AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಮಿಕರ ದಿನದಂದು ಷೇರುಪೇಟೆಗೆ ರಜೆಯಾ? ಮೇ ತಿಂಗಳಲ್ಲಿ ಯಾವ್ಯಾವ ದಿನ ಇದೆ ರಜೆ? ಇಲ್ಲಿದೆ ಪಟ್ಟಿ

Stock Market Holidays In May 2024: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮೇ 1, ಇಂದು ಬಂದ್ ಆಗಿರುತ್ತವೆ. ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್ ಆದ ಎಂಸಿಎಕ್ಸ್ ಇಂದು ಅರ್ಧ ದಿನ ಮಾತ್ರ ತೆರೆದಿರುತ್ತದೆ. ಮಹಾರಾಷ್ಟ್ರ ದಿನದ ಕಾರಣಕ್ಕೆ ರಜೆ ನೀಡಲಾಗಿದೆ. ಮೇ 20ರಂದು ಮುಂಬೈನಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಅಂದೂ ಕೂಡ ಷೇರುಪೇಟೆ ಮುಚ್ಚಿರುತ್ತದೆ. ಮೇ 1ರಿಂದ ಆರಂಭವಾಗಿ 2024ರ ಉಳಿದ ಅವಧಿಯಲ್ಲಿ ಆರು ರಜಾ ದಿನಗಳಿವೆ. ಇವುಗಳ ಜೊತೆಗೆ ಶನಿವಾರ ಮತ್ತು ಭಾನುವಾರ ಸೇರಿ ವಾರದಲ್ಲಿ ಎರಡು ರೆಗ್ಯುಲರ್ ರಜೆಗಳಿರುತ್ತವೆ.

ಕಾರ್ಮಿಕರ ದಿನದಂದು ಷೇರುಪೇಟೆಗೆ ರಜೆಯಾ? ಮೇ ತಿಂಗಳಲ್ಲಿ ಯಾವ್ಯಾವ ದಿನ ಇದೆ ರಜೆ? ಇಲ್ಲಿದೆ ಪಟ್ಟಿ
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 01, 2024 | 10:46 AM

Share

ಮುಂಬೈ, ಮೇ 1: ಇಂದು ಕಾರ್ಮಿಕರ ದಿನ ಹಾಗು ಮಹಾರಾಷ್ಟ್ರ ದಿನ. ಷೇರು ಮಾರುಕಟ್ಟೆಗೆ ಇಂದು ಬುಧವಾರ ರಜೆ ಇದೆ. ಮಹಾರಾಷ್ಟ್ರ ದಿನದ (Maharashtra Day) ಹಿನ್ನೆಲೆಯಲ್ಲಿ ಷೇರು ವಿನಿಮಯ ಕೇಂದ್ರಗಳು (stock exchanges) ಇಂದು ಬಂದ್ ಆಗಿರುತ್ತದೆ. ಇಂದು ಷೇರು ವಹಿವಾಟು ನಡೆಯುವುದಿಲ್ಲ. ಬಿಎಸ್​ಇ ಮತ್ತು ಎನ್​ಎಸ್​ಇ ಭಾರತದಲ್ಲಿರುವ ಎರಡು ಷೇರು ವಿನಿಮಯ ಕೇಂದ್ರಗಳು. ಇವು ಬಿಡುಗಡೆ ಮಾಡಿದ ರಜಾ ದಿನಗಳ ಪಟ್ಟಿಯಲ್ಲಿ ಮೇ 1 ಇದೆ. ಆದರೆ, ಕಮಾಡಿಟಿ ಎಕ್ಸ್​ಚೇಂಜ್ ಅಥವಾ ಸರಕು ವಿನಿಮಯ ಕೇಂದ್ರವಾದ ಎಂಸಿಎಕ್ಸ್​ನಲ್ಲಿ ಅರ್ಧದಿನ ಮಾತ್ರ ಚಟುವಟಿಕೆ ಇರುತ್ತದೆ. ಎಂಸಿಎಕ್ಸ್​ನಲ್ಲಿ 9 ಗಂಟೆಗೆ ಆರಂಭವಾಗುವ ಬೆಳಗಿನ ಸೆಷನ್ ಇರುವುದಿಲ್ಲ. ಸಂಜೆ 5ಕ್ಕೆ ಇಲ್ಲಿ ವ್ಯಾಪಾರ ಶುರುವಾಗುತ್ತದೆ. ಆದರೆ, ಇಂದು ಟ್ರೇಡ್ ಸೆಟಲ್ಮೆಂಟ್ ಇರುವುದಿಲ್ಲ.

