್ರಾಫಿಟ್ ಪಡೆದಿದ್ದಾರೆ. 4.5 ಲಕ್ಷ ಕೋಟಿ ರೂ ಷೇರು ಸಂಪತ್ತಿನ ನಿರ್ವಹಣೆ ಆಗುತ್ತಿದ್ದು ಹೂಡಿಕೆದಾರರಿಗೆ ಒಂದು ಲಕ್ಷ ಕೋಟಿ ರೂ ಅನ್​ರಿಯಲೈಸ್ಡ್ ಪ್ರಾಫಿಟ್ ಇದೆ,’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಷೇರು ಮಾರುಕಟ್ಟೆ ಕುಸಿಯುತ್ತೆ ನೋಡ್ತಿರಿ… 2008ಕ್ಕಿಂತಲೂ ಭೀಕರವಾಗಿರುತ್ತೆ: ಅಮೆರಿಕದ ಆರ್ಥಿಕ ತಜ್ಞರ ಎಚ್ಚರಿಕೆ

ಇಲ್ಲಿ ರಿಯಲೈಸ್ಡ್ ಪ್ರಾಫಿಟ್ ಎಂದರೆ ಹೆಚ್ಚಿನ ಬೆಲೆಗೆ ಷೇರು ಮಾರಿ ಗಳಿಸಿದ ಲಾಭ. ಅನ್​ರಿಯಲೈಸ್ಡ್ ಪ್ರಾಫಿಟ್ ಎಂದರೆ ಜನರು ತಮ್ಮ ಹೂಡಿಕೆಗಳಿಗೆ ಬಂದಿರುವ ಲಾಭವನ್ನು ಇನ್ನೂ ಹಿಂಪಡೆದಿಲ್ಲದಿರುವುದು. ಷೇರು ಮಾರಾಟದಲ್ಲಿ ನಷ್ಟವೂ ಆಗುವುದುಂಟು. ಆದರೆ, ಝೀರೋಧದಲ್ಲಿ ಹೂಡಿಕೆದಾರರಿಗೆ ನಷ್ಟ ಕಳೆದು ಬರೀ ಲಾಭವೇ 50,000 ಕೋಟಿ ರೂ ಆಗಿದೆಯಂತೆ.

ಹದಿನಾಲ್ಕು ವರ್ಷ ಹಿಂದೆ ಆರಂಭವಾದ ಝೀರೋಧ ಬ್ರೋಕರ್ ಸಂಸ್ಥೆ ಬಳಿ ಇರುವ ಹೂಡಿಕೆದಾರರ ಡೀಮ್ಯಾಟ್ ಅಕೌಂಟ್​​ಗಳಲ್ಲಿ ಒಟ್ಟು 4.5 ಲಕ್ಷ ಕೋಟಿ ರೂ ಮೌಲ್ಯದ ಷೇರುಗಳಿವೆ. ಇವುಗಳಲ್ಲಿ ಹೆಚ್ಚಿನ ಷೇರುಗಳು ಕಳೆದ ನಾಲ್ಕು ವರ್ಷಗಳಲ್ಲಿ ಖರೀದಿಸಿಲಾಗಿದೆ ಎಂಬ ಮಾಹಿತಿಯನ್ನು ನಿತಿನ್ ಕಾಮತ್ ನೀಡಿದ್ದಾರೆ.

ಮೇ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ದಾಖಲೆಯ ಹಣದ ಹರಿವು

2024ರ ಮೇ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಅತಿಹೆಚ್ಚು ಹೂಡಿಕೆ ಪ್ರಾಪ್ತವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಘಟನೆಯಾದ ಎಎಂಎಫ್​ಐ ಹೇಳಿದೆ. ಅದು ನಿನ್ನೆ ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮೇ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ 34,670.9 ಕೋಟಿ ರೂ ಹರಿದುಬಂದಿದೆ.

ಇದನ್ನೂ ಓದಿ: ಆ ಪ್ಯಾಕೇಜ್​ಗೆ ನೀವು ಒಪ್ಪದಿದ್ರೆ ಇಲಾನ್ ಮಸ್ಕ್ ಬಿಟ್ಟುಹೋಗ್ತಾರೆ: ಷೇರುದಾರರನ್ನು ಎಚ್ಚರಿಸಿದ ಟೆಸ್ಲಾ ಅಧ್ಯಕ್ಷೆ

ಈ ಹೂಡಿಕೆಯಲ್ಲಿ ಹೆಚ್ಚಿನವರು ಥೀಮ್ಯಾಟಿಕ್ ಫಂಡ್ ಮತ್ತು ಎನ್​ಎಫ್​ಒಗಳಿಗೆ ಬಂದಿವೆ. ಥೀಮ್ಯಾಟಿಕ್ ಫಂಡ್​ಗಳಲ್ಲಿ ಮೇ ತಿಂಗಳಲ್ಲಿ 19,213 ಕೋಟಿ ರೂನಷ್ಟು ಹೂಡಿಕೆ ಆಗಿದೆ. ಎನ್​ಎಫ್​ಒ, ಅಥವಾ ನ್ಯೂ ಫಂಡ್ ಆಫರ್​ನಲ್ಲಿ 10,140 ಕೋಟಿ ರೂ ಹೂಡಿಕೆ ಸೇರ್ಪಡೆಯಾಗಿದೆಯಂತೆ.

ಲಾರ್ಜ್ ಕ್ಯಾಪ್ ಫಂಡ್​ಗಳಿಗಿಂತ ಮಿಡ್ ಕ್ಯಾಪ್ ಫಂಡ್ ಮತ್ತು ಸ್ಮಾಲ್​ಕ್ಯಾಪ್ ಫಂಡ್​ಗಳಿಗೆ ಹೆಚ್ಚು ಹೂಡಿಕೆ ಆಗಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್