AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಗ್ಯುಲರ್ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಲು ಅರ್ಹ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ಆರ್​ಬಿಐ ಆಹ್ವಾನ

Small Finance Banks can become regular banks if meet certain criterias: ರೆಗ್ಯುಲರ್ ಬ್ಯಾಂಕ್ ಆಗಬಯಸುವ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಂದ ಆರ್​ಬಿಐ ಅರ್ಜಿ ಆಹ್ವಾನಿಸಿದೆ. 2019ರ ಡಿಸೆಂಬರ್​ನಲ್ಲಿ ಈ ಸಣ್ಣ ಬ್ಯಾಂಕುಗಳಿಗೆ ರೆಗ್ಯುಲರ್ ಬ್ಯಾಂಕ್ ಆಗಿ ಪರಿವರ್ತಿಸುವ ಅವಕಾಶವನ್ನು ಆರ್​ಬಿಐ ಒದಗಿಸಿತ್ತು. ಅದಕ್ಕೆ ಬೇಕಾದ ಮಾನದಂಡಗಳಿಗೆ ಬದ್ಧವಾಗಲು ಈ ಸಣ್ಣ ಬ್ಯಾಂಕುಗಳಿಗೆ ನಾಲ್ಕೈದು ವರ್ಷ ಕಾಲಾವಕಾಶವೂ ಇತ್ತು. ಈಗ ಅರ್ಜಿ ಹಾಕಬಹುದಾಗಿದೆ. ಕನಿಷ್ಠ ನಿವ್ವಳ ಮೌಲ್ಯ 1,000 ಕೋಟಿ ರೂ ಇರಬೇಕು ಎಂಬುದೂ ಸೇರಿದಂತೆ ನಾಲ್ಕೈ ದು ಪ್ರಮುಖ ಷರತ್ತುಗಳನ್ನು ಆರ್​ಬಿಐ ವಿಧಿಸಿದೆ.

ರೆಗ್ಯುಲರ್ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಲು ಅರ್ಹ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ಆರ್​ಬಿಐ ಆಹ್ವಾನ
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2024 | 12:31 PM

Share

ನವದೆಹಲಿ, ಏಪ್ರಿಲ್ 28: ರೆಗ್ಯುಲರ್ ಬ್ಯಾಂಕ್ ಅಥವಾ ಸಾರ್ವತ್ರಿಕ ಬ್ಯಾಂಕ್ ಆಗಿ ಬದಲಾಗಲು ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಂದ (small finance bank) ಆರ್​ಬಿಐ ಅರ್ಜಿ ಆಹ್ವಾನಿಸಿದೆ. ಒಂದಷ್ಟು ಮಾನದಂಡಗಳಿಗೆ ತಾಳೆಯಾದರೆ ಈ ಸಣ್ಣ ಬ್ಯಾಂಕುಗಳು ರೆಗ್ಯುಲರ್ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಬಹುದು. ನಿವ್ವಳ ಮೌಲ್ಯ ಕನಿಷ್ಠ ಒಂದು ಸಾವಿರ ಕೋಟಿ ರೂ ಇರುವುದು ಈ ಪ್ರಮುಖ ಮಾನದಂಡಗಳಲ್ಲಿ ಒಂದು. ಭಾರತದಲ್ಲಿ 10ಕ್ಕೂ ಹೆಚ್ಚು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿವೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೊದಲಾದವು ಇವೆ.

ರೆಗ್ಯುಲರ್ ಬ್ಯಾಂಕ್ ಆಗಲು ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ನಿಗದಿ ಮಾಡಲಾಗಿರುವ ಪ್ರಮುಖ ಮಾನದಂಡಗಳಿವು…

