ಶೀಘ್ರದಲ್ಲೇ ಷೇರು ಮಾರುಕಟ್ಟೆ ಕುಸಿಯುತ್ತೆ ನೋಡ್ತಿರಿ… 2008ಕ್ಕಿಂತಲೂ ಭೀಕರವಾಗಿರುತ್ತೆ: ಅಮೆರಿಕದ ಆರ್ಥಿಕ ತಜ್ಞರ ಎಚ್ಚರಿಕೆ

Stock Market crash in 2025: ಕೃತಕವಾಗಿ ಉಬ್ಬಿದ ನೀರ್ಗುಳ್ಳೆ ಯಾವಾಗಿದ್ದೂ ಒಡೆದು ಹೋಗುತ್ತದೆ. ಕೃತಕವಾಗಿ ಉಬ್ಬುವ ಷೇರು ಮಾರುಕಟ್ಟೆ ಕೂಡ ಪತನಗೊಳ್ಳುತ್ತದೆ. ಅಮೆರಿಕದ ಆರ್ಥಿಕ ತಜ್ಞ ಹ್ಯಾಪಿ ಡೆಂಟ್ ಪ್ರಕಾರ 2025ರಲ್ಲಿ ಅಲ್ಲಿನ ಷೇರು ಮಾರುಕಟ್ಟೆ ಪ್ರಪಾತಕ್ಕೆ ಬೀಳತೊಡಗುತ್ತದಂತೆ. ಎಸ್ ಅಂಡ್ ಪಿ ಮತ್ತು ನಾಸ್ಡಾಕ್ ಶೇ. 90ಕ್ಕಿಂತಲೂ ಹೆಚ್ಚು ಕುಸಿತ ಕಾಣಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಶೀಘ್ರದಲ್ಲೇ ಷೇರು ಮಾರುಕಟ್ಟೆ ಕುಸಿಯುತ್ತೆ ನೋಡ್ತಿರಿ... 2008ಕ್ಕಿಂತಲೂ ಭೀಕರವಾಗಿರುತ್ತೆ: ಅಮೆರಿಕದ ಆರ್ಥಿಕ ತಜ್ಞರ ಎಚ್ಚರಿಕೆ
ಅಮೆರಿಕದ ಷೇರುಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 11, 2024 | 3:52 PM

ವಾಷಿಂಗ್ಟನ್, ಜೂನ್ 11: ಹದಿನಾರು ವರ್ಷಗಳ ಹಿಂದೆ ಇಡೀ ಜಗತ್ತನ್ನು ತಲ್ಲಣಗೊಳಿಸಿದ ಹಣಕಾಸು ಬಿಕ್ಕಟ್ಟನ್ನು ಮೀರಿಸುವಂತಹ ಸಂಕಷ್ಟ ಎರಗಿ ಬರಲಿದೆ. ಷೇರು ಮಾರುಕಟ್ಟೆ (stock market) ಬಹಳ ಶೀಘ್ರದಲ್ಲಿ ಪಾತಾಳಕ್ಕೆ ಕುಸಿಯಲಿದೆ ಎಂದು ಅಮೆರಿಕದ ಪ್ರಮುಖ ಆರ್ಥಿಕ ತಜ್ಞ ಹ್ಯಾರಿ ಡೆಂಟ್ (Happy Dent) ಎಚ್ಚರಿಸಿದ್ದಾರೆ. ಅವರ ಪ್ರಕಾರ, ಯಾವುದೇ ಗುಳ್ಳೆಯಾದರೂ (Bubble) ಒಡೆದು ಹೋಗುವುದು ಅನಿವಾರ್ಯ. 2008ರ ರಿಸಿಶನ್​ಗಿಂತಲೂ (2008 Great Financial Recession) ಇದರ ಪರಿಣಾಮ ಘೋರವಾಗಿರುತ್ತೆ ಎಂದಿದ್ದಾರೆ. ಡೆಂಟ್ ಅವರು ಅಮೆರಿಕದ ಸರ್ಕಾರದ ಆರ್ಥಿಕ ಮತ್ತು ಹಣಕಾಸು ಕ್ರಮಗಳನ್ನು ಇಲ್ಲಿ ಕಟುವಾಗಿ ಟೀಕಿಸುತ್ತಿದ್ದಾರೆ.

