Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ

3 Bucket Strategy for Retirement: ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ದಿನ ದುಡಿಮೆಯಿಂದ ವಿಶ್ರಾಂತಿಗೆ ಹೋಗಲೇ ಬೇಕಾಗುತ್ತದೆ. ಈ ನಿವೃತ್ತಿ ಜೀವನ ಆರಾಮವಾಗಿರಬೇಕೆಂದರೆ ನಿಮ್ಮ ಹಣಕಾಸು ಪ್ಲಾನಿಂಗ್ ಸಮರ್ಪಕವಾಗಿರಬೇಕು. ನಿಮ್ಮ ವೆಚ್ಚಕ್ಕೆ ಅನುಗುಣವಾಗಿ ಹಣದ ಪ್ಲಾನಿಂಗ್ ಇರಲಿ. ಪರ್ಸನಲ್ ಫೈನಾನ್ಸ್ ಪರಿಣಿತರು ರಿಟೈರ್ಮೆಂಟ್ ಪ್ಲಾನಿಂಗ್​ಗೆ ತ್ರಿವಳಿ ಸೂತ್ರ ಅಥವಾ ಥ್ರೀ ಬಕೆಟ್ ಸ್ಟ್ರಾಟಿಜಿ ಮುಂದಿಟ್ಟಿದ್ದಾರೆ. ನಿಯಮಿತ ವೆಚ್ಚಕ್ಕೆ ಒಂದು ವಿಭಾಗ, ಮಧ್ಯಮಾವಧಿ ಸುರಕ್ಷಿತ ಹೂಡಿಕೆಗೆ ಇನ್ನೊಂದು ವಿಭಾಗ, ದೀರ್ಘಾವಧಿಯಲ್ಲಿ ಹಣವನ್ನು ವೇಗವಾಗಿ ಬೆಳೆಸಬಲ್ಲ ಹೂಡಿಕೆಯದ್ದು ಮೂರನೇ ವಿಭಾಗ.

ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ
ವೃದ್ಧಾಪ್ಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 07, 2024 | 12:16 PM

ನೀವು ದೈಹಿಕ ಶಕ್ತಿ ಇದ್ದಷ್ಟು ದಿನ ದುಡಿಯಬಹುದು. ನಿರ್ದಿಷ್ಟ ವಯಸ್ಸು ದಾಟಿದ ಬಳಿಕ ದುಡಿಯಲು ಆಗುವುದಿಲ್ಲ. ಅಥವಾ ನಿರ್ದಿಷ್ಟ ವಯಸ್ಸಿಗೆ ನೀವು ನಿವೃತ್ತರಾಗಬಹುದು. ದುಡಿಮೆಯಿಂದ ಬರುತ್ತಿದ್ದ ಆದಾಯ ನಿಲ್ಲಬಹುದು. ಅಲ್ಲಿಯವರೆಗೆ ನೀವು ಸಂಪಾದಿಸಿದ ಆಸ್ತಿಯೇ ನಿಮಗೆ ಕೊನೆಯವರೆಗೂ ಆಸರೆ ಆಗಬೇಕು. ಹೀಗಾಗಿ, ನೀವು ದುಡಿಯುವಾಗಲೇ ನಿವೃತ್ತಿಗೆ ಹಣ ಎತ್ತಿ ಇಡುವುದು ಬಹಳ ಅಗತ್ಯ. ರಿಟೈರ್ಮೆಂಟ್ ಬಳಿಕ ನಿಮ್ಮಲ್ಲಿ ಹೆಚ್ಚು ಹಣ ಇಲ್ಲದಿದ್ದರೆ ಕಷ್ಟವಾದೀತು. ಹಣ ಇದ್ದರೂ ಸರಿಯಾದ ಪ್ಲಾನಿಂಗ್ (retirement planning) ಇಲ್ಲದಿದ್ದರೆ ಅವೆಲ್ಲವೂ ನೀರಿನಂತೆ ಕರಗಿಹೋದೀತು. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಹಣಕಾಸು ತಜ್ಞರು ರಿಟೈರ್ಮೆಂಟ್ ಹೇಗಿರಬೇಕು ಎಂಬುದಕ್ಕೆ ತ್ರಿವಳಿ ಸೂತ್ರ (3 buckets strategy) ಮುಂದಿಡುತ್ತಾರೆ.

ರಿಟೈರ್ಮೆಂಟ್ ಪ್ಲಾನಿಂಗ್: ತ್ರಿವಳಿ ಸೂತ್ರ

  1. ನಿಯಮಿತ ಹಣದ ಹರಿವು
  2. ಸುರಕ್ಷತೆಯ ಹೂಡಿಕೆ
  3. ದೀರ್ಘಾವಧಿ ಹಣ ಬೆಳೆಸುವ ಹೂಡಿಕೆ

ಈ ಮೂರರ ಜೊತೆಗೆ ಆರೋಗ್ಯ ವಿಮೆ ಕೂಡ ಇರಬೇಕು. ಈ ಮೂರು ರೀತಿಯ ಹೂಡಿಕೆಗಳಲ್ಲಿ ನಿಮ್ಮ ಹಣದ ಹಂಚಿಕೆ ಇರಲಿ.

