ಹೂಡಿಕೆದಾರ ಮೀನಾಕ್ಷಿ ಶ್ರೀಕಾಂತ್ ಷೇರು ಒಲ್ಲೆ ಎನ್ನುವುದೇಕೆ? ಪಿರಾಮಿಡ್ ಸ್ಟ್ರಕ್ಚರ್ ರೀತಿಯಲ್ಲಿದೆ ಅವರ ಇನ್ವೆಸ್ಟ್​ಮೆಂಟ್ ಸ್ಟ್ರಾಟಿಜಿ

Srikanth Meenakshi investment strategy: ಹೂಡಿಕೆದಾರ ಶ್ರೀಕಾಂತ್ ಮೀನಾಕ್ಷಿ ತಮ್ಮಲ್ಲಿನ ಹಣವನ್ನು ಈಕ್ವಿಟಿ ಮತ್ತು ಡೆಟ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಕುತೂಹಲವೆಂದರೆ ಅವರು ನೇರವಾಗಿ ಷೇರು, ಬಾಂಡ್ ಖರೀದಿಸುವುದಿಲ್ಲ. ಮ್ಯೂಚುವಲ್ ಫಂಡ್, ಇಟಿಎಫ್ ಮೂಲಕ ಈಕ್ವಿಟಿ ಮತ್ತು ಡೆಟ್ ಮಾರ್ಕೆಟ್​ಗಳಲ್ಲಿ ಹೂಡಿಕೆ ಮಾಡುತ್ತಾರೆ. ಹೆಲ್ತ್ ಇನ್ಷೂರೆನ್ಸ್ ಹೊಂದಿದ್ದಾರಾದರೂ ಟರ್ಮ್ ಇನ್ಷೂರೆನ್ಸ್ ಇಲ್ಲ. ಚಿನ್ನದ ಮೇಲೆ ಹೂಡಿಕೆ ಮಾಡಿಲ್ಲ. ಇಂಟರೆಸ್ಟಿಂಗ್ ಆಗಿದೆ ಮೀನಾಕ್ಷಿ ಅವರ ಹೂಡಿಕೆ ತಂತ್ರ.

ಹೂಡಿಕೆದಾರ ಮೀನಾಕ್ಷಿ ಶ್ರೀಕಾಂತ್ ಷೇರು ಒಲ್ಲೆ ಎನ್ನುವುದೇಕೆ? ಪಿರಾಮಿಡ್ ಸ್ಟ್ರಕ್ಚರ್ ರೀತಿಯಲ್ಲಿದೆ ಅವರ ಇನ್ವೆಸ್ಟ್​ಮೆಂಟ್ ಸ್ಟ್ರಾಟಿಜಿ
ಹೂಡಿಕೆ
Follow us
|

Updated on: May 30, 2024 | 2:38 PM

ಹೂಡಿಕೆದಾರ ಮತ್ತು ಹಣಕಾಸು ವಲಯದ ಆಂಟ್ರಪ್ರನ್ಯೂರ್ ಎನಿಸಿರುವ ಶ್ರೀಕಾಂತ್ ಮೀನಾಕ್ಷಿ (Srikanth Meenakshi) ಅವರು ಅಚ್ಚರಿ ಎಂಬಂತೆ ಷೇರುಗಳ ಮೇಲೆ ಮಾಡಿರುವ ಹೂಡಿಕೆ ಬಹಳ ನಗಣ್ಯ ಮೊತ್ತದ್ದಾಗಿದೆ. ಆದರೆ, ಮ್ಯೂಚುವಲ್ ಫಂಡ್ ಮೂಲಕ ಅವರು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ನೇರವಾಗಿ ಈಕ್ವಿಟಿಗೆ ಮಾಡಿರುವುದು ಬಹಳ ಕಡಿಮೆಯಂತೆ. ಹಾಗಂತ ಅವರು ದಿ ಮಿಂಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರ ಹೂಡಿಕೆಯ ಸಂರಚನೆ ಪಿರಾಮಿಡ್ ರೀತಿಯಲ್ಲಿದೆ. ಮ್ಯೂಚುವಲ್ ಫಂಡ್, ಬಾಂಡ್ ಮತ್ತು ಇಟಿಎಫ್​ಗಳಲ್ಲಿನ ಹೂಡಿಕೆಯು ಅತ್ಯಧಿಕ ಇದ್ದು ಇದು ಬುನಾದಿಯಂತೆ ಕೆಳಗಿದೆ. ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿರುವ ಷೇರುಗಳು ಮೇಲೆ ಇವೆ. ಇದು ತಾವು ಇವರೆಗೆ ಅನುಸರಿಸಿಕೊಂಡು ಬಂದಿರುವ ಹೂಡಿಕೆ ರೀತಿ ಎಂದು ಪ್ರೈಮ್ ಇನ್ವೆಸ್ಟರ್ ಕಂಪನಿಯ ಸಹ-ಸಂಸ್ಥಾಪಕ ಶ್ರೀಕಾಂತ್ ಮೀನಾಕ್ಷಿ ಹೇಳುತ್ತಾರೆ.

ಶ್ರೀಕಾಂತ್ ಸಂಪತ್ತು ಎಲ್ಲೆಲ್ಲಿವೆ?

  • ಶೇ. 63: ಈಕ್ವಿಟಿ
  • ಶೇ. 30: ಡೆಟ್
  • ಶೇ. 5: ತುರ್ತು ನಗದು
  • ಶೇ. 2: ರಿಯಲ್ ಎಸ್ಟೇಟ್

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿ ಕ್ಲೇಮ್ ಮಾಡದಿದ್ದರೆ ಪ್ರೀಮಿಯಮ್ ಇಳಿಕೆ?: ಪ್ರಾಧಿಕಾರದ ಸುತ್ತೋಲೆಯ ಮುಖ್ಯಾಂಶಗಳು

ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಶ್ರೀಕಾಂತ್?

