ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಪರಿಗಣಿಸಿ ರಿಟೈರ್ಮೆಮೆಂಟ್​​ಗೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ ಉಪಾಯ

Calculating retirement corpus: ನಿವೃತ್ತಿಗೆ ಇವತ್ತಿನಿಂದಲೇ ನೀವು ಯೋಜಿಸುವುದು ಒಳ್ಳೆಯದು. ತಜ್ಞರ ಲೆಕ್ಕಾಚಾರದ ಪ್ರಕಾರ ನೀವು 60ನೇ ವಯಸ್ಸಿನಲ್ಲಿ ನಿವೃತ್ತರಾದಾಗ ಅಂದಿನ ನಿಮ್ಮ ವಾರ್ಷಿಕ ಖರ್ಚಿನ 33 ಪಟ್ಟು ಹಣವು ನಿಮ್ಮ ಬಳಿ ಇರಬೇಕು. ಇವತ್ತು ನಿಮ್ಮ ಜೀವನ ನಿರ್ವಹಣೆಗೆ ಎಷ್ಟು ಖರ್ಚಾಗುತ್ತಿದೆಯೋ ಅದಕ್ಕೆ ಹಣದುಬ್ಬರದ ಮೌಲ್ಯವನ್ನು ಸೇರಿಸಿದರೆ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ಈ ಬಗ್ಗೆ ಈ ಲೇಖನದಲ್ಲಿ ಉದಾಹರಣೆ ಸಮೇತ ವಿವರಗಳಿವೆ.

ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಪರಿಗಣಿಸಿ ರಿಟೈರ್ಮೆಮೆಂಟ್​​ಗೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ ಉಪಾಯ
ರಿಟೈರ್ಮೆಂಟ್ ಪ್ಲಾನಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2024 | 6:48 PM

ಇವತ್ತಿನ ದಿನವನ್ನು ಆನಂದದಿಂದ ಕಳೆಯಬೇಕೆನ್ನುವುದು ಸಾಮಾನ್ಯವಾಗಿ ಮನುಷ್ಯನ ಆಲೋಚನೆ. ಭವಿಷ್ಯದ ಯಾರಿಗೆ ಏನು ಬೇಕಾದರೂ ಆಗಬಹುದು, ಅದಕ್ಕಾಗಿ ಇವತ್ತಿನ ಸುಖ ತಿರಸ್ಕರಿಸುವುದೇಕೆ ಎನ್ನುವ ಧೋರಣೆ ಸಹಜವಾದುದು. ಆದರೆ, ಭವಿಷ್ಯದ ಬಗ್ಗೆ ಆಲೋಚನೆ ಇಲ್ಲದೇ ಹೋದರೆ ಅವ್ಯವಸ್ಥಿತವಾಗಿ ಬೆಳೆದ ಮಹಾನಗರಿಗಳು ಗೋಜಲದ ಗೂಡಾದಂತೆ ಆಗಬಹುದು ನಮ್ಮ ಬದುಕು. ರಿಟೈರ್ಮೆಂಟ್​ಗೆ (Retirement) ಈಗಲೇ ಯೋಜಿಸುವುದು ಉತ್ತಮ. ಯೋಜಿಸದೇ ಹೋದರೂ ಕೊನೆಯ ಪಕ್ಷ ನಿವೃತ್ತಿ ಬಳಿಕ ನಮಗೆ ಕನಿಷ್ಠವೆನಿಸುವ ಎಷ್ಟು ಮೊತ್ತವು ವೆಚ್ಚಕ್ಕೆ ಬೇಕಾಗಬಹುದು ಎನ್ನುವ ಲೆಕ್ಕಾಚಾರವನ್ನಂತೂ ನಾವು ಮಾಡುವುದು ಒಳಿತು.

ಇವತ್ತು ಹಣ ಏನಿದೆ, ಅದರ ಮೌಲ್ಯ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಾ ಹೋಗುತ್ತದೆ. ಅದು ಹಣದುಬ್ಬರದ ಪರಿಣಾಮ. ಭಾರತದಲ್ಲಿ ಹಣದುಬ್ಬರ ಕನಿಷ್ಠ ಶೇಕಡಾ ನಾಲ್ಕಂತೂ ಇದ್ದೇ ಇರುತ್ತದೆ. ಕಳೆದ ಕೆಲ ದಶಕಗಳ ಅಂಕಿ ಅಂಶ ಪರಿಗಣಿಸಿದರೆ ಹಣದುಬ್ಬರ ಶೇ. 5ರಿಂದ 7ರ ದರದಲ್ಲಿ ಮುಂದುವರಿಯಬಹುದು. ಇವತ್ತು ಒಂದು ಲಕ್ಷ ರೂ ಹಣಕ್ಕೆ ಇರುವ ಮೌಲ್ಯ 20 ವರ್ಷದ ಬಳಿಕ ಅಷ್ಟೇ ಇರುವುದಿಲ್ಲ. ಆವತ್ತಿನ 3 ಲಕ್ಷ ರೂ ಹಣ ಇವತ್ತಿನ ಒಂದು ಲಕ್ಷಕ್ಕೆ ಸಮವಾಗಿರಬಹುದು. ರಿಟೈರ್ಮೆಂಟ್ ಪ್ಲಾನಿಂಗ್ ಮಾಡುವಾಗ ಈ ಲೆಕ್ಕಾಚಾರ ಬಹಳ ಮುಖ್ಯ.

ಇದನ್ನೂ ಓದಿ: ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ

ನಿವೃತ್ತಿ ಬಳಿಕ ನಿಮ್ಮ ಬದುಕು ನಿರ್ವಹಣೆಗೆ ಎಷ್ಟು ಬೇಕಾಗಬುದು, ಲೆಕ್ಕ ಹಾಕಿ….

