ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಕಿತ್ತುಕೊಂಡು ಹೋದ್ರು..!
ಕರ್ನಾಟಕದಲ್ಲಿ ಒಂದರ ಮೇಲೋಂದರಂತೆ ಬ್ಯಾಂಕ್ ದರೋಡೆ ಕೇಸ್ಗಳು ನಡೆಯುತ್ತಿವೆ. ಗುರುವಾರ ಅಷ್ಟೇ ಬೀದರ್ನಲ್ಲಿ ಎಂಟಿಎಂಗೆ ಹಣ ತುಂಬಿಸೋ ಸಂದರ್ಭದಲ್ಲಿ ಸಿಬ್ಬಂದಿಗೆ ಗುಂಡು ಹಾರಿಸಿ ದರೋಡೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅದು ಮಂಗಳೂರಲ್ಲಿ ಎಂಬುದು ಅಚ್ಚರಿ. ಇನ್ನು ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದ ಟೆಕ್ನಿಷಿಯನ್ ವಜ್ರದ ಉಂಗುರವನ್ನೇ ಕಿತ್ತುಕೊಂಡು ಹೋಗಿದ್ದಾರೆ.
ಮಂಗಳೂರು, (ಜನವರಿ 17): ಥೇಟ್ ಸಿನಿಮಾ ಶೈಲಿಯಲ್ಲೇ ಮಂಗಳೂರು ಬ್ಯಾಂಕ್ನಲ್ಲಿ ದರೋಡೆ ನಡೆದಿದೆ. ಮಂಗಳೂರಿನ ಉಲ್ಲಾಳದ ಕೆಸಿ ರಸ್ತೆಯಲ್ಲಿರೋ ಕೋಟೆಕಾರು ಬ್ಯಾಂಕ್ಗೆ ನುಗ್ಗಿ ಹಾಡಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್ಗೆ ನುಗ್ಗಿದ ಐದು ಜನರ ಖತರ್ನಾಕ್ ಕಳ್ಳರ ಗ್ಯಾಂಗ್ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಎಸ್ಕೇಪ್ ಆಗಿದೆ. ಇನ್ನು ಸಿಸಿಟಿವಿ ಕ್ಯಾಮೆರಾ ಕೆಟ್ಟು ಹೋಗಿದ್ದರಿಂದ ಇಂದು ಟೆಕ್ನಿಷಿಯನ್ ರಿಪೇರಿ ಮಾಡಲು ಬ್ಯಾಂಕ್ಗೆ ಬಂದಿದ್ದಾನೆ. ಅದೇ ವೇಳೆಯಲ್ಲೇ ದರೋಡೆಕೋರರು ಬ್ಯಾಂಕ್ಗೆ ನುಗ್ಗಿ ಕೈಗೆ ಸಿಕ್ಕಷ್ಟು ಹಣ, ಚಿನ್ನ ದೋಚಿದ್ದಾರೆ. ಅಲ್ಲದೇ ಸಿಸಿಟಿವಿ ರಿಪೇರಿ ಮಾಡುತ್ತಿದ್ದ ಟೆಕ್ನಿಷಿಯನ್ ಕೈಯಲ್ಲಿದ್ದ ವಜ್ರದ ಉಂಗುರವನ್ನು ಸಹ ಕಿತ್ತುಕೊಂಡು ಪರಾರಿಯಾಗಿದ್ದು, ಇದೀಗ ಟೆಕ್ನಿಷಿಯನ್ ಕಂಗಾಲಾಗಿದ್ದಾನೆ