Inspiring: ಚಿಕ್ಕಂದಿನಲ್ಲಿ ಸಹಪಾಠಿಗಳಿಂದ ಅವಹೇಳನಕ್ಕೊಳಗಾಗುತ್ತಿದ್ದ ಹುಡುಗಿ ಇವತ್ತು ಮೈನಿಂಗ್ ಸಾಮ್ರಾಜ್ಯದ ಒಡತಿ

Inspiring Story of Priya Agarwal Hebbar: ಅನಿಲ್ ಅಗರ್ವಾಲ್ ನೇತೃತ್ವದ ವೇದಾಂತ ಗ್ರೂಪ್ ಸಂಸ್ಥೆ ಬಳಿ ವಿವಿಧ ಮೈನಿಂಗ್ ಕಂಪನಿಗಳು, ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿವೆ. ಅವರ ಮಗಳು ಪ್ರಿಯಾ ಅಗರ್ವಾಲ್ ಹೆಬ್ಬಾರ್ ಹಿಂದೂಸ್ತಾನ್ ಜಿಂಕ್ ಕಂಪನಿಯ ಛರ್ಮನ್. ಪುರುಷರಿಂದಲೇ ಮಾತ್ರ ಸಾಧ್ಯ ಎನ್ನುವಂತಹ ಮೈನಿಂಗ್ ಕ್ಷೇತ್ರದಲ್ಲಿ ಪ್ರಿಯಾ ಮಿಂಚುತ್ತಿದ್ದಾರೆ. ಅಪ್ಪನ ಹೆಸರಿನಲ್ಲಿ ಅಲ್ಲ, ತಮ್ಮ ಶ್ರಮ, ಮಾನಸಿಕ ಕಾಠಿಣ್ಯತೆಯೊಂದಿಗೆ ಅವರು ತಮ್ಮ ಕೌಶಲ್ಯ ಮತ್ತು ಕ್ಷಮತೆಯನ್ನು ಸಾಬೀತುಪಡಿಸಿದ್ದಾರೆ. ಅವರ ಜೀವನ ಕಥೆ ನಿಜಕ್ಕೂ ಸ್ಪೂರ್ತಿ ತರುವಂಥದ್ದು.

Inspiring: ಚಿಕ್ಕಂದಿನಲ್ಲಿ ಸಹಪಾಠಿಗಳಿಂದ ಅವಹೇಳನಕ್ಕೊಳಗಾಗುತ್ತಿದ್ದ ಹುಡುಗಿ ಇವತ್ತು ಮೈನಿಂಗ್ ಸಾಮ್ರಾಜ್ಯದ ಒಡತಿ
ಪ್ರಿಯಾ ಅಗರ್ವಾಲ್ ತಮ್ಮ ಪತಿ ಮತ್ತು ಮಗಳು ಹಾಗೂ ಸಾಕು ನಾಯಿಗಳೊಂದಿಗೆ...
Follow us
|