  • ಸ್ಮಾಲ್ ಫೈನಾನ್ಸ್ ಬ್ಯಾಂಕು ಅಧಿಕೃತ ಷೇರು ವಿನಿಮಯ ಕೇಂದ್ರ ಅಥವಾ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿರಬೇಕು. ಅಂದರೆ ಬಿಎಸ್​ಇ ಅಥವಾ ಎನ್​ಎಸ್​ಇಯಲ್ಲಿ ಲಿಸ್ಟ್ ಆಗಿರಬೇಕು
  • ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಅದರ ನಿವ್ವಳ ಮೌಲ್ಯ 1,000 ಕೋಟಿ ರೂನಷ್ಟಾದರೂ ಇರಬೇಕು.
  • ಕಳೆದ ಎರಡು ಹಣಕಾಸು ವರ್ಷದಲ್ಲಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಒಟ್ಟು ಅನುತ್ಪಾದಕ ಆಸ್ತಿ ಅಥವಾ ಜಿಎನ್​ಪಿಎ ಶೇ. 3 ಮೀರಿರಬಾರದು. ನಿವ್ವಳ ಎನ್​ಪಿಎ ಶೇ. 1ಕ್ಕಿಂತ ಕಡಿಮೆ ಇರಬೇಕು.
  • ಕನಿಷ್ಠ ಐದು ವರ್ಷವಾದರೂ ಸಮಾಧಾನಕರ ಸಾಧನೆ ಹೊಂದಿರಬೇಕು.
  • ನಷ್ಟ ಭರಿಸುವಷ್ಟು ಸಾಮರ್ಥ್ಯವನ್ನು ಬಿಂಬಿಸುವಂತಹ ಸಿಆರ್​ಎಆರ್ ಅಥವಾ ಸಿಎಆರ್ (ಕ್ಯಾಪಿಟಲ್ ಅಡಿಕ್ವೆಸಿ ರೇಶಿಯೋ) ಸಮರ್ಪಕವಾಗಿರಬೇಕು.

ಇದನ್ನೂ ಓದಿ: ಭಾರತದಲ್ಲಿ ಗೃಹಸಾಲ ದುಂದು ವೆಚ್ಚವಾಗುತ್ತಿದೆ, ನಿಯಂತ್ರಣ ಮಾಡಲು ಬ್ಯಾಂಕ್​​ಗಳಿಗೆ ಆರ್​​ಬಿಐ ಎಚ್ಚರಿಕೆ

ಇನ್ನು, ಷೇರುಪಾಲುದಾರಿಕೆಯ ವಿಧಾನದ ಬಗ್ಗೆ ಆರ್​ಬಿಐನಲ್ಲಿ ಒಂದು ನಿಯಮ ಇದೆ. ಸ್ಮಾಲ್ ಫೈನಾನ್ಸ್ ಬ್ಯಾಂಕ್​ವೊಂದು ರೆಗ್ಯುಲರ್ ಬ್ಯಾಂಕ್ ಆಗಿ ಪರಿವರ್ತನೆ ಆಗುವಾಗ ಅದಕ್ಕೆ ಹೊಸ ಪ್ರೊಮೋಟರ್ಸ್ ಸೇರ್ಪಡೆಯಾಗುವಂತಿಲ್ಲ. ಅಥವಾ ಇರುವ ಪ್ರೊಮೋಟರ್ಸ್​ನಲ್ಲಿ ಬದಲಾವಣೆ ಮಾಡುವಂತಿಲ್ಲ.

ಇಲ್ಲಿ ಪ್ರೊಮೋಟರ್ಸ್ ಎಂದರೆ ಕಂಪನಿಯ ಸಂಸ್ಥಾಪಕ ವರ್ಗಕ್ಕೆ ಸೇರಿದವರು. ಅಂದರೆ ಮಾಲೀಕರಾಗಿರಬಹುದು. ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ನಿರ್ದಿಷ್ಟ ಪ್ರೊಮೋಟರ್ಸ್ ಇರಲೇಬೇಕೆಂದು ಕಡ್ಡಾಯ ಏನಿರುವುದಿಲ್ಲ.

2019ರಲ್ಲೇ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ಯೂನಿವರ್ಸಲ್ ಬ್ಯಾಂಕ್ ಆಗಿ ಪರಿವರ್ತನೆಯಾಗಲು ದಾರಿ ತೆರೆಯಲಾಗಿತ್ತು. ಅದಕ್ಕೆ ಬೇಕಾದ ಮಾನದಂಡಗಳಿಗೆ ಬದ್ಧವಾಗಲು ಕಾಲಾವಕಾಶವನ್ನೂ ಕೊಡಲಾಗಿದೆ. ಈಗ ಅರ್ಹ ಎಸ್​ಎಫ್​ಬಿಗಳು ರೆಗ್ಯುಲರ್ ಬ್ಯಾಂಕ್ ಆಗಿ ಅರ್ಜಿ ಹಾಕಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