  • ಈಕ್ವಿಟಿಗಳಲ್ಲಿ ಮಾಡಿರುವ ಹೂಡಿಕೆಯಲ್ಲಿ ಶೇ. 90ರಷ್ಟು ಮ್ಯೂಚುವಲ್ ಫಂಡ್ ಮೂಲಕ ಮಾಡಿದ್ದಾರೆ.
  • ಡೆಟ್ ಮಾರುಕಟ್ಟೆಯಲ್ಲೂ ಅವರು ಫಂಡ್​ಗಳ ಮೂಲಕವೇ ಹೂಡಿಕೆ ಮಾಡಿದ್ದಾರೆ.
  • ರಿಯಲ್ ಎಸ್ಟೇಟ್​ನಲ್ಲಿ ಅವರು ಹೂಡಿಕೆ ಮಾಡಿದ್ದಾರಾದರೂ ಬಹಳ ಅಲ್ಪ ಮೊತ್ತದ್ದು. ಎಂದೋ ತೆಗೆದಿಟ್ಟ ಜಮೀನು ಮಾತ್ರ ಉಳಿದಿದೆ. ಅದನ್ನೂ ಮಾರುವ ಆಲೋಚನೆಯಲ್ಲಿದ್ದಾರೆ.
  • ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಹೊಂದಿದ್ದಾರೆ. 10 ಲಕ್ಷ ರೂ ಕವರೇಜ್ ಇದೆ. ಇಡೀ ಕುಟುಂಬಕ್ಕೆ ಸೇರಿ 25 ಲಕ್ಷ ರೂ ಕವರೇಜ್ ಒದಗಿಸುವ ಟಾಪ್ ಅಪ್ ಪಾಲಿಸಿ ಕೂಡ ಹೊಂದಿದ್ದಾರೆ.

ಇವೆಲ್ಲದರಿಂದ ದೂರ ದೂರ…

ನೇರವಾಗಿ ಬಾಂಡ್ ಖರೀದಿಸಿಲ್ಲ, ಬ್ಯಾಂಕ್ ಡೆಪಾಸಿಟ್ ಇಟ್ಟಿಲ್ಲ. ನೇರವಾಗಿ ಸ್ಟಾಕ್ ಮೇಲೆ ಹೂಡಿಕೆ ಮಾಡಿರುವುದೂ ಕಡಿಮೆ. ಚಿನ್ನದ ಮೇಲೆ ಹೂಡಿಕೆ ಮಾಡಿಲ್ಲ. ಪಿಪಿಎಫ್ ಇತ್ಯಾದಿ ಸಣ್ಣ ಉಳಿತಾಯ ಸ್ಕೀಮ್ ಪಡೆದಿಲ್ಲ.

ಹೆಲ್ತ್ ಇನ್ಷೂರೆನ್ಸ್ ಹೊಂದಿರುವ ಅವರು ಟರ್ಮ್ ಇನ್ಷೂರೆನ್ಸ್ ಹಿಂಪಡೆದಿದ್ದಾರೆ. ಸಾಕಷ್ಟು ಫಂಡ್ ಇರುವುದರಿಂದ ವಿಮೆಯ ಅಗತ್ಯವಿಲ್ಲ ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: ಮಕ್ಕಳ ಉನ್ನತ ಶಿಕ್ಷಣಕ್ಕೆ 15 ವರ್ಷದಲ್ಲಿ ಮೂರು ಕೋಟಿ ರೂ ಗಳಿಸುವುದು ಹೇಗೆ?

ಷೇರುಗಳ ಮೇಲೆ ನೇರ ಹೂಡಿಕೆ ಮಾಡಿ ಕೈಸುಟ್ಟುಕೊಂಡಿರುವ ಮೀನಾಕ್ಷಿ

ಶ್ರೀಕಾಂತ್ ಮೀನಾಕ್ಷಿ ಅವರು ನೇರವಾಗಿ ಷೇರುಗಳ ಮೇಲೆ ಹೂಡಿಕೆ ಮಾಡಿರುವುದು ಬಹಳ ಕಡಿಮೆ. ಈ ಹಿಂದೆ ಅವರು ಷೇರುಗಳಲ್ಲಿ ಇನ್ವೆಸ್ಟ್ ಮಾಡಿ ಕೈಸುಟ್ಟುಕೊಂಡಿದ್ದಾರಂತೆ. ಹೂಡಿಕೆ ಮಾಡಲು ಸೂಕ್ತ ಕಂಪನಿ ಯಾವುದೆಂದು ನಿರ್ಧರಿಸುವ ತಿಳಿವಳಿಕೆ ತನಗೆ ಇಲ್ಲ. ಒಂದು ಕಂಪನಿಯ ಭವಿಷ್ಯ ಅದರ ಕಾರ್ಪೊರೇಟ್ ಆಡಳಿತ ಇತ್ಯಾದಿ ಮೇಲೆ ಅವಲಂಬಿತವಾಗಿರುತ್ತದೆ. ಅದು ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಹೀಗಾಗಿ, ತನಗೆ ಷೇರುಗಳನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳುವ ಶ್ರೀಕಾಂತ್, ಮ್ಯೂಚುವಲ್ ಫಂಡ್ ಮೂಲಕ ಷೇರುಗಳ ಮೇಲೆ ಹೂಡಿಕೆ ಮಾಡುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