ಮೇ ತಿಂಗಳಲ್ಲಿ ಬೇರೆ ಯಾವ ದಿನಗಳಲ್ಲಿ ಷೇರು ಮಾರುಕಟ್ಟೆಗೆ ರಜೆ?

ಷೇರು ಮಾರುಕಟ್ಟೆಗೆ ಒಂದು ವಾರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ರೆಗ್ಯುಲರ್ ರಜಾ ದಿನಗಳಿವೆ. ಇದರ ಜೊತೆಗೆ ಬೇರೆ ಬೇರೆ ಕೆಲ ದಿನಗಳಲ್ಲಿ ರಜೆ ಇರುತ್ತದೆ. ಮೇ 1ರಂದು ಮಹಾರಾಷ್ಟ್ರ ದಿನವಾಗಿ ರಜೆ ಇದೆ. ಮೇ 20ರಂದು ಮುಂಬೈನಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಅಂದು ರಜೆ ಇರುತ್ತದೆ. ಷೇರು ವಿನಿಮಯ ಕೇಂದ್ರಗಳಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮುಂಬೈನಲ್ಲಿ ಇವೆ. ಹೀಗಾಗಿ, ಷೇರು ಮಾರುಕಟ್ಟೆಯ ರಜಾ ದಿನಗಳಿಗೂ ಮಹಾರಾಷ್ಟ್ರ ರಾಜ್ಯದ ರಜಾ ದಿನಗಳಿಗೂ ನಂಟಿದೆ.

ಇದನ್ನೂ ಓದಿ: ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ; ಕಾರ್ಮಿಕರ ದಿನ, ಬಸವ ಜಯಂತಿ ಇತ್ಯಾದಿ ರಜಾ ದಿನಗಳು; ಇಲ್ಲಿದೆ ಪಟ್ಟಿ

2024ರಲ್ಲಿ ಷೇರು ಮಾರುಕಟ್ಟೆಗೆ ಇರುವ ರಜೆಗಳು

ಈ ವರ್ಷ, ಅಂದರೆ 2024ರಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 15 ದಿನ ಷೇರುಪೇಟೆಗೆ ರಜೆ ಇರುತ್ತದೆ. ಮೇ ತಿಂಗಳಿಂದ 6 ರಜಾ ದಿನಗಳಿವೆ.

  • ಮೇ 1: ಮಹಾರಾಷ್ಟ್ರ ದಿನ
  • ಮೇ 20: ಮುಂಬೈನಲ್ಲಿ ಲೋಕಸಭಾ ಚುನಾವಣೆ
  • ಜೂನ್ 17: ಬಕ್ರೀದ್
  • ಜುಲೈ 17: ಮುಹರಂ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಅಕ್ಟೋಬರ್ 2: ಗಾಂಧಿ ಜಯಂತಿ

ನಿನ್ನೆ ಷೇರು ಮಾರುಕಟ್ಟೆ ವಿಚಿತ್ರವಾಗಿ ವರ್ತಸಿತ್ತು. ಮಂಗಳವಾರ ಇಂಟ್ರಾ ಡೇ ಟ್ರೇಡಿಂಗ್​ನಲ್ಲಿ ನಿಫ್ಟಿ 50 ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿ ಬಳಿಕ ಕುಸಿಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!