ಗೂಗಲ್ ದೊರೆ ಸುಂದರ್ ಪಿಚೈ ಜನ್ಮದಿನ; ಕುತೂಹಲವಾಗಿದೆ ತಮಿಳುನಾಡಿನ ಈ ಟೆಕ್ ಮಾಂತ್ರಿಕನ ಆರಂಭಿಕ ಜೀವನ

Google CEO Sundar Pichai birthday: ಭಾರತದ ಮೂಲದ ಪ್ರಮುಖ ಸಿಇಒಗಳಲ್ಲಿ ಸುಂದರ್ ಪಿಚೈ ಒಬ್ಬರು. ಗೂಗಲ್ ಚುಕ್ಕಾಣಿ ಹಿಡಿದು ಒಂಬತ್ತು ವರ್ಷ ಆಯಿತು. ಸಾಕಷ್ಟು ತಂತ್ರಜ್ಞಾನ ಪರಿವರ್ತನೆಗಳನ್ನು ಅವರು ತಂದಿತ್ತಿದ್ದಾರೆ. ತಮಿಳುನಾಡಿನ ಮದುರೈನಲ್ಲಿ ಹುಟ್ಟಿದ ಅವರು ಸಾಧಾರಣ ಕುಟುಂಬದಲ್ಲಿ ಬೆಳೆದವರು. ಪ್ರತಿಯೊಂದಕ್ಕೂ ಕಷ್ಟಪಡುತ್ತಿದ್ದ ಕಾಲವನ್ನು ದಾಟಿ ಬಂದು ಇವತ್ತು ತಂತ್ರಜ್ಞಾನ ಆವಿಷ್ಕಾರ ಮೂಲಕ ಜನಜೀವನ ಸುಗಮಗೊಳಿಸುವ ಕಂಪನಿಯ ಸಿಇಒ ಆಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಗೂಗಲ್ ದೊರೆ ಸುಂದರ್ ಪಿಚೈ ಜನ್ಮದಿನ; ಕುತೂಹಲವಾಗಿದೆ ತಮಿಳುನಾಡಿನ ಈ ಟೆಕ್ ಮಾಂತ್ರಿಕನ ಆರಂಭಿಕ ಜೀವನ
ಸುಂದರ್ ಪಿಚೈ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2024 | 3:40 PM

ಇವತ್ತು ಜೂನ್ 10. ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai) ಹುಟ್ಟಿದ ದಿನ. ತಮಿಳುನಾಡಿನ ಮದುರೈನಲ್ಲಿ 1972ರ ಜೂನ್ 10ರಂದು ಜನಿಸಿದವರು ಸುಂದರ್ ಪಿಚೈ. ಇವತ್ತು ಅವರು 53ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜಗತ್ತಿನೆಲ್ಲೆಡೆ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಗೂಗಲ್ ಅನ್ನು ಈ ಭಾರತ ಮೂಲದ ವ್ಯಕ್ತಿ ಮುನ್ನಡೆಸುತ್ತಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ. ಅವರ ನಾಯಕತ್ವದಲ್ಲಿ ಗೂಗಲ್ ಹಲವು ಹೊಸ ಮೈಲಿಗಲ್ಲು, ಸಾಧನೆಗಳನ್ನು ಮಾಡಿದೆ. 2004ರಲ್ಲಿ ಗೂಗಲ್ ಸೇರಿದ ಅವರು 2015ರಲ್ಲಿ ಸಿಇಒ ಸ್ಥಾನಕ್ಕೆ ಏರಿದ್ದಾರೆ. ಸಿಇಒ ಸ್ಥಾನಕ್ಕೆ ಏರುವ ಮುನ್ನ ಗೂಗಲ್ ಕ್ರೋಮ್, ಗೂಗಲ್ ಡ್ರೈವ್ ಇತ್ಯಾದಿ ಉತ್ಪನ್ನಗಳ (google products) ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟೆಕ್ ದೊರೆಯ ಬಾಲ್ಯ ಜೀವನ ಹೀಗಿತ್ತು ನೋಡಿ…

ಟೆಕ್ ದೊರೆ ಸುಂದರ್ ಪಿಚೈ ಅವರು ಅನುಕೂಲಸ್ಥ ಕುಟುಂಬದಿಂದ ಬಂದವರಲ್ಲ. ಎಪ್ಪತ್ತು, ಎಂಬತ್ತರ ದಶಕದಲ್ಲಿ ಮಧ್ಯಮ ವರ್ಗದವರಿಗೆ ಇದ್ದಂತಹ ವಾತಾವರಣದಲ್ಲಿ ಬೆಳೆದವರು ಸುಂದರ್ ಪಿಚೈ. ಆಗ ಬರುತ್ತಿದ್ದ ಡಯಲಿಂಗ್ ಟೆಲಿಫೋನ್ ಅನ್ನು ಪಡೆಯಲು ಐದು ವರ್ಷ ಕಾಯಬೇಕಾಗಿದ್ದು, ಅದು ಬಂದ ಬಳಿಕ ಇವರ ಜೀವನವೇ ಬದಲಾದಂತೆ ಆಗಿದ್ದು; ಮೊದಲ ಸಲ ಮನೆಗೆ ಟಿವಿ ಬಂದಾಗ ಆದ ಅನುಭವ ಇವೆಲ್ಲವನ್ನೂ ಹಲವು ಸಂದರ್ಶನಗಳಲ್ಲಿ ಸುಂದರ್ ಪಿಚೈ ಮೆಲುಕು ಹಾಕಿದ್ದಿದೆ.

