ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ನೀವು ಒಂದು ತಿಂಗಳು ಕಂತು ಕಟ್ಟದಿದ್ದರೆ ಏನಾಗುತ್ತೆ?

Mutual Fund SIP: ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ಪ್ರತೀ ತಿಂಗಳು ನಿಯಮಿತವಾಗಿ ಕಂತುಗಳನ್ನು ಕಟ್ಟಿಕೊಂಡು ಹೋಗುತ್ತೇವೆ. ಒಂದು ವೇಳೆ ಕಂತು ಕಟ್ಟುವುದು ತಪ್ಪಿದರೆ ಏನಾಗುತ್ತದೆ? ಬ್ಯಾಂಕುಗಳಲ್ಲಿ ಸಾಲದ ಕಂತುಗಳನ್ನು ಕಟ್ಟಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ, ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ಆದರೆ ಎಸ್​ಐಪಿಯಲ್ಲಿ ಆ ರೀತಿ ಆಗುವುದಿಲ್ಲ. ಸತತ ಮೂರು ಬಾರಿ ಕಂತು ತಪ್ಪಿದರೆ ಎಸ್​ಐಪಿ ರದ್ದಾಗುತ್ತದೆ ಎಂಬುದು ಗಮನಾರ್ಹ.

ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ನೀವು ಒಂದು ತಿಂಗಳು ಕಂತು ಕಟ್ಟದಿದ್ದರೆ ಏನಾಗುತ್ತೆ?
ಮ್ಯೂಚುವಲ್ ಫಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 24, 2024 | 10:24 AM

ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಯಸುವ ಜನರಲ್ಲಿ ಹೆಚ್ಚಿನವರು ಎಸ್​ಐಪಿ (Mutual Fund SIP) ಮಾರ್ಗ ಹಿಡಿಯುತ್ತಾರೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​​ಮೆಂಟ್ ಪ್ಲಾನ್​ನಲ್ಲಿ ಜನರು ಆರ್​ಡಿ (RD- Recurring Deposit) ರೀತಿಯಲ್ಲಿ ಪ್ರತೀ ತಿಂಗಳು ನಿಯಮಿತವಾಗಿ ನಿಗದಿತ ಕಂತನ್ನು ಪಾವತಿಸಬಹುದು. ಹೆಚ್ಚಿನ ಮ್ಯೂಚುವಲ್ ಫಂಡ್​ಗಳು ದೀರ್ಘಾವಧಿಯಲ್ಲಿ ವರ್ಷಕ್ಕೆ ಶೇ. 10ರಿಂದ 20ರಂತೆ ಲಾಭ ತರಬಹುದು. ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡುವುದು ಹೆಚ್ಚಿನ ಜನರಿಗೆ ರಿಸ್ಕಿ ಎನಿಸಬಹುದು. ಹೀಗಾಗಿ, ಮ್ಯೂಚುವಲ್ ಫಂಡ್ ಬಹಳ ಜನಪ್ರಿಯವಾಗಿದೆ. ಲಂಪ್ಸಮ್ ಹಣ ಇಲ್ಲದಿದ್ದರೆ ಎಸ್​ಐಪಿ ಮೂಲಕ ಹೂಡಿಕೆ ಮಾಡುವುದು ಇನ್ನೂ ಸುಗಮವಾದ ಸಂಗತಿ.

ಎಸ್​ಐಪಿ ಆಯ್ದುಕೊಂಡರೆ ಸಾಲಕ್ಕೆ ಕಂತುಗಳನ್ನು ಕಟ್ಟುವ ರೀತಿಯಲ್ಲೇ ನಿಯಮಿತವಾಗಿ ಎಸ್​ಐಪಿ ಕಂತುಗಳನ್ನು ಪಾವತಿಸಬೇಕು. ಬ್ಯಾಂಕುಗಳ ಸಾಲದ ಕಂತುಗಳನ್ನು ಕಟ್ಟದಿದ್ದರೆ ದಂಡ ವಿಧಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್​ಗೆ ಹೊಡೆತ ಬೀಳುತ್ತದೆ. ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ಕಂತು ಕಟ್ಟುವುದು ತಪ್ಪಿದರೆ ಇದೇ ರೀತಿ ದಂಡ ಬೀಳುತ್ತಾ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

ಇದನ್ನೂ ಓದಿ: ಸಂಬಳ ಕಡಿಮೆಯಾ? ಆದರೂ ಒಂದು ಕೋಟಿ ರೂ ಕೂಡಿಡಬಹುದು; ಇಲ್ಲಿದೆ ಟಿಪ್ಸ್

ಎಸ್​ಐಪಿಯಲ್ಲಿ ಒಂದು ಅಥವಾ ಎರಡು ಕಂತು ಕಟ್ಟದೇ ಹೋದರೆ ತೊಂದರೆ ಇಲ್ಲ. ದಂಡ ವಿಧಿಸಲಾಗುವುದಿಲ್ಲ. ಆದರೆ, ಸತತ ಮೂರು ಕಂತುಗಳನ್ನು ಕಟ್ಟಲು ವಿಫಲವಾದಲ್ಲಿ ನಿಮ್ಮ ಎಸ್​ಐಪಿ ರದ್ದುಗೊಳ್ಳಬಹುದು. ಇದು ಬಹಳ ಮುಖ್ಯ.

ಎಸ್​ಐಪಿ ಕಂತು ಕಟ್ಟಲು ವಿಫಲವಾಗುವುದರಿಂದ ಇತರ ಕೆಲ ಹಿನ್ನಡೆಗಳಾಗಬಹುದು. ನಿಮ್ಮ ಹೂಡಿಕೆಯಿಂದ ಸಿಗಬಹುದಾದ ಲಾಭ ತುಸು ಕಡಿಮೆ ಆಗಬಹುದು. ನಿಮ್ಮ ಹಣಕಾಸು ಶಿಸ್ತು ಸಡಿಲಗೊಂಡಂತಾಗಬಹುದು. ಇವು ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಎಸ್​ಐಪಿ ಕಂತು ಮಿಸ್ ಆಯಿತೆಂದು ಪರಿತಪಿಸಬೇಕಿಲ್ಲ.

ಇದನ್ನೂ ಓದಿ: 40ರ ಬಳಿಕ ಮನೆ ಮಾಡಲು ಹೊರಟಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ

ಸತತ ಮೂರು ಬಾರಿ ಕಂತು ಕಟ್ಟುವುದು ತಪ್ಪದಂತೆ ಎಚ್ಚರ ವಹಿಸಿ. ಸಾಧ್ಯವಾದಷ್ಟೂ ಪ್ರತೀ ತಿಂಗಳು ನಿಯಮಿತವಾಗಿ ಕಂತು ಕಟ್ಟಿರಿ. ಆಟೊಮ್ಯಾಟಿಕ್ ಪೇಮೆಂಟ್ ಆಗುವಂತೆ ಎಸ್​ಐಪಿ ಸೆಟ್ ಮಾಡಿ. ಪಾವತಿ ದಿನದಂದು ಬ್ಯಾಂಕ್​ನಲ್ಲಿ ಅಷ್ಟು ಫಂಡ್ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.

ಮ್ಯೂಚುವಲ್ ಫಂಡ್ ಎಸ್​ಐಪಿ ದೀರ್ಘಾವಧಿ ಹೂಡಿಕೆಗೆ ಅತ್ಯುತ್ತಮವಾಗಿದೆ. ಹೀಗಾಗಿ, ನೀವು ಹಣಕಾಸು ಶಿಸ್ತು ಸಾಧಿಸುವುದು ಅನಿವಾರ್ಯವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Fri, 24 May 24

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