ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!

ಸುಷ್ಮಾ ಚಕ್ರೆ
|

Updated on: Jan 17, 2025 | 10:17 PM

ಉತ್ತರ ಪ್ರದೇಶದಲ್ಲಿ ತನ್ನ ಹೆಂಡತಿ ಬೇರೊಬ್ಬನ ಜೊತೆ ಕಾರಿನಲ್ಲಿ ಹೋಗುವುದನ್ನು ಕಂಡು ಕೋಪಗೊಂಡ ಗಂಡ ಆಕೆ ಹೋಗುತ್ತಿದ್ದ ಕಾರಿಗೆ ಅಡ್ಡಹಾಕಿದ್ದಾನೆ. ಆದರೆ, ಕಾರನ್ನು ನಿಲ್ಲಿಸದಿದ್ದಾಗ ಕಾರಿನ ಬಾನೆಟ್ ಹತ್ತಿ ಗಟ್ಟಿಯಾಗಿ ಹಿಡಿದುಕೊಂಡು ಮಲಗಿದ್ದಾನೆ. ಕಿಲೋಮೀಟರ್‌ಗಳಷ್ಟು ದೂರ ಆತನನ್ನು ಎಳೆದುಕೊಂಡು ಹೋದ ಕಾರು ಕೊನೆಗೂ ಒಂದೆಡೆ ನಿಂತಿದೆ. ಇದನ್ನು ಅಕ್ಕಪಕ್ಕದ ವಾಹನ ಸವಾರರು ವಿಡಿಯೋ ಮಾಡಿದ್ದಾರೆ.

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿ ಪ್ರೇಮಿಯ ಜೊತೆ ಕಾರಿನಲ್ಲಿ ಹೋಗುತ್ತಿರುವುದನ್ನು ನೋಡಿದ್ದಾರೆ. ಕೋಪದಿಂದ ಚಲಿಸುತ್ತಿದ್ದ ಆ ಕಾರಿನ ಬಾನೆಟ್ ಮೇಲೆ ಮಲಗಿ ಕಾರು ನಿಲ್ಲಿಸುವಂತೆ ಕೂಗಿದ್ದಾರೆ. ಈ ಆಘಾತಕಾರಿ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜನದಟ್ಟಣೆಯ ರಸ್ತೆಯಲ್ಲಿ ಕಿಲೋಮೀಟರ್‌ಗಳಷ್ಟು ದೂರ ಆ ವ್ಯಕ್ತಿಯನ್ನು ಹೊತ್ತೊಯ್ದ ಕಾರಿನ ಮೇಲೆ ಆ ವ್ಯಕ್ತಿ ಕಾರಿನ ಬಾನೆಟ್‌ಗೆ ನೇತಾಡುತ್ತಿದ್ದರು. ಕಾರು ನಿಂತ ಬಳಿಕ ತನ್ನ ಹೆಂಡತಿಯ ಪ್ರಿಯಕರನ ಜೊತೆ ಆ ವ್ಯಕ್ತಿ ಜಗಳವಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