40ರ ಬಳಿಕ ಮನೆ ಮಾಡಲು ಹೊರಟಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ

Own house after 40s: ಎಲ್ಲರಿಗೂ ಸ್ವಂತ ಮನೆಯ ಕನಸು ಇರುತ್ತದೆ. ಕೆಲವರು ಬೇಗ ನನಸು ಮಾಡಿಕೊಳ್ಳುತ್ತಾರೆ. ಕೆಲವರು ತಡವಾಗಿ ಮನೆ ಪಡೆಯುತ್ತಾರೆ. ಹೆಚ್ಚಿನ ಜನರು 40 ವರ್ಷ ದಾಟಿದ ಬಳಿಕ ಸ್ವಂತ ಮನೆಗೆ ಕೈ ಹಾಕುತ್ತಾರೆ. ಅಷ್ಟರಲ್ಲಿ ಒಂದಷ್ಟು ಸಂಪಾದನೆ, ಉದ್ಯೋಗ ಸ್ಥಿರತೆ, ಸಂಬಳ ಇತ್ಯಾದಿ ಬಂದಿರುತ್ತದೆ. ಆದರೆ, ನಿವೃತ್ತಿ ವಯಸ್ಸೂ ಸಮೀಪಿಸುತ್ತಿರುತ್ತದೆ. ಇವೆಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಸ್ವಂತ ಮನೆಗೆ ಮುಂದಾಗಿರಿ.

40ರ ಬಳಿಕ ಮನೆ ಮಾಡಲು ಹೊರಟಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ
ಮನೆ ಖರೀದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2024 | 4:14 PM

ನಮ್ಮ ಕನಸಿನ ಸ್ವಂತ ಮನೆ (own house) ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಇರುವ ಬಯಕೆ. ಹೆಚ್ಚಿನ ಜನರು 40 ವರ್ಷ ದಾಟಿದ ಬಳಿಕ ಸುಂದರವಾದ ಸ್ವಂತ ಸೂರು ಹೊಂದಲು ಬಯಸುತ್ತಾರೆ. ಆ ವಯೋಮಾನದಲ್ಲಿ ಸಾಮಾನ್ಯವಾಗಿ ಉಳಿತಾಯ ಹಣ ಹೆಚ್ಚಿರುತ್ತದೆ. ಸಂಬಳ ಹೆಚ್ಚಿರುತ್ತದೆ. ಮಕ್ಕಳು ಮರಿಗಳು ದೊಡ್ಡವರಾಗುತ್ತಿರುತ್ತಾರೆ. ಸ್ವಂತ ಮನೆ ಮಾಡಲು ಅನುಕೂಲವಾಗಿರುವ ಹಂತವೂ ಕೂಡ ಅದು. ಆದರೆ, ಆ ವಯಸ್ಸಿನಲ್ಲಿ ಮನೆ ಮಾಡಲು ಕೆಲ ರಿಸ್ಕ್​ಗಳೂ ಇರುತ್ತವೆ. ಇವೆಲ್ಲವನ್ನೂ ಪರಿಗಣಿಸಿ ಮುಂದಿನ ಹೆಜ್ಜೆ ಇಡುವುದು ಸೂಕ್ತ.

ಮನೆ ಪಡೆಯಲು ಗೃಹಸಾಲ: ಬಡ್ಡಿದರ ಮತ್ತು ಕಂತು ಮುಖ್ಯ

ಮನೆ ಖರೀದಿಸುವ ಮುನ್ನ ನಿಮ್ಮ ಬಳಿ ಎಷ್ಟು ಲಂಪ್ಸಮ್ ಹಣ ಇದೆ, ಇನ್ನುಳಿದ ಹಣ ಎಷ್ಟು ಬೇಕಾಗುತ್ತದೆ, ಅದನ್ನು ಅವಲೋಕಿಸಿ ಗೃಹಸಾಲ ಪಡೆಯಬಹುದು. ಪರ್ಸನಲ್ ಲೋನ್ ಇತ್ಯಾದಿಗಿಂತ ಗೃಹ ಸಾಲ ಉತ್ತಮ. ಇದಕ್ಕೆ ಬಡ್ಡಿದರ ಕಡಿಮೆ ಇರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಇನ್ನಷ್ಟು ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುತ್ತದೆ.