Updated on: Jun 09, 2024 | 3:24 PM

ನವದೆಹಲಿ, ಜೂನ್ 9: ಭಾರತದ ಅತಿದೊಡ್ಡ ಉದ್ಯಮ ಸಾಮ್ರಾಜ್ಯಗಳಲ್ಲಿ ಒಂದಾದ ವೇದಾಂತ ಗ್ರೂಪ್​ನ ಮಾಲೀಕರ ಮಗಳು, ಹಾಗೂ ಹಿಂದೂಸ್ತಾನ್ ಜಿಂಕ್ ಕಂಪನಿಯ ಛೇರ್ಮನ್ ಪ್ರಿಯಾ ಅಗರ್ವಾಲ್ ಹೆಬ್ಬಾರ್ (Priya Agarwal Hebbar) ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡೂ ಕೂಡ ಬಹಳ ಜನರಿಗೆ ಮಾದರಿಯಾಗಬಲ್ಲಷ್ಟು ರೋಚಕವಾಗಿದೆ. ಅಪ್ಪ ಅನಿಲ್ ಅಗರ್ವಾಲ್ ಭಾರತದ ಲೋಹದ ದೊರೆ (ಮೆಟಲ್ ಕಿಂಗ್) ಎಂದೇ ಖ್ಯಾತರಾದವರು. ಪ್ರಿಯಾ ಓದಿದ್ದು ಮತ್ತು ಕನಸು ಕಟ್ಟಿಕೊಂಡಿದ್ದು ಸಿನಿಮಾ, ಮ್ಯೂಸಿಕ್, ಸೈಕಾಲಜಿ ಇತ್ಯಾದಿ ಮಾನವೀಯ ಮತ್ತು ಮನರಂಜಾ ಪ್ರಪಂಚವನ್ನು. ಆದರೆ, ಅಚಾನಕ್ಕಾಗಿ ಮೈನಿಂಗ್ ಎಂಬ ಪುರುಷ ಪ್ರಪಂಚಕ್ಕೆ ಅವರನ್ನು ದೂಡಲಾಗಿತ್ತು. ಚಿಕ್ಕಂದಿನಿಂದಲೂ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುತ್ತಾ ಬಂದ ಪ್ರಿಯಾ ಅಗರ್ವಾಲ್​ಗೆ ಮೈನಿಂಗ್ ಪ್ರಪಂಚ ಹೆಚ್ಚು ದಿನ ಸಮಸ್ಯೆಯಾಗಿ ಉಳಿಯಲಿಲ್ಲ. ಎಲ್ಲವನ್ನೂ ಮೆಟ್ಟಿನಿಂತು ಸಾಧಿಸಿ ಬೆಳೆದರುವ ಈಕೆ ಇವತ್ತು ಒಬ್ಬ ಮಹಿಳೆ ಅಬಲೆಯಲ್ಲ ಎಂಬುದನ್ನು (Inspiring story) ನಿಚ್ಚಳವಾಗಿ ಸಾಬೀತು ಮಾಡಿದ್ದಾರೆ.

ಒಂದು ದೊಡ್ಡ ಉದ್ಯಮಿಯ ಮಗಳಾದ್ದರಿಂದ ಪ್ರಿಯಾ ಯಶಸ್ಸು ಪಡೆದಿದ್ದಾರೆ. ಇಲ್ಲವಾದರೆ ಸಾಧಿಸಲು ಆಗುತ್ತಿರಲಿಲ್ಲ ಎಂದು ಹೇಳುವವರು ಇರಬಹುದು. ಆದರೆ, ಕಷ್ಟ, ನೋವುಗಳು ಎಲ್ಲಾ ಮನುಷ್ಯರಿಗೂ ಒಂದೇ. ವೇದಾಂತ ಗ್ರೂಪ್​ನ ಮುಖ್ಯಸ್ಥ ಅನಿಲ್ ಅಗರ್ವಾಲ್ ಅವರು ಹಿಂದೊಮ್ಮೆ ಲಂಡನ್​ನಲ್ಲಿ ನೆಲಸಿದ್ದರು. ಆಗಿನ್ನೂ ಪ್ರಿಯಾ ಅಗರ್ವಾಲ್ ಏಳೆಂಟು ವರ್ಷದ ಬಾಲಕಿ ಇರಬಹುದು. ಬೋರ್ಡಿಂಗ್ ಸ್ಕೂಲ್​ಗೆ ಆಕೆಯನ್ನು ಸೇರಿಸುತ್ತಾರೆ. ಆಗಿನ ಬ್ರಿಟನ್ ಈಗಿನಂತಿರಲಿಲ್ಲ. ಪ್ರಿಯಾ ಇದ್ದ ಶಾಲೆಯಲ್ಲಿ ಬಿಳಿಯೇತರ ಹುಡುಗಿ ಈಕೆ ಮಾತ್ರವೇ ಇದ್ದಿರುತ್ತಾಳೆ. ಸಹಪಾಠಿಗಳು ಈಕೆಯ ಪಕ್ಕ ಕೂರಲು ಹಿಂದೆ ಮುಂದೆ ನೋಡುತ್ತಿದ್ದುದುಂಟು. ಅಪಹಾಸ್ಯ ಮಾಡುವುದು, ಅವಹೇಳನ ಮಾಡುವುದು, ಗೇಲಿ ಮಾಡುವುದು ಇವೆಲ್ಲಾ ನಡೆದಿತ್ತು. ಇದು ಪ್ರಿಯಾರನ್ನು ಮಾನಸಿಕವಾಗಿ ಜರ್ಝರಿತಗೊಳಿಸಿತ್ತು.

