ಮಕ್ಕಳ ಉನ್ನತ ಶಿಕ್ಷಣಕ್ಕೆ 15 ವರ್ಷದಲ್ಲಿ ಮೂರು ಕೋಟಿ ರೂ ಗಳಿಸುವುದು ಹೇಗೆ?

Earning 3 crores in 15 years: ವರ್ಷದಲ್ಲಿ ಯಾವುದಾದರೂ ಅಗತ್ಯತೆಗೆ ಎರಡರಿಂದ ಮೂರು ಕೋಟಿ ರೂ ಬೇಕಾಗಬಹುದು. ಅದಕ್ಕೆ ಈಗಿನಿಂದಲೇ ಹಣ ಹೊಂದಿಸುವುದು ಉತ್ತಮ. ನೀವು ತಿಂಗಳಿಗೆ 50,000 ರೂ ಹೂಡಿಕೆ ಮಾಡಬಲ್ಲಿರಾದರೆ ಮ್ಯೂಚುವಲ್ ಫಂಡ್ ಎಸ್​ಐಪಿ ಮೂಲಕ 15 ವರ್ಷದಲ್ಲಿ ಎರಡು ಕೋಟಿ ರೂನಿಂದ ಮೂರೂವರೆ ಕೋಟಿ ರೂವರೆಗೆ ಹಣ ಸಂಗ್ರಹಿಸಲು ಸಾಧ್ಯ. ಅದಕ್ಕೆ ಮ್ಯೂಚುವಲ್ ಫಂಡ್ ವರ್ಷಕ್ಕೆ ಕನಿಷ್ಠ ಶೇ. 10ರಷ್ಟಾದರೂ ಬೆಳೆಯಬೇಕು. ಈಗಂತೂ ಫಂಡ್​ಗಳು ಶೇ. 15ರಷ್ಟು ವಾರ್ಷಿಕ ರಿಟರ್ನ್ ನೀಡುವುದು ಸಾಮಾನ್ಯ.

ಮಕ್ಕಳ ಉನ್ನತ ಶಿಕ್ಷಣಕ್ಕೆ 15 ವರ್ಷದಲ್ಲಿ ಮೂರು ಕೋಟಿ ರೂ ಗಳಿಸುವುದು ಹೇಗೆ?
ಉನ್ನತ ಶಿಕ್ಷಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 27, 2024 | 4:52 PM

ನಾವು ಮೂರು ರೀತಿಯ ಹಣಕಾಸು ಪ್ಲಾನ್​ಗಳನ್ನು ಮಾಡಿಕೊಳ್ಳಬೇಕು. ಒಂದು, ಅಲ್ಪಾವಧಿ ಅಥವಾ ತುರ್ತು ಅಗತ್ಯತೆಗಳಿಗೆ ಹಣ ಶೇಖರಿಸಿಡಬೇಕು. ಇನ್ನೊಂದು, ಮಧ್ಯಮಾವಧಿ ಅಗತ್ಯತೆಗಳು; ಮಗದೊಂದು ದೀರ್ಘಾವಧಿ ಅಗತ್ಯತೆಗಳಿಗೆ ಹಣ ಹೊಂದಿಸಬೇಕು. ಇಲ್ಲಿ ಮಧ್ಯಮಾವಧಿಯ ಅಗತ್ಯತೆಗಳು (medium term expenses) ಏನಾದರೂ ಆಗಬಹುದು. ಮನೆ ನಿರ್ಮಾಣ, ಮಕ್ಕಳ ಶಿಕ್ಷಣ, ಮಕ್ಕಳ ಮದುವೆ ಇತ್ಯಾದಿ. ದೀರ್ಘಾವಧಿ ಅಗತ್ಯತೆಗಳೆಂದರೆ ಅದು ನಿವೃತ್ತಿ ನಂತರದ ದಿನಗಳದ್ದಾಗಿರುತ್ತದೆ. ಮಧ್ಯಮಾವಧಿಯ ಅಗತ್ಯತೆಗಳು ಸಾಮಾನ್ಯವಾಗಿ ಅನಿವಾರ್ಯವಾಗಿಬಿಡಬಹುದು. ಈ ಮೂರು ರೀತಿಯ ಅವಧಿಗಳ ಅವಶ್ಯಕತೆಗಳಿಗೆ ಮೊದಲಿಂದಲೇ ಸಿದ್ಧಗೊಳ್ಳಬೇಕಾಗುತ್ತದೆ.