ಮನಬಂದಂತೆ ನೋಟು ಪ್ರಿಂಟ್ ಮಾಡುತ್ತಿರುವ ಫಲ

‘1925ರಿಂದ 1929ರವರೆಗೆ ಸಹಜವಾಗಿ ಉಬ್ಬಿತ್ತು. ಕೃತಕವಾಗಿ ಉಬ್ಬಿಸಿರಲಿಲ್ಲ. ಆದರೆ, ಈಗಿನದು ಹೊಸತು. ಇಂಥದ್ದು ಈ ಹಿಂದೆ ಆಗಿದ್ದಿರಲಿಲ್ಲ. ಹ್ಯಾಂಗೋವರ್ ಇಳಿಸಲು ಏನು ಮಾಡುತ್ತೀರಿ? ಮತ್ತಷ್ಟು ಕುಡಿಯುತ್ತೀರಿ. ಈಗ ಆಗುತ್ತಿರುವುದು ಅದೆಯೇ. ಹೆಚ್ಚುವರಿ ಹಣ ಹರಿದುಬರುತ್ತಿದೆ. ಇದು ಆರ್ಥಿಕತೆಗೆ ಪುಷ್ಟಿಯೇನೋ ಕೊಡುತ್ತಿದೆ. ಆದರೆ ಈ ಉಬ್ಬರ ಕುಸಿಯುವುದನ್ನೂ ನಾವು ನೋಡಬೇಕಾಗುತ್ತದೆ,’ ಎಂದು ಹ್ಯಾರಿ ಡೆಂಟ್ ಅಭಿಪ್ರಾಯಪಟ್ಟಿದ್ದಾರೆ.

1925ರಿಂದ 1929ರವರೆಗೆ ಅಮೆರಿಕದ ಷೇರು ಮರುಕಟ್ಟೆ ಗಮನಾರ್ಹವಾಗಿ ಬೆಳೆದಿತ್ತು. 1929ರಲ್ಲಿ ಪತನ ಆರಂಭವಾಯಿತು. ಅದು ಚೇತರಿಸಿಕೊಳ್ಳಲು ಸಾಧ್ಯವಾಗಿದ್ದು 1940ರಲ್ಲಿ. ಚೇತರಿಕೆಗೆ ಕನಿಷ್ಠ ಏಳೆಂಟು ವರ್ಷ ತಗುಲಿತ್ತು.

ಇದನ್ನೂ ಓದಿ: ದುಬಾರಿಯಾಗಲಿದೆ ಯೂರೋಪ್ ಪ್ರವಾಸ; ಶೆಂಗನ್ ವೀಸಾ ಶುಲ್ಕ ಶೇ. 12ರಷ್ಟು ಹೆಚ್ಚಳ; ಯಾವುದಿದು ವೀಸಾ?

14 ವರ್ಷದಿಂದ ಉಬ್ಬುತ್ತಿರುವ ಮಾರುಕಟ್ಟೆ

ಹ್ಯಾಪಿ ಡೆಂಟ್ ಈ ಹಿಂದೆ ಇಂತಹ ವಿದ್ಯಮಾನಗಳ ಬಗ್ಗೆ ಮುಂಚಿತವಾಗಿಯೇ ಗ್ರಹಿಸಿ ಎಚ್ಚರಿಸಿದ್ದುಂಟು. 1989ರ ಜಪಾನ್ ಆಸ್ತಿ ಬೆಲೆ ಕುಸಿತ, 2000ರ ವರ್ಷದ ಡಾಟ್ ಕಾಮ್ ಕುಸಿತ ಮೊದಲಾದವನ್ನು ಉಲ್ಲೇಖಿಸಬಹುದು. ಅವರ ಪ್ರಕಾರ ಕೃತಕವಾಗಿ ಉಬ್ಬುವಿಕೆ ಸಾಮಾನ್ಯವಾಗಿ ಐದಾರು ವರ್ಷಗಳವರೆಗೆ ಆಗಬಹುದು. ಈಗ ಆಗುತ್ತಿರುವುದು 14 ವರ್ಷದಿಂದ ಉಬ್ಬುತ್ತಿದೆ. ಹೀಗಾಗಿ, 2008-09ರಲ್ಲಿ ಕಂಡಿದ್ದಕ್ಕಿಂತಲೂ ದೊಡ್ಡ ಕುಸಿತವನ್ನು ಕಾಣಲಿದ್ದೇವೆ ಎಂದು ಡೆಂಟ್ ಭವಿಷ್ಯ ನುಡಿದಿದ್ದಾರೆ.

‘ಎಸ್ ಅಂಡ್ ಪಿ ಶೇ. 86ರಷ್ಟು ಕುಸಿತ ಕಾಣಬಹುದು. ನಾಸ್ಡಾಕ್ ಶೇ. 92ರಷ್ಟು ಕುಸಿಯಬಹುದು ಎಂದನಿಸುತ್ತಿದೆ. ಎನ್​ವಿಡಿಯಾದಂತಹ ಒಳ್ಳೆಯ ಕಂಪನಿಯ ಷೇರು ಶೇ. 98ರಷ್ಟು ಕುಸಿಯುವುದನ್ನು ನೋಡಲಿದ್ದೇವೆ,’ ಎಂದು ಅಮೆರಿಕದ ಈ ಆರ್ಥಿಕ ತಜ್ಞ ಹೇಳಿದ್ದಾರೆ. ಅಮೆರಿಕದ ಷೇರುಮಾರುಕಟ್ಟೆಯ ಒಟ್ಟು ಮಾರುಕಟ್ಟೆ ಬಂಡವಾಳ 50 ಟ್ರಿಲಿಯನ್ ಡಾಲರ್​ನಷ್ಟಿದೆ.