ಇದನ್ನೂ ಓದಿ: ಜಾಗತಿಕ 500 ಅತಿ ಶ್ರೀಮಂತರಲ್ಲಿ ಅಮೆರಿಕದವರೇ ಸಿಂಹಪಾಲು; ಪಟ್ಟಿಯಲ್ಲಿದ್ದಾರೆ 25 ಭಾರತೀಯರು

ಅಪ್ಪ ಹೇಳಿದ ಎರಡು ಸಲಹೆ ಈಕೆಯನ್ನು ಎದ್ದುನಿಲ್ಲಿಸಿತ್ತು…

ಶಾಲೆಯಲ್ಲಿ ತನಗೆ ಆಗುತ್ತಿದ್ದ ಅವಮಾನವನ್ನು ಪ್ರಿಯಾ ತನ್ನ ತಂದೆ ಬಳಿ ಹೇಳಿಕೊಳ್ಳುತ್ತಾಳೆ. ಅನಿಲ್ ಅಗರ್ವಾಲ್ ತಮ್ಮ ಮಗಳಿಗೆ ಎರಡು ಹಿತವಚನ ಹೇಳುತ್ತಾರೆ. ಮೊದಲನೆಯದು, ಯಶಸ್ಸು ಪಡೆಯಬೇಕಾದರೆ ಸಂಕಷ್ಟದಲ್ಲಿ ಹಿತ ಕಾಣಬೇಕು. ಎರಡನೆಯದು, ಹೊಸ ದೇಶದಲ್ಲಿ ಯಶಸ್ಸು ಪಡೆಯಬೇಕಾದರೆ ನಾವು ಮಾಡುವ ಕೆಲಸದಲ್ಲಿ ಇತರರಿಗಿಂತ ಶೇ. 25ರಷ್ಟು ಹೆಚ್ಚು ಕ್ಷಮತೆ ಹೊಂದಿರುವುದು ಮುಖ್ಯ. ಈ ಎರಡು ಸಲಹೆಗಳನ್ನು ಪ್ರಿಯಾ ಅಗರ್ವಾಲ್ ಈಗಲೂ ನೆನಪಿಸಿಕೊಳ್ಳುತ್ತಾರೆ.

ಪುರುಷ ಪ್ರಾಬಲ್ಯ ಪ್ರಪಂಚವನ್ನು ಪ್ರಿಯಾ ಹೇಗೆ ನಿಭಾಯಿಸ್ತಾರೆ?

ಪ್ರಿಯಾ ಓದಿದ್ದು ಸೈಕಾಲಜಿ ಮತ್ತು ಫಿಲಂ ಸ್ಟಡೀಸ್. ಓದಿನ ಬಳಿಕ ಮ್ಯೂಸಿಕ್ ಇತ್ಯಾದಿ ಸಂಬಂಧಿತ ಕ್ಷೇತ್ರದಲ್ಲಿ ತಮ್ಮದೇ ಪ್ರಪಂಚದ ಕನಸು ಕಟ್ಟಿಕೊಂಡಿದ್ದರು. ಅದು 2011-12ರ ಕಾಲಘಟ್ಟ. ಆಯಿಲ್ ಅಂಡ್ ಗ್ಯಾಸ್ ಕಂಪನಿಯಾದ ಕೇರ್ನ್ಸ್ ಇಂಡಿಯಾದ ಬೋರ್ಡ್ ಮೆಂಬರ್ ಆಗಿ ಪ್ರಿಯಾ ಅಗರ್ವಾಲ್ ನೇಮಕವಾಗಿದೆ ಎನ್ನುವಂತಹ ಸುದ್ದಿ ಬಿತ್ತರವಾಗಿತ್ತು. ಸ್ವತಃ ಪ್ರಿಯಾಗೇ ಶಾಕ್ ಕೊಟ್ಟಿತ್ತು ಅದು. ತಮ್ಮ ಜೀವನದ ದಾರಿ ಬೇರೆಯೇ ಎಂದು ಆಲೋಚಿಸಿದ್ದವಳಿಗೆ ಆ ಸುದ್ದಿ ಅನಿರೀಕ್ಷಿತವಾಗಿತ್ತು.

