ದುಬಾರಿಯಾಗಲಿದೆ ಯೂರೋಪ್ ಪ್ರವಾಸ; ಶೆಂಗನ್ ವೀಸಾ ಶುಲ್ಕ ಶೇ. 12ರಷ್ಟು ಹೆಚ್ಚಳ; ಯಾವುದಿದು ವೀಸಾ?

Schengen Visa Fee Hiked: ಯೂರೋಪ್​ನ ಶೆಂಗನ್ ವ್ಯಾಪ್ತಿಯ ದೇಶಗಳಿಗೆ ಹೋಗಲು ಪಡೆಯಬೇಕಾದ ಶೆಂಗನ್ ವೀಸಾದ ಶುಲ್ಕವನ್ನು ಶೇ. 12ರಷ್ಟು ಹೆಚ್ಚಿಸಲಾಗಿದೆ. 12 ವರ್ಷ ಮೇಲ್ಪಟ್ಟ ವಯಸ್ಸಿನ ಜನರಿಗೆ ಈ ಟೈಪ್ ಸಿ ವೀಸಾ ಶುಲ್ಕವನ್ನು 80ರಿಂದ 90 ರೂಗೆ ಹೆಚ್ಚಿಸಲಾಗಿದೆ. ಯೂರೋಪ್​ನ 29 ದೇಶಗಳು ಶೆಂಗನ್ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಈ ದೇಶಗಳಿಗೆ ವೀಸಾ ಸೇರಿದಂತೆ ಹಲವು ಸಾಮಾನ್ಯ ನಿಯಮಗಳಿರುತ್ತವೆ.

ದುಬಾರಿಯಾಗಲಿದೆ ಯೂರೋಪ್ ಪ್ರವಾಸ; ಶೆಂಗನ್ ವೀಸಾ ಶುಲ್ಕ ಶೇ. 12ರಷ್ಟು ಹೆಚ್ಚಳ; ಯಾವುದಿದು ವೀಸಾ?
ಯೂರೋಪ್ ಪ್ರವಾಸ
Follow us
|

Updated on: Jun 11, 2024 | 12:50 PM

ನವದೆಹಲಿ, ಜೂನ್ 11: ನೀವು ಯೂರೋಪ್ ಪ್ರವಾಸಕ್ಕೆ ಯೋಜಿಸುತ್ತಿದ್ದೀರಾ? ತುಸು ದುಬಾರಿಯಾಗಲಿದೆ ಪ್ರವಾಸ. ಯೂರೋಪ್​ನ ಶೆಂಗನ್ ವ್ಯಾಪ್ತಿಯ ದೇಶಗಳಿಗೆ (Schengen region) ನೀವು ಪ್ರವಾಸ ಹೋಗುವುದಾದರೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ. ಯೂರೋಪಿಯನ್ ಕಮಿಷನ್ ಶೆಂಗನ್ ವೀಸಾ ಶುಲ್ಕವನ್ನು (Schengen visa fees) ಶೇ. 12ರಷ್ಟು ಹೆಚ್ಚಿಸಿದೆ. ಇದು ಇಂದಿನಿಂದಲೇ (ಜೂನ್ 11) ಜಾರಿಗೆ ಬರಲಿದೆ. ವಿಶ್ವಾದ್ಯಂತ ಬರುವ ಪ್ರವಾಸಿಗರಿಗೆ ಇದು ಅನ್ವಯ ಆಗುತ್ತದೆ.

ಆರರಿಂದ ಹನ್ನೆರಡು ವರ್ಷದ ವಯೋಮಾನದ ಮಕ್ಕಳಿಗೆ ಶೆಂಗನ್ ವೀಸಾ ಶುಲ್ಕ 45 ಯೂರೋಗೆ ಹೆಚ್ಚಿಸಲಾಗಿದೆ. 12 ವರ್ಷ ಮೇಲ್ಪಟ್ಟವರಿಗೆ ವೀಸಾ ಶುಲ್ಕ 90 ಯೂರೋಗೆ ಏರಿಸಲಾಗಿದೆ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶುಲ್ಕ ಇರುವುದಿಲ್ಲ. ಈ ವಿಷಯವನ್ನು ಸ್ಲೊವೇನಿಯಾ ಸರ್ಕಾರ ಪ್ರಕಟಿಸಿದೆ. ಇಲ್ಲಿ ಒಂದು ಯೂರೋ ಕರೆನ್ಸಿಗೆ 90 ರೂ ಆಸುಪಾಸು ಬೆಲೆ ಇದೆ.

ಏನಿದು ಶೆಂಗನ್ ವೀಸಾ?

