ಎಸ್​ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ

SBI Contra Fund Magic: ಮ್ಯೂಚುವಲ್ ಫಂಡ್​ಗಳ ಪೈಕಿ ಬಹಳ ರಿಸ್ಕಿ ಎನಿಸಿರುವುದು ಕಾಂಟ್ರಾ ಫಂಡ್. ಇದು ಮಾರುಕಟ್ಟೆ ಟ್ರೆಂಡ್​ಗೆ ವಿರುದ್ಧವಾಗಿ ಸಾಗುತ್ತದೆ. ಈ ಕಳೆಗುಂದಿರುವ ಷೇರುಗಳಲ್ಲಿ ಉತ್ತಮ ಭವಿಷ್ಯ ಇರುವವುಗಳನ್ನು ಗುರುತಿಸಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ, ಹೈ ರಿಸ್ಕ್ ಆದರೂ ಹೈ ರಿಟರ್ನ್ ಸಾಧ್ಯತೆ ಹೆಚ್ಚು. ಎಸ್​ಬಿಐನ ಕಾಂಟ್ರಾ ಫಂಡ್ ಕಳೆದ 25 ವರ್ಷದಲ್ಲಿ ವಾರ್ಷಿಕವಾಗಿ ಶೇ. 19-20ರಷ್ಟು ರಿಟರ್ನ್ ತಂದಿದೆ.

ಎಸ್​ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ
ಎಸ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 06, 2024 | 11:01 AM

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸುಲಭ ದಾರಿ ಎಂದರೆ ಅದು ಮ್ಯೂಚುವಲ್ ಫಂಡ್. ಈಗ ಬಹಳಷ್ಟು ಮ್ಯೂಚುವಲ್ ಫಂಡ್​ಗಳು (Mutual funds) ಅದ್ವಿತೀಯ ರಿಟರ್ನ್ ನೀಡಿವೆ. ಎಸ್​ಬಿಐನ ಕಾಂಟ್ರಾ ಫಂಡ್ (SBI contra fund) ಕಳೆದ 25 ವರ್ಷದಲ್ಲಿ ಶೇ. 20ಕ್ಕೆ ಸಮೀಪದಷ್ಟು ವಾರ್ಷಿಕ ದರದಲ್ಲಿ ಲಾಭ ಮಾಡಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಂತೂ ಈ ಕಾಂಟ್ರಾ ಫಂಡ್ ಅಕ್ಷರಶಃ ಅಚ್ಚರಿಯ ಓಟ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಇದು ಶೇ. 47.76ರಷ್ಟು ರಿಟರ್ನ್ ತಂದಿದೆ. ಕಳೆದ 3 ವರ್ಷದಲ್ಲಿ ಶೇ. 29.72ರ ವಾರ್ಷಿಕ ದರದಲ್ಲಿ ಹೂಡಿಕೆ ಬೆಳೆದಿದೆ. ಐದು ವರ್ಷದಲ್ಲಿ ಶೇ. 24.69ರಷ್ಟು ಬೆಳೆದಿದೆ.

ಎಸ್​ಬಿಐ ಕಾಂಟ್ರಾ ಫಂಡ್ ಆರಂಭವಾಗಿದ್ದು 1999ರಲ್ಲಿ. ಆಗ ಯಾರಾದರೂ ಈ ಫಂಡ್​ನಲ್ಲಿ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಆ ಹಣ 84.75 ಲಕ್ಷ ರೂ ಆಗಿರುತ್ತಿತ್ತು. ಒಂದು ವರ್ಷದ ಹಿಂದೆ ಒಂದು ಲಕ್ಷ ರೂ ಹಾಕಿದ್ದರೆ ಇವತ್ತು ಆ ಹಣ 1.47 ಲಕ್ಷ ರೂ ಆಗುತ್ತಿತ್ತು.

ಒಂದು ವೇಳೆ ಈ ಕಾಂಟ್ರಾ ಫಂಡ್​ನಲ್ಲಿ ಎಸ್​ಐಪಿ ಪ್ಲಾನ್ ಪ್ರಕಾರ ಪ್ರತೀ ತಿಂಗಳು ಕೇವಲ 5 ಸಾವಿರದಂತೆ 1999ರಿಂದಲೂ ಹೂಡಿಕೆ ಮಾಡುತ್ತಾ ಬಂದಿದ್ದರೆ ಇವತ್ತು ಹಣ ಮೂರೂವರೆ ಕೋಟಿ ರೂಗೂ ಹೆಚ್ಚು ಆಗಿರುತ್ತಿತ್ತು.