ಅಪ್ಪನಿಗೆ ಕರೆ ಮಾಡಿ, ಇದೇನು ಮಾಡಿದಿರಿ ಎಂದು ಕೇಳುತ್ತಾರೆ. ಅಪ್ಪಟ ಟ್ಯಾಸ್ಕ್ ಮಾಸ್ಟರ್ ಆದ ಅನಿಲ್ ಅಗರ್ವಾಲ್ ತಮ್ಮ ಮಗಳಿಗೆ ಆದೇಶ ಕೊಡುತ್ತಾರೆ: ‘ಆಫೀಸ್​ಗೆ ಹೋಗಲು ಶುರು ಮಾಡು’.

ಇದನ್ನೂ ಓದಿ: ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ

ಅನಿಲ್ ಅಗರ್ವಾಲ್ ಅವರ ಉದ್ಯಮವೆಲ್ಲವೂ ಬಹುತೇಕ ಗಣಿಗಾರಿಕೆ ಇತ್ಯಾದಿಗಳಲ್ಲಿ ಹರಡಿಕೊಂಡಿತ್ತು. ಈಗೀಗ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಪಸರಿಸಿದೆ. ಮೈನಿಂಗ್ ಎಂದರೆ ಅದು ರಫ್ ಅಂಡ್ ಟಫ್ ಇರುವಂಥ ಕ್ಷೇತ್ರ. ಪುರುಷರು ಮಾತ್ರವೇ ಕೆಲಸ ಮಾಡಬಹುದು ಎನಿಸುವಂತಹ ಕ್ಷೇತ್ರ. ಇಂಥ ಕ್ಷೇತ್ರಕ್ಕೆ ಪ್ರಿಯಾ ಅಚಾನಕ್ಕಾಗಿ ನೂಕಲ್ಪಡುತ್ತಾರೆ. ವಯಸ್ಸು ಬಹಳ ಚಿಕ್ಕದು. ಬೋರ್ಡ್ ಮೀಟಿಂಗ್​ನಲ್ಲಿ ದಶಕಗಳ ಕಾಲ ಅನುಭವಿಗಳಾದವರು ಇದ್ದರು. ಪ್ರಿಯಾಗೆ ದಿಕ್ಕು ತೋಚದಂತಾಗಿತ್ತಂತೆ. ಆದರೂ ಕೂಡ ಅವರು ನಿಧಾನವಾಗಿ ಹಿಡಿತ ಸಾಧಿಸಲು ತೊಡಗಿದರು. ಮೈನಿಂಗ್ ಸ್ಥಳಗಳಿಗೆ ಸ್ವತಃ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಆರಂಭಿಸಿದರು.

ಇವತ್ತು ಹಿಂದೂಸ್ತಾನ್ ಜಿಂಕ್ ಕಂಪನಿಯ ಛೇರ್ಮನ್ ಸ್ಥಾನವನ್ನು ಅವರು ನಿಭಾಯಿಸುತ್ತಿದ್ದಾರೆ. ಅಪ್ಪಟ ಮೈನಿಂಗ್ ಕಂಪನಿಯಾದ ಇದರಲ್ಲಿ ಶೇ. 20ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ. ಜಾಗತಿಕ ಸರಾಸರಿಯಲ್ಲಿ ಮಹಿಳಾ ಸಿಬ್ಬಂದಿ ಸಂಖ್ಯೆ ಇದೆ. ಮುಂದಿನ ದಿನಗಳಲ್ಲಿ ಒಟ್ಟಾರೆ ಸಿಬ್ಬಂದಿಯಲ್ಲಿ ಮಹಿಳೆಯರ ಸಂಖ್ಯೆ ಶೇ. 50ಕ್ಕೆ ಹೆಚ್ಚಿಸಬೇಕೆನ್ನುವುದು ಪ್ರಿಯಾ ಕನಸು.