ಇವತ್ತು ನಿಮಗೆ ಮಗುವಾಗಿದೆ ಎಂದರೆ ಇನ್ನು, 15 ವರ್ಷ ಬಳಿಕ ಆ ಮಗುವಿನ ವಯಸ್ಸು ಕಾಲೇಜಿಗೆ ಹಂತಕ್ಕೆ ಹೋಗಿರುತ್ತದೆ. ಪಿಯುಸಿ ಬಳಿಕ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಅಥವಾ ಬೇರಾವುದಾದರೂ ವೃತ್ತಿಪರ ಕೋರ್ಸ್ ಸೇರಬಹುದು. ಇವತ್ತು ಸಾಧಾರಣ ಕಾಲೇಜಿನಲ್ಲೇ ಎಂಜಿನಿಯರಿಂಗ್ ಓದಲು ಹಲವು ಲಕ್ಷಗಳೇ ಬೇಕಾಗುತ್ತದೆ. 15 ವರ್ಷ ಬಳಿಕ ಹಣದುಬ್ಬರ ಏರಿಕೆ ಪರಿಗಣಿಸಿದರೆ ಕೋರ್ಸ್ ವೆಚ್ಚ ಅದೆಷ್ಟು ಹೆಚ್ಚಬಹುದು ಊಹಿಸಿ.

ಇದನ್ನೂ ಓದಿ: ನಿಶ್ಚಿತ ಠೇವಣಿಗೆ ಶೇ. 9.1ರವರೆಗೂ ಬಡ್ಡಿ; ಇತ್ತೀಚೆಗೆ ದರ ಪರಿಷ್ಕರಿಸಿದ ಬ್ಯಾಂಕುಗಳು

ಇವತ್ತು ವರ್ಷಕ್ಕೆ ಮೂರು ಲಕ್ಷ ರೂ ಶುಲ್ಕ ಪಡೆಯುವ ಎಂಜಿನಿಯರಿಂಗ್ ಕಾಲೇಜು 15 ವರ್ಷ ಬಳಿಕ ಆರೂವರೆ ಲಕ್ಷ ರೂನಷ್ಟಾದರೂ ಆಗಬಹುದು. ನಾಲ್ಕು ವರ್ಷದ ಎಂಜಿನಿಯರಿಂಗ್ ಕೋರ್ಸ್​ಗೆ ಎರಡೂವರೆ ಕೋಟಿ ರೂ ಆದೀತು. ಅಷ್ಟು ಹಣ ಹೇಗೆ ಹೊಂದಿಸುತ್ತೀರಿ? ಇವತ್ತಿನಿಂದಲೇ ನೀವು ಹಣ ಕೂಡಿ ಹಾಕದಿದ್ದರೆ ಮುಂದೆ ಕಷ್ಟವಾದೀತು. ಹಣ ಇಲ್ಲವೆಂದು ವೃತ್ತಿ ಏಳ್ಗೆ ಕಡಿಮೆ ತರುವ ಸಣ್ಣ ಪುಟ್ಟ ಕೋರ್ಸ್ ಅನ್ನು ಸೇರಿಸಬೇಕಾದೀತು.

15 ವರ್ಷದಲ್ಲಿ ಮೂರು ಕೋಟಿ ರೂ ಹೊಂದಿಸುವುದು ಹೇಗೆ?

