AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ; ಕಾರ್ಮಿಕರ ದಿನ, ಬಸವ ಜಯಂತಿ ಇತ್ಯಾದಿ ರಜಾ ದಿನಗಳು; ಇಲ್ಲಿದೆ ಪಟ್ಟಿ

Bank holidays 2024 May: ಮೇ ತಿಂಗಳಲ್ಲಿ ನಾಲ್ಕು ಹಂತಗಳ ಚುನಾವಣೆ ನಡೆಯುವುದು ಸೇರಿದಂತೆ ಒಟ್ಟಾರೆ 14 ದಿನ ಬ್ಯಾಂಕುಗಳಿಗೆ ರಜೆ ಇರಲಿದೆ. ಆರ್​ಬಿಐ ಕ್ಯಾಲಂಡರ್ ಪ್ರಕಾರ 11 ರಜಾ ದಿನ ಇದೆ. ಕರ್ನಾಟಕದಲ್ಲಿ ಮೇ 7ರಂದು 3ನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಕೆಲವೆಡೆ ರಜೆ ಇರುತ್ತದೆ. ಬಸವ ಜಯಂತಿ, ಬುದ್ಧ ಪೂರ್ಣಿ, ಕಾರ್ಮಿಕರ ದಿನಕ್ಕೂ ಕರ್ನಾಟಕದಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆಗಳೂ ಇದರಲ್ಲಿ ಒಳಗೊಂಡಿವೆ.

ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ; ಕಾರ್ಮಿಕರ ದಿನ, ಬಸವ ಜಯಂತಿ ಇತ್ಯಾದಿ ರಜಾ ದಿನಗಳು; ಇಲ್ಲಿದೆ ಪಟ್ಟಿ
ಬ್ಯಾಂಕು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 30, 2024 | 12:59 PM

ಬೆಂಗಳೂರು, ಏಪ್ರಿಲ್ 30: ಆರ್​ಬಿಐ ಕ್ಯಾಲಂಡರ್ ಪ್ರಕಾರ 2024ರ ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ ಇದೆ. ಚುನಾವಣೆಯ ಮೂರರಿಂದ ಆರು ಹಂತಗಳ ಮತದಾನದ ಹಿನ್ನೆಲೆಯಲ್ಲಿ ಕೆಲವೆಡೆ ರಜೆ (Bank holidays 2024 May) ಇರುವುದು ಸೇರಿ ಮೇ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ 10 ದಿನ ರಜೆ ಇದೆ. ಮೇ 1ರಂದು ಕಾರ್ಮಿಕರ ದಿನದ ನಿಮಿತ್ತ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಆಗಲಿವೆ. ಮೇ 7, 13, 20 ಮತ್ತು 25ರಂದು ವಿವಿಧೆಡೆ ಮತದಾನ ನಡೆಯಲಿದೆ. ಮೇ 7ರಂದು ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಇರುವುದರಿಂದ ಅಲ್ಲಿನ ಬ್ಯಾಂಕುಗಳು ಬಂದ್ ಇರುತ್ತವೆ. ಮೇ ತಿಂಗಳಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ರಜೆಗಳೂ ಇವೆ.

ಕರ್ನಾಟಕದಲ್ಲಿ 10 ದಿನ ರಜೆ

ಕರ್ನಾಟಕದಲ್ಲಿ ಮೇ 1ಕ್ಕೆ ಕಾರ್ಮಿಕರ ದಿನದ ನಿಮಿತ್ತ ರಜೆ ಇದೆ. ಮೇ 7ಕ್ಕೆ 3ನೇ ಹಂತದ ಚುನಾವಣೆ ಇರುವುದರಿಂದ 14 ಲೋಕಸಭಾ ಕ್ಷೇತ್ರಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಮೇ 10ರಂದು ಬಸವ ಜಯಂತಿ, ಮೇ 23ರಂದು ಬುದ್ಧ ಪೂರ್ಣಿಮಾ ಇರುವುದರಿಂದ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಆರ್​ಬಿಐ ರಜೆ ಕಲ್ಪಿಸಿದೆ.