ರಾಜಸ್ಥಾನದಲ್ಲಿ ಸಿಲ್ವರ್ ಮೈನಿಂಗ್ ಹೊಂದಿರುವ ಹಿಂದೂಸ್ತಾನ್ ಜಿಂಕ್ ಸಂಸ್ಥೆಯಲ್ಲಿ ಮಹಿಳೆಯರೂ ಮೈನಿಂಗ್​ನಲ್ಲಿ ತೊಡಗುತ್ತಾರೆ. ದೊಡ್ಡದೊಡ್ಡ ವಾಹನ ಚಲಾಯಿಸುವುದರಿಂದ ಹಿಡಿದು ಭಾರವಾದ ವಸ್ತುಗಳನ್ನು ಎತ್ತುವವರೆಗೂ ವಿವಿಧ ಕೆಲಸಗಳನ್ನು ಮಹಿಳೆಯರೂ ಮಾಡುತ್ತಾರಂತೆ. ಅಷ್ಟೇ ಅಲ್ಲ, ಹಿಂದೂಸ್ತಾನ್ ಜಿಂಕ್​ನಲ್ಲಿ ಮಹಿಳೆಯರು ಮಾತ್ರವೇ ಇರುವ ರಕ್ಷಣಾ ತಂಡವೊಂದನ್ನು ಕಟ್ಟಲಾಗಿದೆಯಂತೆ. ಭಾರತದಲ್ಲಿ ಇಂಥದ್ದೊಂದು ಇದೇ ಮೊದಲು ಎನ್ನುತ್ತಾರೆ ಪ್ರಿಯಾ ಅಗರ್ವಾಲ್.

ಇದನ್ನೂ ಓದಿ: ಷೇರು ಮಾರುಕಟ್ಟೆಯ ಬಂಪರ್ ಫಲ ಪಡೆದ ಚಂದ್ರಬಾಬು ನಾಯ್ಡು ಪತ್ನಿ; ಐದು ದಿನದಲ್ಲಿ 584 ಕೋಟಿ ರೂ ಸಂಪತ್ತು ಹೆಚ್ಚಿಸಿಕೊಂಡ ಭುವನೇಶ್ವರಿ

ಕನ್ನಡಿಗನನ್ನು ಮದುವೆಯಾದ ಪ್ರಿಯಾ…

ಪ್ರಿಯಾ ಅಗರ್ವಾಲ್ ಅವರು ಮಂಗಳೂರು ಮೂಲದ ಆಕರ್ಷ್ ಕೆ ಹೆಬ್ಬಾರ್ ಎಂಬುವವರನ್ನು ವರಿಸಿದ್ದಾರೆ. ಇಬ್ಬರೂ ಕೂಡ ಬಾಲ್ಯ ಸ್ನೇಹಿತರು. ಆದರೆ ಪ್ರೀತಿಸಿ ವಿವಾಹವಾಗಲು ನಿರ್ಧರಿಸಿದಾಗ ಎರಡೂ ಕಡೆಯ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೂ ಸಂಯಮದಿಂದ ಇಬ್ಬರೂ ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದಾರೆ.

ಆಕರ್ಷ್ ಹೆಬ್ಬಾರ್ ಅವರು ವೇದಾಂತ ಗ್ರೂಪ್​ನಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕಂಪನಿಯ ಗ್ಲೋಬಲ್ ಎಂಡಿಯಾಗಿದ್ದಾರೆ. ಭಾರತದ ಮೊದಲ ಸೆಮಿಕಂಡಕ್ಟರ್ ಮತ್ತು ಡಿಸ್​ಪ್ಲೇ ಫ್ಯಾಬ್ರಿಕೇಶನ್ ಯೂನಿಟ್ ಸ್ಥಾಪಿಸುವ ದೊಡ್ಡ ಆಕಾಂಕ್ಷೆಯಲ್ಲಿ ಅವರಿದ್ದಾರೆ.

ಪ್ರಿಯಾ ಮತ್ತು ಆಕರ್ಷ್ ಹೆಬ್ಬಾರ್ ಅವರಿಗೆ ಒಂಬತ್ತು ವರ್ಷದ ಮಗಳಿದ್ದಾಳೆ. ತನ್ನಂತೆ ತನ್ನ ಮಗು ಕೂಡ ಸ್ವತಂತ್ರ ಯೋಚನೆ, ಶ್ರಮ ಜೀವನ ಸಾಗಿಸಲು ಪ್ರೇರೇಪಿಸುವಂತಹ ವಾತಾವರಣವನ್ನು ಪ್ರಿಯಾ ನಿರ್ಮಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್