ಸರ್ಕಾರವೇ ಸೃಷ್ಟಿಸಿದ ಬಬಲ್ ಇದು…

ಅಮೆರಿಕ ಸರ್ಕಾರವೇ ಈ ಉಬ್ಬರವನ್ನು ಸೃಷ್ಟಿಸಿದೆ. ಒಂದು ರೀತಿಯಲ್ಲಿ ಶಕ್ತಿ ತುಂಬಿಸಲು ಡ್ರಗ್ಸ್ ನೀಡಿದಂತೆ ಅಗುತ್ತಿದೆ. ಮನುಷ್ಯ ಜೀವನದಿಂದ ಹಿಡಿದು ಇತಿಹಾಸದವರೆಗೆ ನೀವು ಗಮನಿಸಿ ನೋಡಿ ಏನೂ ಇಲ್ಲದೇ ಏನನ್ನಾದರೂ ಪಡೆಯಲು ಸಾಧ್ಯವೇ ಇಲ್ಲ. ಗುಳ್ಳೆ ಯಾವಾಗಲೂ ಒಡೆದುಹೋಗುತ್ತದೆ ಎಂದು ಹ್ಯಾರಿ ಡೆಂಟ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಇವರಿಲ್ಲದೇ ಏನೂ ಇಲ್ಲ… ಭಾರತ ಮೂಲದ ಟೆಕ್ಕಿ ಅಶೋಕ್ ಎಲ್ಲುಸಾಮಿಯನ್ನು ಹಾಡಿಹೊಗಳಿದ ಇಲಾನ್ ಮಸ್ಕ್

ಯಾವಾಗ ಕುಸಿತ ಆಗುತ್ತೆ? ಭಾರತಕ್ಕೇನು ಪರಿಣಾಮ?

ಹ್ಯಾರಿ ಡೆಂಟ್ ಪ್ರಕಾರ ಅಮೆರಿಕದ ಷೇರು ಮಾರುಕಟ್ಟೆ ಮುಂದಿನ ವರ್ಷದ ಮಧ್ಯಭಾಗದಲ್ಲಿ ಕುಸಿತ ಕಾಣಬಹುದು. ಹಣದುಬ್ಬರ ನಿಯಂತ್ರಿಸಲು ಫೆಡರಲ್ ರಿಸರ್ವ್ ತಳೆಯುವ ಕಠಿಣ ಕ್ರಮ ಈ ಕುಸಿತಕ್ಕೆ ಕಿಡಿ ಹೊತ್ತಿಸಬಹುದು. ವಸತಿ ಮಾರುಕಟ್ಟೆ ಈ ಕುಸಿತದ ಕೇಂದ್ರಬಿಂದು ಆಗಿರುತ್ತೆ ಎಂದಿದ್ದಾರೆ.

ಚೀನಾದ ಆರ್ಥಿಕ ಹಿನ್ನಡೆಯ ಕೇಂದ್ರಬಿಂದು ಆಗಿರುವುದು ಅಲ್ಲಿನ ವಸತಿ ಮಾರುಕಟ್ಟೆಯೆ ಎಂಬುದನ್ನು ಇಲ್ಲಿ ಗಮನಿಸಬಹುದು.

1929ರ ಯುಎಸ್ ಸ್ಟಾಕ್ ಮಾರ್ಕೆಟ್ ಕುಸಿತ ಆದಾಗ ಅದರ ಪರಿಣಾಮ ಜಾಗತಿಕವಾಗಿ ಆಗಿತ್ತು. ಅಮೆರಿಕದಲ್ಲಿ ಬಿಕ್ಕಟ್ಟು ಸಂಭವಿಸಿದಾಗೆಲ್ಲಾ ಅದರ ಪರಿಣಾಮ ಜಾಗತಿಕವಾಗಿ ಆಗುವುದು ಸಹಜ ಪ್ರತಿಕ್ರಿಯೆ. ಈಗಲೂ ಕೂಡ ಅಮೆರಿಕದ ಷೇರು ಮಾರುಕಟ್ಟೆ ಕುಸಿದರೆ ಭಾರತವೂ ಒಳಗೊಂಡಂತೆ ವಿಶ್ವದ ಪ್ರಮುಖ ಷೇರು ಮಾರುಕಟ್ಟೆ ತಲ್ಲಣಗೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Tue, 11 June 24

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