3,500 ಪೇಟಿಎಂ ಉದ್ಯೋಗಿಗಳ ಲೇ ಆಫ್; ಬೇರೆಡೆ ಕೆಲಸ ಕೊಡಿಸಲು ಕಂಪನಿಯಿಂದಲೇ ನೆರವು

Paytm Layoffs news: ನಷ್ಟದ ಹೊರೆ ಹೆಚ್ಚಿಸಿಕೊಳ್ಳುತ್ತಿರುವ ಪೇಟಿಎಂ ಸಂಸ್ಥೆ ಇದೀಗ 3,500 ಮಂದಿ ಉದ್ಯೋಗಿಗಳನ್ನು ಲೇ ಆಫ್ ಮಾಡಿರುವ ಸುದ್ದಿ ಬಂದಿದೆ. ನಷ್ಟದ ಹೊರೆ ಕಡಿಮೆ ಮಾಡಿಕೊಳ್ಳಲು ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ. ಕೆಲಸ ಕಳೆದುಕೊಂಡಿರುವ ಉದ್ಯೋಗಿಗಳಿಗೆ ಬೇರೆಡೆ ಕೆಲಸ ಕೊಡಿಸಲು ಕಂಪನಿಯ ಎಚ್ಆರ್ ತಂಡಗಳು ಪ್ರಯತ್ನಿಸುತ್ತಿವೆ.

3,500 ಪೇಟಿಎಂ ಉದ್ಯೋಗಿಗಳ ಲೇ ಆಫ್; ಬೇರೆಡೆ ಕೆಲಸ ಕೊಡಿಸಲು ಕಂಪನಿಯಿಂದಲೇ ನೆರವು
ಪೇಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2024 | 6:19 PM

ನವದೆಹಲಿ, ಜೂನ್ 10: ಸಂಕಷ್ಟಗಳ ಸರಮಾಲೆಗಳ ಮಧ್ಯೆ ಲಾಭದ ಹಳಿಗೆ ಬರಲು ಹತಾಶೆಯ ಪ್ರಯತ್ನದಲ್ಲಿರುವ ಪೇಟಿಎಂ ಸಂಸ್ಥೆ (Paytm) ಈಗ ಆ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಲೇ ಆಫ್ ಕ್ರಮ ಜರುಗಿಸಿದೆ. ಲೇ ಆಫ್ ಮಾಡಲಾಗಿರುವುದನ್ನು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆ ಖಚಿತಪಡಿಸಿದೆ. ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆಡೆ ಕೆಲಸ ಸಿಗಲು ನೆರವನ್ನೂ ಕೂಡ ಸಂಸ್ಥೆ ಒದಗಿಸುತ್ತಿದೆ. ಆದರೆ, ಎಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ನಿರ್ದಿಷ್ಟವಾಗಿ ಸಂಸ್ಥೆ ಹೇಳಿಲ್ಲ. ವರದಿಗಳ ಪ್ರಕಾರ 3,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ಹೋಗಿದೆ ಎಂದು ಹೇಳಲಾಗುತ್ತಿದೆ.

ಪೇಟಿಎಂನಲ್ಲಿ 40,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಈಗ 3,500 ಮಂದಿಯ ಲೇ ಆಫ್ ಆದರೆ ಅದರ ಸಿಬ್ಬಂದಿ ವರ್ಗದ ಸಂಖ್ಯೆ 36,521ಕ್ಕೆ ಇಳಿಯಬಹುದು. ಲೇ ಆಫ್ ಆದವರಲ್ಲಿ ಸೇಲ್ಸ್ ವಿಭಾಗದವರು ಹೆಚ್ಚು ಎನ್ನಲಾಗಿದೆ.

ಲೇ ಆಫ್​ಗೆ ಏನು ಕಾರಣ?

ಆರ್​ಬಿಐನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನಿರ್ಬಂಧ ಬಿದ್ದದ್ದು ಒನ್97 ಕಮ್ಯೂನಿಕೇಶನ್ಸ್​ನ ವಿವಿಧ ಬಿಸಿನೆಸ್​ಗಳಿಗೆ ಹೊಡೆತ ಬಿದ್ದಂತಾಗಿದೆ. ನಷ್ಟದ ಪ್ರಮಾಣವೂ ಹೆಚ್ಚುತ್ತಿದೆ. ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಪೇಟಿಎಂಗೆ ಆದ ನಷ್ಟ 550 ಕೋಟಿ ರೂ. ಈ ನಷ್ಟವನ್ನು ಕಡಿಮೆ ಮಾಡಬೇಕೆಂದರೆ ಸಂಸ್ಥೆಯ ಸಿಬ್ಬಂದಿ ವರ್ಗದ ಮರುರಚನೆ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: ಇವರಿಲ್ಲದೇ ಏನೂ ಇಲ್ಲ… ಭಾರತ ಮೂಲದ ಟೆಕ್ಕಿ ಅಶೋಕ್ ಎಲ್ಲುಸಾಮಿಯನ್ನು ಹಾಡಿಹೊಗಳಿದ ಇಲಾನ್ ಮಸ್ಕ್

ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಬೇರೆಡೆ ಕೆಲಸ ಕೊಡಿಸಲು ಕಂಪನಿ ಸಹಾಯವಾಗಿದೆ. ಅದರ ಮಾನವ ಸಂಪನ್ಮೂಲ ತಂಡಗಳು ಬೇರೆ ಬೇರೆ ಕಂಪನಿಗಳ ಜೊತೆ ಸಂಪರ್ಕದಲ್ಲಿದ್ದು, ಉದ್ಯೋಗಿಗಳಿಗೆ ಕೆಲಸ ಕೊಡಿಸಲು ಪ್ರಯತ್ನಿಸುತ್ತಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚೆನ್ನೈ- ಬೆಂಗಳೂರು ಹೆದ್ದಾರಿಯಲ್ಲಿ ಟ್ರಕ್ ಡಿಕ್ಕಿಯಾಗಿ ಪಲ್ಟಿ ಹೊಡೆದ ಬಸ್
ಚೆನ್ನೈ- ಬೆಂಗಳೂರು ಹೆದ್ದಾರಿಯಲ್ಲಿ ಟ್ರಕ್ ಡಿಕ್ಕಿಯಾಗಿ ಪಲ್ಟಿ ಹೊಡೆದ ಬಸ್
ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ
ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ
ಎಡಿಜಿಪಿ, ಪೊಲೀಸ್ ಕಮೀಶನರ್​ರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಸ್ವಾಮೀಜಿ
ಎಡಿಜಿಪಿ, ಪೊಲೀಸ್ ಕಮೀಶನರ್​ರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಸ್ವಾಮೀಜಿ
ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ ಪ್ರತಿಭಟನೆಕಾರರು
ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ ಪ್ರತಿಭಟನೆಕಾರರು
ನನಗೆ ಏಟು ಬಿದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತಿತ್ತು: ಸ್ಚಾಮೀಜಿ
ನನಗೆ ಏಟು ಬಿದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತಿತ್ತು: ಸ್ಚಾಮೀಜಿ
ಮನವಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬರಲಿಲ್ಲ ಎಂದ ಪ್ರತಿಭಟನಾಕಾರರು
ಮನವಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬರಲಿಲ್ಲ ಎಂದ ಪ್ರತಿಭಟನಾಕಾರರು
ಬಿಗ್​ಬಾಸ್: ಗೌತಮಿ ಹೊಗಳಿಕೆಗೆ ನಾಚಿ ನೀರಾದ ಮೋಕ್ಷಿತಾ
ಬಿಗ್​ಬಾಸ್: ಗೌತಮಿ ಹೊಗಳಿಕೆಗೆ ನಾಚಿ ನೀರಾದ ಮೋಕ್ಷಿತಾ
ವಿಧಾನಸೌಧ ಆವರಣದಲ್ಲಿ ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕು: ಇಬ್ರಾಹಿಂ
ವಿಧಾನಸೌಧ ಆವರಣದಲ್ಲಿ ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕು: ಇಬ್ರಾಹಿಂ
ಪಾತ್ರೆ ತೊಳೆದರೆ ನಾನು ಗಂಡಸೇ ಅಲ್ಲ; ಚೈತ್ರಾಗೆ ಸವಾಲು ಹಾಕಿದ ರಜತ್
ಪಾತ್ರೆ ತೊಳೆದರೆ ನಾನು ಗಂಡಸೇ ಅಲ್ಲ; ಚೈತ್ರಾಗೆ ಸವಾಲು ಹಾಕಿದ ರಜತ್
ಪಂಚಮಸಾಲಿ ಹೋರಾಟ ತೀವ್ರ: ಯತ್ನಾಳ್,ಸ್ವಾಮೀಜಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪಂಚಮಸಾಲಿ ಹೋರಾಟ ತೀವ್ರ: ಯತ್ನಾಳ್,ಸ್ವಾಮೀಜಿ ಸೇರಿ ಹಲವರು ಪೊಲೀಸ್ ವಶಕ್ಕೆ