ಇದನ್ನೂ ಓದಿ: ಜಿಡಿಪಿ ದರಕ್ಕೆ ತಕ್ಕಂತೆ ಬೆಲೆ ಏರಿಕೆ ಇಲ್ಲವಲ್ಲ; ಭಾರತದ ಆರ್ಥಿಕ ವೃದ್ಧಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಘುರಾಮ್ ರಾಜನ್

2024ರ ಮೇ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ

  • ಮೇ 1, ಬುಧವಾರ: ವಿಶ್ವ ಕಾರ್ಮಿಕರ ದಿನ/ ಮಹಾರಾಷ್ಟ್ರ ದಿನ (ಮಹಾರಾಷ್ಟ್ರ, ಕರ್ನಾಟಕ ತಮಿಳುನಾಡು, ಆಂಧ್ರ, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕ್ ರಜೆ)
  • ಮೇ 5: ಭಾನುವಾರ
  • ಮೇ 7, ಮಂಗಳವಾರ: ಲೋಕಸಭಾ ಚುನಾವಣೆ 3ನೇ ಹಂತ (ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಗೋವಾದಲ್ಲಿ ರಜೆ)
  • ಮೇ 8, ಬುಧವಾರ: ರಬೀಂದ್ರ ಜಯಂತಿ (ಪಶ್ಚಿಮ ಬಂಗಾಳದಲ್ಲಿ ರಜೆ)
  • ಮೇ 10, ಶುಕ್ರವಾರ: ಬಸವ ಜಯಂತಿ/ ಅಕ್ಷಯ ತೃತೀಯ (ಕರ್ನಾಟಕದಲ್ಲಿ ರಜೆ)
  • ಮೇ 11: ಎರಡನೇ ಶನಿವಾರ
  • ಮೇ 12: ಭಾನುವಾರ
  • ಮೇ 13, ಸೋಮವಾರ: ಲೋಕಸಭಾ ಚುನಾವಣೆ 4ನೇ ಹಂತ (ಜಮ್ಮು ಕಾಶ್ಮೀರದಲ್ಲಿ ರಜೆ)
  • ಮೇ 16, ಗುರುವಾರ: ಸಿಕ್ಕಿಂ ರಾಜ್ಯ ದಿನ
  • ಮೇ 19: ಭಾನುವಾರ
  • ಮೇ 20: ಸೋಮವಾರ (5ನೇ ಹಂತದ ಚುನಾವಣೆ)
  • ಮೇ 23, ಗುರುವಾರ: ಬುದ್ಧ ಪೂರ್ಣಿಮಾ (ಪ್ರಮುಖ ನಗರಗಳಲ್ಲಿ ರಜೆ)
  • ಮೇ 25: ನಾಲ್ಕನೇ ಶನಿವಾರ
  • ಮೇ 26: ಭಾನುವಾರ

ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳು

  1. ಮೇ 1, ಬುಧವಾರ: ಕಾರ್ಮಿಕರ ದಿನ
  2. ಮೇ 5: ಭಾನುವಾರ
  3. ಮೇ 7, ಮಂಗಳವಾರ: ಚುನಾವಣೆ (ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ)
  4. ಮೇ 10, ಶುಕ್ರವಾರ: ಬಸವ ಜಯಂತಿ/ ಅಕ್ಷಯ ತೃತೀಯ
  5. ಮೇ 11: ಎರಡನೇ ಶನಿವಾರ
  6. ಮೇ 12: ಭಾನುವಾರ
  7. ಮೇ 19: ಭಾನುವಾರ
  8. ಮೇ 23, ಗುರುವಾರ: ಬುದ್ಧ ಪೂರ್ಣಿಮಾ
  9. ಮೇ 25: ನಾಲ್ಕನೇ ಶನಿವಾರ
  10. ಮೇ 26: ಭಾನುವಾರ

ಇದನ್ನೂ ಓದಿ: ರೆಗ್ಯುಲರ್ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಲು ಅರ್ಹ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ಆರ್​ಬಿಐ ಆಹ್ವಾನ

ಬ್ಯಾಂಕುಗಳು ಬಂದ್ ಆಗಿದ್ದರೂ ಬಹುತೇಕ ಬ್ಯಾಂಕಿಂಗ್ ಸೇವೆಗಳು ಆನ್​ಲೈನ್​ನಲ್ಲಿ ಸದಾ ಲಭ್ಯ ಇರುತ್ತವೆ. ಎಟಿಎಂ, ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಹಣದ ವಹಿವಾಟು ನಡೆಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