ಶೆಂಗನ್ ಪ್ರದೇಶ ಎಂಬುದು ಐರೋಪ್ಯ ಒಕ್ಕೂಟದ ವಿವಿಧ ದೇಶಗಳು ಸೇರಿ ರೂಪಿಸಿರುವ ಗಡಿರಹಿತ, ವೀಸಾರಹಿತ ವ್ಯವಸ್ಥೆಯಾಗಿದೆ. ಯೂರೋಪ್​ನ 29 ದೇಶಗಳು ಈ ಶೆಂಗನ್ ಪ್ರದೇಶದಲ್ಲಿವೆ. ಇದರಲ್ಲಿ ಯೂರೋಪಿಯನ್ ಒಕ್ಕೂಟದ 25 ಸದಸ್ಯ ದೇಶಗಳೂ ಒಳಗೊಂಡಿವೆ.

ಇದನ್ನೂ ಓದಿ: 3,500 ಪೇಟಿಎಂ ಉದ್ಯೋಗಿಗಳ ಲೇ ಆಫ್; ಬೇರೆಡೆ ಕೆಲಸ ಕೊಡಿಸಲು ಕಂಪನಿಯಿಂದಲೇ ನೆರವು

ಫ್ರಾನ್ಸ್, ಇಟಲಿ, ನೆದರ್​ಲ್ಯಾಂಡ್ಸ್, ಪೋಲ್ಯಾಂಡ್, ಜರ್ಮನಿ, ಡೆನ್ಮಾರ್ಕ್, ಬಲ್ಗೇರಿಯಾ, ಸ್ವಿಟ್ಜರ್​ಲ್ಯಾಂಡ್, ಸ್ವೀಡನ್, ಸ್ಲೊವೇನಿಯಾ, ಪೋರ್ಚುಗಲ್, ಆಸ್ಟ್ರಿಯಾ ಮೊದಲಾದ ದೇಶಗಳೂ ಇದರಲ್ಲಿ. ಬ್ರಿಟನ್ ಈ ಯೂರೋಪಿಯನ್ ಒಕ್ಕೂಟದಲ್ಲಾಗಲೀ, ಶೆಂಗನ್ ಪ್ರದೇಶದ ವ್ಯಾಪ್ತಿಯಲ್ಲಾಗಲೀ ಸೇರಿಲ್ಲ.

ಈ ಶೆಂಗನ್ ವ್ಯಾಪ್ತಿಯಲ್ಲಿರುವ ಯೂರೋಪಿಯನ್ ದೇಶಗಳಿಗೆ ಸಾಮಾನ್ಯವಾಗಿರುವ ವೀಸಾ ಇತ್ಯಾದಿ ವ್ಯವಸ್ಥೆ ಇದೆ. ಅಲ್ಪ ಅವಧಿಯ ಪ್ರಯಾಣಕ್ಕೆ ಇಲ್ಲಿ ಟೈಪ್ ಸಿ ವೀಸಾ ನೀಡಲಾಗುತ್ತದೆ. ಇದುವೇ ಶೆಂಗನ್ ವೀಸಾ. ಈ ದೇಶಗಳಿಗೆ ಪ್ರವಾಸ ಹೋಗುವವರು ಶೆಂಗನ್ ವೀಸಾ ಪಡೆದರೆ ಸಾಕು. ಆ ವ್ಯಾಪ್ತಿಯ ಯಾವ ದೇಶಕ್ಕೆ ಬೇಕಾದರೂ ಮುಕ್ತವಾಗಿ ಸಂಚರಿಸಬಹುದಾಗಿದೆ.

ಇದನ್ನೂ ಓದಿ: ರಾಜ್ಯಗಳಿಗೆ 1.39 ಲಕ್ಷ ಕೋಟಿ ರೂ ತೆರಿಗೆ ಹಂಚಿದ ಕೇಂದ್ರ; ಬಿಹಾರಕ್ಕೆ ಬಂಪರ್; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು? ಇಲ್ಲಿದೆ ರಾಜ್ಯವಾರು ಪಟ್ಟಿ

ಈಗ ಶೆಂಗನ್ ವೀಸಾ ಶುಲ್ಕ ಏರಿಕೆ ಯಾಕೆ?

ಹಣದುಬ್ಬರ ಏರುತ್ತಿರುವುದು, ಸರ್ಕಾರಿ ನೌಕರರ ಸಂಬಳ ಹೆಚ್ಚುತ್ತಿರುವುದು ಶೆಂಗನ್ ವೀಸಾ ಶುಲ್ಕ ಏರಿಸಲು ಕಾರಣ ಎಂದು ಹೇಳಲಾಗುತ್ತಿದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಶೆಂಗನ್ ವೀಸಾ ನಿಯಮಗಳನ್ನು ಪರಿಷ್ಕರಿಸಲಾಗುತ್ತದೆ. ಕಳೆದ ಬಾರಿ 2020ರ ಫೆಬ್ರುವರಿಯಲ್ಲಿ ವೀಸಾ ಶುಲ್ಕ ಹೆಚ್ಚಿಸಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್