ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ

Personal Loan prepayment charges and other details: ಪರ್ಸನಲ್ ಲೋನ್​ನಲ್ಲಿ ಬಡ್ಡಿದರ ಹೆಚ್ಚಿರುವುದರಿಂದ ತುರ್ತು ಸಂದರ್ಭಕ್ಕೆ ಮಾತ್ರ ಅದನ್ನು ತೆಗೆದುಕೊಳ್ಳಬೇಕು. ಹಾಗೊಂದು ವೇಳೆ ಆ ಲೋನ್ ತೆಗೆದುಕೊಂಡರೂ ಸಾಧ್ಯವಾದಷ್ಟೂ ಬೇಗ ಅದನ್ನು ತೀರಿಸುವತ್ತ ನಿಮ್ಮ ಗಮನ ಇರಲಿ. ದೈನಂದಿನ ವೆಚ್ಚದಲ್ಲಿ ಉಳಿತಾಯ, ಕಡಿಮೆ ರಿಟರ್ನ್ಸ್ ಕೊಡುವ ಎಫ್​ಡಿ ಇತ್ಯಾದಿಯಲ್ಲಿ ಹಣ ಇದ್ದರೆ ಅದನ್ನು ಹಿಂಪಡೆಯುವುದು ಇತ್ಯಾದಿ ಕ್ರಮಗಳನ್ನು ಅನುಸರಿಸಬಹುದಾ ನೋಡಿ...

ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 04, 2024 | 4:00 PM

ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ (Personal loan) ಸಾಮಾನ್ಯವಾಗಿ ಯಾವುದೇ ಅಡಮಾನ ಅಥವಾ ಸೆಕ್ಯೂರಿಟಿ ಇಲ್ಲದೇ ಕೊಡಲಾಗುವ ಸಾಲವಾಗಿದೆ. ಆದರೆ, ಇದಕ್ಕೆ ವಿಧಿಸಲಾಗುವ ಬಡ್ಡಿದರವಂತೂ ಬಹಳ ಅಧಿಕ ಇರುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಶೇ. 12ರ ದರದಲ್ಲಿ ಸಾಲ ಸಿಗುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಷ್ಟೂ ಬಡ್ಡಿದರ ಹೆಚ್ಚಿರುತ್ತದೆ. ಕೆಲ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಪರ್ಸನಲ್ ಲೋನ್​ಗೆ ಶೇ. 18ಕ್ಕಿಂತಲೂ ಹೆಚ್ಚು ಬಡ್ಡಿ ವಿಧಿಸುತ್ತವೆ. ಅಧಿಕ ದರದ ವೈಯಕ್ತಿಕ ಸಾಲಗಳು ಯಾವತ್ತಿಗೂ ನಿಮ್ಮ ಕೊನೆಯ ಆಯ್ಕೆ ಆಗಿರಬೇಕು ಎನ್ನುತ್ತಾರೆ ತಜ್ಞರು.

ತುರ್ತು ಸಂದರ್ಭಕ್ಕೆ ನೀವು ಪರ್ಸನಲ್ ಲೋನ್ ತೆಗೆದುಕೊಂಡಿರಬಹುದು. ಇದನ್ನು ಆದಷ್ಟೂ ಬೇಗ ತೀರಿಸುವತ್ತ ನಿಮ್ಮ ಗಮನ ಇರಲಿ. ಲೋನ್​ನ ಪ್ರೀಪೇಮೆಂಟ್ ಮಾಡಬಹುದು. ಸಾಧ್ಯವಾದಷ್ಟೂ ಹಣ ಉಳಿಸಿ ಅದನ್ನು ಪ್ರೀಪೇಮೆಂಟ್​ಗೆ ಬಳಸಬಹುದು. ಹೆಚ್ಚಿನ ಬ್ಯಾಂಕುಗಳು ಸಾಲ ಕೊಟ್ಟಾಗ ನಿಗದಿಯಾಗುವ ಇಎಂಐನಲ್ಲಿ ಆರಂಭಿಕ ಕಂತುಗಳಲ್ಲಿ ಹೆಚ್ಚಿನ ಬಡ್ಡಿ ವಿಧಿಸುತ್ತವೆ. ಅಂದರೆ ನೀವು ಒಂದು ವರ್ಷ ಕಾಲ ಒಟ್ಟು 2 ಲಕ್ಷ ರೂ ಮೊತ್ತದಷ್ಟು ಇಎಂಐಗಳನ್ನು ಕಟ್ಟಿದ್ದಲ್ಲಿ ಅಸಲು ಹಣ 50,000 ರೂ ಮಾತ್ರವೇ ತೀರಿರಬಹುದು. ಉಳಿದ ಹಣ ಬಡ್ಡಿಗೆ ಕಡಿತವಾಗುತ್ತದೆ. ಸುರಕ್ಷತೆ ದೃಷ್ಟಿಯಿಂದ ಬ್ಯಾಂಕುಗಳು ಈ ಕ್ರಮ ಕೈಗೊಳ್ಳುತ್ತವೆ.