ಇವತ್ತು ಮ್ಯೂಚುವಲ್ ಫಂಡ್​ಗಳು ಹೆಚ್ಚು ವಿಶ್ವಾಸಾರ್ಹ ಹೂಡಿಕೆ ಸ್ಕೀಮ್ ಆಗಿ ಬೆಳೆದಿವೆ. ಹೆಚ್ಚಿನ ಫಂಡ್​ಗಳು ಶೇ. 12ಕ್ಕಿಂತ ಹೆಚ್ಚು ವಾರ್ಷಿಕ ರಿಟರ್ನ್ ಕೊಡುತ್ತಿವೆ. ಹೀಗಾಗಿ, ಹಣದುಬ್ಬರದ ಪ್ರಭಾವ ಮೀರಿ ಹಣ ಬೆಳೆಸಲು ಹೆಚ್ಚು ಸುರಕ್ಷಿತ ಮಾರ್ಗವಾಗಿ ಮ್ಯೂಚುವಲ್ ಫಂಡ್ ಇದೆ. ಅದರಲ್ಲೂ ಎಸ್​ಐಪಿ ಪ್ಲಾನ್ ಆಯ್ದುಕೊಳ್ಳಬಹುದು.

15 ವರ್ಷ ಮಾಸಿಕ 50,000 ರೂ ಹೂಡಿಕೆಯಿಂದ ಎಷ್ಟು ಲಾಭ?

  • ಪಿಪಿಎಫ್ ಶೇ. 7.1ರ ದರ: 1.60 ಕೋಟಿ ರೂ
  • ಶೇ. 9ರ ದರ: 1.90 ಕೋಟಿ ರೂ
  • ಶೇ. 10ರ ದರ: 2.09 ಕೋಟಿ ರೂ
  • ಶೇ. 12ರ ದರ: 2.52 ಕೋಟಿ ರೂ
  • ಶೇ. 15ರ ದರ: 3.38 ಕೋಟಿ ರೂ

ಇಲ್ಲಿ ಸರ್ಕಾರದಿಂದ ನಡೆಸಲಾಗುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಲೆಕ್ಕಾಚಾರವೂ ಇದೆ. ಸದ್ಯ ಪಿಪಿಎಫ್​ಗೆ ಶೇ. 7.1ರಷ್ಟು ಬಡ್ಡಿ ನೀಡಲಾಗುತ್ತಿದೆ. ಇದು 15 ವರ್ಷದ ಸ್ಕೀಮ್ ಆಗಿದ್ದು, ಇದೇ ದರವು ಉದ್ದಕ್ಕೂ ಇದ್ದಲ್ಲಿ ಮೆಚ್ಯೂರಿಟಿಗೆ ಬಂದಾಗ ಹಣವು 1.60 ಕೋಟಿ ರೂ ಆಗುತ್ತದೆ. ಆದರೆ, ಪಿಪಿಎಫ್​ನಲ್ಲಿ ವರ್ಷಕ್ಕೆ ಹೂಡಿಕೆ ಮಿತಿ ಒಂದೂವರೆ ಲಕ್ಷ ರೂ ಮಾತ್ರವೇ ಇದೆ. ಆರ್​ಡಿಯಲ್ಲಿ ಇಡುತ್ತಾ ಹೋದರೆ ನೀವು 15 ವರ್ಷದಲ್ಲಿ 1.60 ಕೋಟಿ ರೂ ಕೂಡಿಡಲು ಸಾಧ್ಯ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ನೀವು ಒಂದು ತಿಂಗಳು ಕಂತು ಕಟ್ಟದಿದ್ದರೆ ಏನಾಗುತ್ತೆ?

ಒಂದು ವೇಳೆ ಮ್ಯೂಚುವಲ್ ಫಂಡ್​ನಲ್ಲಿ ತಿಂಗಳಿಗೆ 50 ಸಾವಿರ ರೂನಂತೆ ಹೂಡಿಕೆ ಮಾಡಿದಲ್ಲಿ, ಅದು ಶೇ. 12ರ ದರದಲ್ಲಿ ಬೆಳೆದಲ್ಲಿ 15 ವರ್ಷದಲ್ಲಿ ಎರಡೂವರೆ ಕೋಟಿ ರೂ ನಿಮ್ಮದಾಗುತ್ತದೆ. ಅದೃಷ್ಟಕ್ಕೆ ಶೇ. 15ರ ದರದಲ್ಲಿ ಬೆಳೆದಲ್ಲಿ ನಿಮಗೆ ಸಿಗುವ ರಿಟರ್ನ್ ಮೂರು ಕೋಟಿ ರೂಗೂ ಹೆಚ್ಚು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