ಇದನ್ನೂ ಓದಿ: ಕಾರ್ಮಿಕರ ದಿನದಂದು ಷೇರುಪೇಟೆಗೆ ರಜೆಯಾ? ಮೇ ತಿಂಗಳಲ್ಲಿ ಯಾವ್ಯಾವ ದಿನ ಇದೆ ರಜೆ? ಇಲ್ಲಿದೆ ಪಟ್ಟಿ

ಏನಿದು ಕಾಂಟ್ರಾ ಫಂಡ್?

ರಿಸ್ಕ್ ಹೆಚ್ಚಿದಷ್ಟೂ ಹೆಚ್ಚಿನ ಲಾಭದ ಸಾಧ್ಯತೆ ಹೆಚ್ಚಿರುತ್ತದೆ. ಮ್ಯೂಚುವಲ್ ಫಂಡ್​ಗಳ ಪೈಕಿ ಅತಿ ರಿಸ್ಕಿ ಎಂದರೆ ಅದು ಕಾಂಟ್ರಾ ಫಂಡ್​ಗಳು. ಲಾರ್ಜ್ ಕ್ಯಾಪ್ ಫಂಡ್, ಅಂದರೆ ದೊಡ್ಡ ಮಾರುಕಟ್ಟೆ ಬಂಡವಾಳ ಇರುವ ಕಂಪನಿಗಳ ಷೇರುಗಳ ಮೇಲೆ ಮಾಡಲಾಗುವ ಹೂಡಿಕೆಯನ್ನು ಬಹಳ ಸುರಕ್ಷಿತ ಎಂದು ಭಾವಿಸಲಾಗುತ್ತದೆ. ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ ಸೂಚ್ಯಂಕಗಳಲ್ಲಿನ ಷೇರುಗಳು ಇದಕ್ಕೆ ಉದಾಹರಣೆ. ಸ್ಮಾಲ್ ಕ್ಯಾಪ್ ಷೇರುಗಳ ಮೇಲೆ ಹೂಡಿಕೆ ಹೆಚ್ಚು ರಿಸ್ಕಿ. ಆದರೆ, ಎಲ್ಲಕ್ಕಿಂತ ರಿಸ್ಕ್ ಇರುವುದು ಕಾಂಟ್ರಾ ಫಂಡ್​ನಲ್ಲಿ. ಎಸ್​ಬಿಐನ ಕಾಂಟ್ರಾ ಫಂಡ್ ಅನ್ನು ಎಸ್​ಬಿಐ ಹೈ ರಿಸ್ಕಿ ಎಂದು ವರ್ಗೀಕರಿಸಿದೆ.

ಕಾಂಟ್ರಾ ಫಂಡ್ ಎಂದರೆ ಮಾರುಕಟ್ಟೆ ಟ್ರೆಂಡ್​ಗೆ ವಿರುದ್ಧವಾಗಿ ಹೂಡಿಕೆ ಮಾಡುವುದು. ಇವತ್ತು ಬ್ಯಾಂಕಿಂಗ್ ವಲಯ ಓಡುವ ಕುದುರೆ. ಎಲೆಕ್ಟ್ರಾನಿಕ್ಸ್ ಉದ್ಯಮ ಕಳೆಗುಂದಿದೆ ಎಂದಿಟ್ಟುಕೊಳ್ಳೋಣ. ಹೆಚ್ಚಿನ ಜನರು ಬ್ಯಾಂಕ್​ಗಳ ಷೇರುಗಳತ್ತ ಮುಗಿಬೀಳುತ್ತಾರೆ. ಅದು ಟ್ರೆಂಡ್. ಆದರೆ, ಎಲೆಕ್ಟ್ರಾನಿಕ್ಸ್ ತಯಾರಕ ಉದ್ಯಮ ಈಗ ಕಳೆಗುಂದಿದೆಯಾದರೂ ಮುಂದಿನ ದಿನಗಳಲ್ಲಿ ಅದು ಪ್ರಾಮುಖ್ಯತೆ ಪಡೆಯಬಹುದು. ಫಂಡ್ ಮ್ಯಾನೇಜರ್​ಗಳು ಇಂಥ ವಲಯವನ್ನು ಗುರುತಿಸಿ ಆ ಕ್ಷೇತ್ರದ ಪ್ರಮುಖ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತಾರೆ. ಇಂಥ ಫಂಡ್​ಗಳನ್ನು ಕಾಂಟ್ರಾ ಫಂಡ್ ಎಂದು ಪರಿಗಣಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