ಇದನ್ನೂ ಓದಿ: ಪಿಪಿಎಫ್​ನಿಂದ ಟ್ರಿಪಲ್ ಲಾಭ; ಉಳಿತಾಯ, ದೀರ್ಘಾವಧಿ ಹೂಡಿಕೆ, ತೆರಿಗೆ ಲಾಭ

ಪ್ರೀಪೇಮೆಂಟ್ ಮಾಡುವ ಮುನ್ನ ಈ ವಿಷಯ ತಿಳಿದಿರಲಿ…

ಯಾವುದೇ ಸಾಲವನ್ನೂ ನೀವು ಮುಂಗಡವಾಗಿ ಕಟ್ಟಿ ತೀರಿಸಲು ಅವಕಾಶ ಇರುತ್ತದೆ. ಆದರೆ, ಹೆಚ್ಚಿನ ಬ್ಯಾಂಕುಗಳು ಇದಕ್ಕೆ ಶುಲ್ಕ ವಿಧಿಸುತ್ತವೆ. ಕೆಲವೇ ಬ್ಯಾಂಕುಗಳಲ್ಲಷ್ಟೇ ಪ್ರೀಪೇಮೆಂಟ್ ಚಾರ್ಜಸ್ ಇರುವುದಿಲ್ಲ. ನೀವು ಸಾಲ ಪಡೆಯುವ ಮುನ್ನ ಬ್ಯಾಂಕ್​ನಲ್ಲಿ ಪ್ರೀಪೇಮೆಂಟ್ ಅವಧಿ ಮತ್ತು ಶುಲ್ಕ ಇತ್ಯಾದಿ ಮಾಹಿತಿ ಕೇಳಿ ತಿಳಿದುಕೊಳ್ಳಿ. ಅಥವಾ ಅದರ ನೆಟ್​ಬ್ಯಾಂಕಿಂಗ್ ಆ್ಯಪ್​ನಲ್ಲೂ ಅದರ ಮಾಹಿತಿ ಇರುತ್ತದೆ.

ಸಾಮಾನ್ಯವಾಗಿ ಪ್ರಮುಖ ಬ್ಯಾಂಕುಗಳು ಒಂದು ವರ್ಷದೊಳಗೆ ಪ್ರೀಪೇಮೆಂಟ್ ಮಾಡಿದರೆ ಬಾಕಿ ಅಸಲು ಹಣದ ಮೇಲೆ ಶೇ. 4ರಿಂದ 6ರಷ್ಟು ಮೊತ್ತದ ಶುಲ್ಕ ವಿಧಿಸಬಹುದು. ಒಂದು ವರ್ಷದ ಬಳಿಕ ಶುಲ್ಕ ವಿಧಿಸದೇ ಇರಬಹುದು ಅಥವಾ ಶುಲ್ಕ ಮೊತ್ತ ಕಡಿಮೆ ಮಾಡಬಹುದು. ಈ ವಿವರಗಳನ್ನು ನೀವು ತಿಳಿದಿರಬೇಕು.

ಇದನ್ನೂ ಓದಿ: ಹೂಡಿಕೆದಾರ ಮೀನಾಕ್ಷಿ ಶ್ರೀಕಾಂತ್ ಷೇರು ಒಲ್ಲೆ ಎನ್ನುವುದೇಕೆ? ಪಿರಾಮಿಡ್ ಸ್ಟ್ರಕ್ಚರ್ ರೀತಿಯಲ್ಲಿದೆ ಅವರ ಇನ್ವೆಸ್ಟ್​ಮೆಂಟ್ ಸ್ಟ್ರಾಟಿಜಿ

ನೀವು ಲೋನ್ ಪ್ರೀಪೇ ಮಾಡಿದರೆ ಸಾಲ ಬೇಗ ಮುಗಿಯುತ್ತದೆ. ಬಡ್ಡಿಹೊರೆ ಬಹಳಷ್ಟು ಕಡಿಮೆ ಆಗುತ್ತದೆ. ಉದಾಹರಣೆಗೆ ನೀವು ಐದು ಲಕ್ಷ ರೂ ಮೊತ್ತದ ಪರ್ಸನಲ್ ಲೋನ್ ಪಡೆದುಕೊಂಡು ಐದು ವರ್ಷ ಕಾಲ ಇಎಂಐ ಇದ್ದರೆ ಈ ಐದು ವರ್ಷದಲ್ಲಿ ನೀವು ಎರಡು ಲಕ್ಷ ರೂ ಆದರೂ ಬಡ್ಡಿ ಕಟ್ಟಿರುತ್ತೀರಿ.

ಹೀಗಾಗಿ, ನಿಮ್ಮ ಬಳಿ ಎಫ್​ಡಿ ಇತ್ಯಾದಿ ಠೇವಣಿಗಳಲ್ಲಿ ಹಣ ಇದ್ದರೆ ಅದನ್ನು ಬಿಡಿಸಿಕೊಂಡು ಪರ್ಸನಲ್ ಲೋನ್​ಗೆ ಮುಂಗಡವಾಗಿ ಪಾವತಿಸಬಹುದಾ ಯೋಚಿಸಿ. ನೀವು ಲೋನ್ ಪ್ರೀಪೇಮೆಂಟ್ ಮಾಡಿದಷ್ಟೂ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತಾ ಹೋಗುತ್ತದೆ ಎನ್ನುವುದು ಇನ್ನೊಂದು ಗಮನಾರ್ಹ ಅಂಶ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್