ಇದನ್ನೂ ಓದಿ: ಇವರಿಲ್ಲದೇ ಏನೂ ಇಲ್ಲ… ಭಾರತ ಮೂಲದ ಟೆಕ್ಕಿ ಅಶೋಕ್ ಎಲ್ಲುಸಾಮಿಯನ್ನು ಹಾಡಿಹೊಗಳಿದ ಇಲಾನ್ ಮಸ್ಕ್

ಸುಂದರ್ ಪಿಚೈ ಶಾಲಾ ದಿನಗಳಲ್ಲಿ ಸೈಕಲ್ ತುಳಿದುಕೊಂಡೇ ಶಾಲೆಗೆ ಹೋಗುತ್ತಿದ್ದರು. ಗ್ರಾಮೀಣ ಭಾಗದ ಕಚ್ಛಾ ರಸ್ತೆ, ಸಾಕಷ್ಟು ಏರಿ, ದಿಣ್ಣೆಗಳಿರುವ ಪ್ರದೇಶಗಳಲ್ಲಿ ಅವರು ಸೈಕಲ್ ಏರಿ ಹೋಗುತ್ತಿದ್ದರು. ಬಹಳ ವರ್ಷಗಳ ಬಳಿಕ ಗೇರ್ ಇರುವಂತಹ ಸೈಕಲ್ ಅನ್ನು ಕಂಡಾಗ ಅವರಿಗೆ ಆದ ಖುಷಿಯೇ ಬೇರೆಯಂತೆ. ಈ ರೀತಿಯಲ್ಲಿ ಹೊಸ ಗ್ಯಾಜೆಟ್​ಗಳು, ತಂತ್ರಜ್ಞಾನಗಳು ಜೀವನದಲ್ಲಿ ಪರಿವರ್ತನೆ, ಖುಷಿ ತರುವುದನ್ನು ಅನುಭವಿಸುತ್ತಾ ಬೆಳೆದವರು ಸುಂದರ್ ಪಿಚೈ.

ತಮ್ಮ ಜೀವನದಲ್ಲಿ ತಂತ್ರಜ್ಞಾನ ಹೇಗೆ ಹೊಸ ಅಲೆ, ಹೊಸ ಖುಷಿ ತಂದಿತೋ, ಈಗ ಗೂಗಲ್ ಮೂಲಕ ಅಂಥ ಅನುಭವವನ್ನು ಜಗತ್ತಿನ ಎಲ್ಲರಿಗೂ ಸದಾ ಹಂಚುವ ಕಾಯಕದಲ್ಲಿ ಸಿಇಒ ಸುಂದರ್ ಪಿಚೈ ತೊಡಗಿದ್ದಾರೆ.

ಇದನ್ನೂ ಓದಿ: ಚಿಕ್ಕಂದಿನಲ್ಲಿ ಸಹಪಾಠಿಗಳಿಂದ ಅವಹೇಳನಕ್ಕೊಳಗಾಗುತ್ತಿದ್ದ ಹುಡುಗಿ ಇವತ್ತು ಮೈನಿಂಗ್ ಸಾಮ್ರಾಜ್ಯದ ಒಡತಿ

ನೆಲದ ಮೇಲೆ ಮಲಗುತ್ತಿದ್ದ ಪಿಚೈ

ಮದುರೈನಲ್ಲಿ ಬಾಲ್ಯದ ದಿನಗಳಲ್ಲಿ ಸುಂದರ್ ಪಿಚೈ ಮನೆಯ ಹಾಲ್​ನಲ್ಲಿ ನೆಲದ ಮೇಲೆಯೇ ಮಲಗಬೇಕಿತ್ತು. ಅವರ ಬಾಲ್ಯದಲ್ಲಿ ನಾನಾ ಕಷ್ಟಗಳನ್ನು ಕಂಡವರು. ಬರಗಾಲ ಆವರಿಸಿದಾಗ ಕುಡಿಯಲು ನೀರು ಸಿಗುವುದೂ ದುಸ್ತರವಾಗಿತ್ತು. ಆ ಭಯಾನಕ ಅನುಭವದ ಪರಿಣಾಮವಾಗಿ ಸುಂದರ್ ಪಿಚೈ ಈಗಲೂ ಕೂಡ ತಮ್ಮ ಹಾಸಿಗೆ ಪಕ್ಕದಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರಂತೆ. ಇಲ್ಲವಾದರೆ ಅವರಿಗೆ ನಿದ್ದೆಯೇ ಹತ್ತುವುದಿಲ್ಲ. ಆದರೂ ಕೂಡ ಸುಂದರ್ ಪಿಚೈ ಅವರಿಗೆ ಇವತ್ತಿನ ಟೆಕ್ ಜಗತ್ತಿಗಿಂತ ಆವತ್ತಿನ ಸರಳತೆ ಬಹಳ ಇಷ್ಟವಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?