ಈಗ ನಿಮ್ಮ ವಯಸ್ಸು 30 ಎಂದಿಟ್ಟುಕೊಳ್ಳೋಣ. ಇನ್ನು 30 ವರ್ಷ ಕಾಲ ದುಡಿದು ನಿವೃತ್ತಿ ಹೊಂದಬಹುದು. ಸಾಲಕ್ಕೆ ಕಟ್ಟುವ ಹಣ, ಹೂಡಿಕೆ ಹಣ ಹೊರತುಪಡಿಸಿ ಬಾಡಿಗೆ, ದಿನಸಿ, ಔಷಧಿ ನಿಮ್ಮ ಜೀವನ ನಿರ್ವಹಣೆಗೆ ಎಷ್ಟು ಹಣ ವೆಚ್ಚವಾಗುತ್ತದೆ? ಇವತ್ತಿನ ದಿನದಲ್ಲಿ ತಿಂಗಳಿಗೆ 30,000 ರೂ ಆಗಬಹುದು ಎಂದಿಟ್ಟುಕೊಳ್ಳಿ. ತುರ್ತು ವೆಚ್ಚ, ಹೆಚ್ಚು ಆರಾಮದಾಯಕ ಜೀವನ ಬೇಕು ಎಂದರೆ ಇವೆಲ್ಲವನ್ನೂ ಸೇರಿ ತಿಂಗಳಿಗೆ 40,000 ರೂ ಬೇಕಾಗುತ್ತದೆ ಎಂದಿಟ್ಟುಕೊಳ್ಳಿ. ಅಂದರೆ ವರ್ಷಕ್ಕೆ 4,80,000 ರೂ ಅಥವಾ ಐದು ಲಕ್ಷ ರೂ ಎಂದೇ ಇಟ್ಟುಕೊಳ್ಳಿ. ನಿಮಗೆ ಈಗ ಜೀವನ ವೆಚ್ಚಕ್ಕೆ ವರ್ಷಕ್ಕೆ ಐದು ಲಕ್ಷ ರೂ ಬೇಕಾಗುತ್ತದೆ.

ಇವತ್ತು ನಿಮ್ಮ ವಯಸ್ಸು 35 ವರ್ಷ ಆಗಿದ್ದು ನೀವು ಇನ್ನು 25 ವರ್ಷ ಮಾತ್ರ ದುಡಿದು ನಿವೃತ್ತಿ ಹೊಂದಬಹುದು ಎಂದಿಟ್ಟುಕೊಳ್ಳಿ. ಹಣದುಬ್ಬರ ಶೇ. 6ರಷ್ಟು ಬೆಳೆದರೆ ಇವತ್ತಿನ ಐದು ಲಕ್ಷ ರೂ ಹಣದ ಮೌಲ್ಯ 25 ವರ್ಷದ ಬಳಿಕ 22.16 ಲಕ್ಷ ರೂಗೆ ಕುಸಿಯುತ್ತದೆ.

ನಿವೃತ್ತಿ ಬಳಿಕ ಎಷ್ಟು ಹಣ ನಿಮ್ಮ ಬಳಿ ಇರಬೇಕು ಎನ್ನುವುದಕ್ಕೆ ತಜ್ಞರ ಬಳಿ ಒಂದು ಲೆಕ್ಕಾಚಾರ ಇದೆ. ಅವರ ಪ್ರಕಾರ ನಿವೃತ್ತಿ ನಿಧಿಯು ನಿಮ್ಮ ವಾರ್ಷಿಕ ವೆಚ್ಚದ 33 ಪಟ್ಟು ಹಣವನ್ನು ಹೊಂದಿರಬೇಕು. 25 ವರ್ಷದ ಬಳಿಕ ನಿಮಗೆ ಖರ್ಚಿಗೆ ವರ್ಷಕ್ಕೆ 22.16 ಲಕ್ಷ ರೂ ಬೇಕಾಗುತ್ತದೆ ಎಂದಿಟ್ಟುಕೊಂಡರೆ ನಿವೃತ್ತಿ ನಿಧಿಯಲ್ಲಿ ಏಳರಿಂದ ಎಂಟು ಕೋಟಿ ರೂ (22.16 X 33 = 7.32) ಬೇಕಾಗುತ್ತದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ 15x15x15 ಸೂತ್ರದಿಂದ ಬೇಗ ಕೋಟಿ ಸಂಪಾದಿಸಿ

ಮುಂದಿನ 25 ವರ್ಷದಲ್ಲಿ ಎಂಟು ಕೋಟಿ ರೂ ಗುರಿ ಇಟ್ಟುಕೊಂಡು ಹಣ ಬೆಳೆಸುವ ಕಾರ್ಯವನ್ನು ಈಗಿನಿಂದಲೇ ನೀವು ಮಾಡಬೇಕಾಗುತ್ತದೆ. ವರ್ಷಕ್ಕೆ ಶೇ. 10ರಷ್ಟು ಆದಾಯ ತರುವ ಯಾವುದಾದರೂ ಹೂಡಿಕೆಗಳಲ್ಲಿ ನೀವು ತಿಂಗಳಿಗೆ 55,000 ರೂ ತೊಡಗಿಸಿದರೆ 25 ವರ್ಷದಲ್ಲಿ 7.35 ಕೋಟಿ ರೂ ಹಣ ಕೂಡಿ ಹಾಕಬಹುದು.

ಇದರ ಜೊತೆಗೆ ಸಾಧ್ಯವಾದರೆ ಸ್ವಂತ ಮನೆ ಹೊಂದಲು, ಇತರ ಆದಾಯ ಮೂಲ ಸೃಷ್ಟಿಸಲೂ ಪ್ರಯತ್ನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