ಇದನ್ನೂ ಓದಿ: ಮಹಿಳಾ ಸಮ್ಮಾನ್ vs ಸುಕನ್ಯಾ ಸಮೃದ್ಧಿ: ಯಾವ ಯೋಜನೆ ನಿಮಗೆ ಸೂಕ್ತ? ಇಲ್ಲಿದೆ ಹೋಲಿಕೆ

ನಿಯಮಿತ ಹಣದ ಹರಿವು

ಆರೋಗ್ಯ ವೆಚ್ಚ ಸೇರಿದಂತೆ ತಿಂಗಳ ವೆಚ್ಚಕ್ಕೆ ಅಗತ್ಯ ಬೀಳಬಹುದಾದ ಹಣ ಈ ವಿಭಾಗದಲ್ಲಿರಲಿ. ಬ್ಯಾಂಕ್ ಅಕೌಂಟ್​ನಲ್ಲಿ ಹಣವನ್ನು ಮೈಂಟೇನ್ ಮಾಡಬಹುದು. ತುರ್ತು ವೆಚ್ಚಕ್ಕೆಂದು ನಿರ್ದಿಷ್ಟ ಮೊತ್ತವನ್ನು ಅಲ್ಪಾವಧಿ ಎಫ್​ಡಿಗಳಲ್ಲಿ ಇರಿಸಬಹುದು. ಬಾಡಿಗೆ ಇತ್ಯಾದಿ ಯಾವುದಾದರೂ ಆದಾಯ ಬರುತ್ತಿದ್ದರೆ ಆ ಹಣವನ್ನು ಇಲ್ಲಿ ಇರಿಸಬಹುದು. ಸರ್ಕಾರದಿಂದ ಸಿಗುವ ವೃದ್ಧಾಪ್ಯ ಪಿಂಚಣಿ ಅಥವಾ ನಿಮ್ಮ ಕೆಲಸದಿಂದ ಸಿಗುವ ಪಿಂಚಣಿಯ ಆದಾಯ ಕೂಡ ಇರಬುದು. ಮೂರು ವರ್ಷಗಳವರೆಗೆ ಯಾವ ಸಮಸ್ಯೆ ಆಗದ ರೀತಿಯಲ್ಲಿ ನಿಯಮಿತ ವೆಚ್ಚಕ್ಕೆ ಹಣದ ಪ್ಲಾನಿಂಗ್ ಮಾಡಿರಿ.

ಸುರಕ್ಷಿತ ಹೂಡಿಕೆ

ಐದಾರು ವರ್ಷಗಳವರೆಗೆ ನಿಮ್ಮ ಹೂಡಿಕೆಯನ್ನು ಯೋಜಿಸಬೇಕು. ಫಿಕ್ಸೆಡ್ ಡೆಪಾಸಿಟ್, ಬಾಂಡ್, ಸಣ್ಣ ಉಳಿತಾಯ ಯೋಜನೆ ಇತ್ಯಾದಿ ಸ್ಕೀಮ್​ಗಳಲ್ಲಿ ನಿಮ್ಮ ಹಣವನ್ನು ತೊಡಗಿಸಿಕೊಳ್ಳಬಹುದು. ಡೆಟ್ ಯಂತ್ರಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್​ನಲ್ಲೂ ನೀವು ಹೂಡಿಕೆ ಮಾಡಬಹುದು. ಇಂಥ ಹೂಡಿಕೆಗಳಿಂದ ಶೇ. 7ರಿಂದ 9ರಷ್ಟು ವಾರ್ಷಿಕ ಲಾಭ ಪಡೆಯಬಹುದು.

ಹಣ ಬೆಳೆಸುವ ಹೂಡಿಕೆ

ನಿಮ್ಮ ಹಣವನ್ನು ವೇಗವಾಗಿ ಬೆಳೆಸುವ ಯಂತ್ರಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ ಇದಕ್ಕೆ ಉದಾಹರಣೆ. ರಿಯಲ್ ಎಸ್ಟೇಟ್, ಚಿನ್ನ ಇತ್ಯಾದಿಯಲ್ಲೂ ಹೂಡಿಕೆ ಮಾಡಬಹುದು. ವಾರ್ಷಿಕವಾಗಿ ಶೇ. 10ಕ್ಕಿಂತಲೂ ಹೆಚ್ಚು ಲಾಭವನ್ನು ನಿರೀಕ್ಷಿಸಬಹುದು. ಇಂಥ ಹೂಡಿಕೆಗಳು ದೀರ್ಘಾವಧಿ ಇರಲಿ.

ಇದನ್ನೂ ಓದಿ: ಎಸ್​ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನಿಮ್ಮ ನಿಯಮಿತ ಖರ್ಚಿಗೆ ಹಣ ಸಾಕಾಗದಾಗ ಎರಡನೇ ವಿಭಾಗದಿಂದ ಹಣ ಭರಿಸಬೇಕಾಗುತ್ತದೆ. ಎರಡನೇ ವಿಭಾಗದಲ್ಲಿ ಹಣದ ಕೊರತೆ ಎದುರಾದರೆ ಮೂರನೇ ವಿಭಾಗದಿಂದ ಬರುವ ಒಂದಷ್ಟು ಆದಾಯವನ್ನು ಎರಡನೆಯದ್ದಕ್ಕೆ ವರ್ಗಾಯಿಸಬೇಕಾಗುತ್ತದೆ.

ಈ ರೀತಿಯಾಗಿ ನಿಮ್ಮ ನಿವೃತ್ತಿ ಜೀವನವನ್ನು ಪ್ಲಾನ್ ಮಾಡಬೇಕಾಗುತ್ತದೆ. ಇಲ್ಲಿ ಆರೋಗ್ಯ ವಿಮೆ ಪಾಲಿಸಿ ಹೊಂದಿರುವುದು ಬಹಳ ಮುಖ್ಯ. ಸರ್ಕಾರದ ಆರೋಗ್ಯ ಯೋಜನೆಗಳನ್ನೂ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