ಇನ್ನು, ನಿಮ್ಮ ವಯಸ್ಸು 40 ವರ್ಷ ದಾಟಿರುವುದರಿಂದ ದೀರ್ಘಾವಧಿ ಸಾಲಕ್ಕಿಂತ, ಕಡಿಮೆ ಕಂತುಗಳನ್ನು ಆಯ್ಕೆ ಮಾಡಿ. ಇದರಿಂದ ಸಾಲವನ್ನು ಬೇಗನೇ ತೀರಿಸಲು ಸಾಧ್ಯವಾಗುತ್ತದೆ. ಹೆಚ್ಚು ಕಂತುಗಳನ್ನು ಆಯ್ದುಕೊಂಡರೆ ಬಡ್ಡಿಮೊತ್ತವೇ ಅಧಿಕವಾಗಿರುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ದಾಖಲೆ, ವಿವರ ಬರೆದಿಡುವುದು ಯಾಕೆ ಮುಖ್ಯ? ಅವನ್ನು ಸಂಗ್ರಹಿಸಿಟ್ಟುಕೊಳ್ಳುವ ಕ್ರಮ ಹೇಗೆ? ಇಲ್ಲಿದೆ ಟಿಪ್ಸ್

ಇತರೆ ಅಗತ್ಯತೆಗಳೂ ಮನಸ್ಸಿನಲ್ಲಿರಲಿ…

ಸಾಲದ ಕಂತಿಗೆ ಪಾವತಿ ಮಾಡಿ ಇನ್ನುಳಿದ ಹಣದಿಂದ ನಿಮ್ಮ ಎಲ್ಲಾ ಅಗತ್ಯತೆಗಳು ಪೂರೈಕೆ ಆಗುತ್ತದಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಮಕ್ಕಳ ಓದು, ನಿಮ್ಮ ಇತರೆ ಮಾಸಿಕ ಮತ್ತು ವಾರ್ಷಿಕ ಪಾವತಿ ಇವೆಲ್ಲವನ್ನೂ ಪರಿಗಣಿಸಿರಬೇಕು.

ನಿಮ್ಮ ಭವಿಷ್ಯದ ಅವಶ್ಯಕತೆಗಳಿಗೆ ಸೂಕ್ತವಾಗುತ್ತದಾ ಮನೆ?

ನೀವು ಮನೆ ಮಾಡುವಾಗ ಬಹಳಷ್ಟು ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು. ಬಾಡಿಗೆ ಮನೆಯ ರೀತಿಯಲ್ಲಿ ನೀವು ಮನೆ ಬದಲಿಸಲು ಕಷ್ಟವಾಗಬಹುದು. ನಿಮ್ಮ ಕೆಲಸದ ಸ್ಥಳ, ಮಕ್ಕಳ ಕಾಲೇಜು ಮತ್ತಿತರ ಪ್ರದೇಶಗಳು ನಿಮ್ಮ ಮನೆಯಿಂದ ಎಷ್ಟು ದೂರದಲ್ಲಿವೆ, ಸಾರಿಗೆ ವ್ಯವಸ್ಥೆ ಹೇಗಿದೆ ಇವೆಲ್ಲವನ್ನೂ ಪರಿಶೀಲಿಸಬೇಕು.

ಇದನ್ನೂ ಓದಿ: ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಪರಿಗಣಿಸಿ ರಿಟೈರ್ಮೆಮೆಂಟ್​​ಗೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ ಉಪಾಯ

ಮನೆ ಖರೀದಿಸುವ ಮುನ್ನ ದಾಖಲೆ ಪರಿಶೀಲನೆ ಮುಖ್ಯ

ಇವತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಂಚನೆಗಳು ಬಹಳ ನಡೆಯುತ್ತವೆ. ಗೊತ್ತಿಲ್ಲದ ಬ್ರೋಕರ್ ಮೂಲಕ ನೀವು ಮನೆ ಖರೀದಿಸಿದರೆ ಅದರ ಪ್ರಾಪರ್ಟಿ ಡಾಕ್ಯುಮೆಂಟ್ ಸರಿ ಇಲ್ಲದೇ ಇರಬಹುದು. ಆದ್ದರಿಂದ ದಾಖಲೆಗಳನ್ನು ವಕೀಲರಿಗೆ ಕೊಟ್ಟು ಪರಿಶೀಲನೆಗೊಳಪಡಿಸಿ. ಪ್ರಾಪರ್ಟಿ ಟ್ಯಾಕ್ಸ್ ಇತ್ಯಾದಿ ಪಾವತಿ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಲು ಇಸಿ ಇತ್ಯಾದಿ ದಾಖಲೆಗಳನ್ನು ಹೊರತೆಗೆಯಿರಿ. ಇಲ್ಲದಿದ್ದರೆ ಲಕ್ಷಾಂತರ, ಕೋಟ್ಯಂತರ ರೂ ಹಣ ನಿಮ್ಮ ಕೈತಪ್ಪಿ ಹೋಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