Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿತ್ರಾರ್ಜಿತ ಆಸ್ತಿ ತೆರಿಗೆಯಿಂದ ಕಪ್ಪುಹಣ ಹೆಚ್ಚಾಗುತ್ತೆ: ಹಿರಿಯ ವಕೀಲ ಆರ್ಯಮ ಸುಂದರಂ

Inheritance tax may lead to black money hoarding: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂಪತ್ತು ಮರುಹಂಚಿಕೆ ಯೋಜನೆಯ ಭಾಗವಾಗಿ ಪಿತ್ರಾರ್ಜಿತ ಆಸ್ತಿ ತೆರಿಗೆ ಅಥವಾ ಎಸ್ಟೇಟ್ ಡ್ಯೂಟಿ ಜಾರಿಗೆ ಬರುತ್ತಾ ಎಂಬ ಚರ್ಚೆಗಳಾಗುತ್ತಿವೆ. ಹಿರಿಯ ವಕೀಲ ಆರ್ಯಮ ಸುಂದರಂ ಪ್ರಕಾರ, ಈ ತೆರಿಗೆ ಜಾರಿಗೆ ಬಂದರೆ ದೇಶದಲ್ಲಿ ಜನರು ಆಸ್ತಿ ತೋರ್ಪಡಿಸಲು ಹೆದರುತ್ತಾರೆ. ಕಪ್ಪು ಧನ ಹೆಚ್ಚಾಗುತ್ತದೆ ಎಂದಿದ್ದಾರೆ. 1985ರವರೆಗೂ ಭಾರತದಲ್ಲಿ ಎಸ್ಟೇಟ್ ಡ್ಯೂಟಿ ಜಾರಿಯಲ್ಲಿತ್ತು. ರಾಜೀವ್ ಗಾಂಧಿ ಸರ್ಕಾರ ಈ ತೆರಿಗೆಯನ್ನು ರದ್ದು ಮಾಡಿತ್ತು.

ಪಿತ್ರಾರ್ಜಿತ ಆಸ್ತಿ ತೆರಿಗೆಯಿಂದ ಕಪ್ಪುಹಣ ಹೆಚ್ಚಾಗುತ್ತೆ: ಹಿರಿಯ ವಕೀಲ ಆರ್ಯಮ ಸುಂದರಂ
ಆರ್ಯಮ ಸುಂದರಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2024 | 3:07 PM

ನವದೆಹಲಿ, ಏಪ್ರಿಲ್ 28: ದೇಶದಲ್ಲಿ ಸಂಪತ್ತು ಮರುಹಂಚಿಕೆ (wealth redistribution) ಮಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ (election manifesto) ತಿಳಿಸಿರುವುದು ಚರ್ಚೆಯ ವಿಷಯವಾಗಿದೆ. ಅಮೆರಿಕದಲ್ಲಿ ಜಾರಿಯಲ್ಲಿರುವ ಎಸ್ಟೇಟ್ ಟ್ಯಾಕ್ಸ್ ಅಥವಾ ಪಿತ್ರಾರ್ಜಿತ ಆಸ್ತಿ (estate duty / inheritance tax) ತೆರಿಗೆ ವಿಚಾರವನ್ನು ಉಲ್ಲೇಖಿಸುವ ಮೂಲಕ ಸಂಪತ್ತು ಮರುಹಂಚಿಕೆಗೆ ರೂಪಿಸಲಾಗುವ ನೀತಿ ಹೇಗಿರಬಹುದು ಎಂಬುದನ್ನು ಕಾಂಗ್ರೆಸ್​​ನ ಸ್ಯಾಮ್ ಪಿತ್ರೋಡಾ ಸೂಚ್ಯವಾಗಿ ತಿಳಿಸಿದ್ದಾರೆ. ಪಿತ್ರಾರ್ಜಿತ ಆಸ್ತಿ ತೆರಿಗೆ ಮೂಲಕ ಮನೆಯ ಹೆಣ್ಣುಮಕ್ಕಳ ಮಾಂಗಲ್ಯಕ್ಕೆ ಕೈಹಾಕುತ್ತಾರೆ ಹುಷಾರ್ ಎಂದು ಪ್ರಧಾನಿ ನರೇಂದ್ರ ಮೋದಿ ಆರ್ಭಟಿಸಿದ್ದಾರೆ. ಈ ಪಿತ್ರಾರ್ಜಿತ ಆಸ್ತಿಗೆ ತೆರಿಗೆ ವಿಚಾರವಾಗಿ ಪರ ವಿರೋಧ ಚರ್ಚೆ ಬಹಳ ನಡೆಯುತ್ತಿದೆ. ಹಿರಿಯ ವಕೀಲ ಆರ್ಯಮ ಸುಂದರಮ್ (Aryama sundaram) ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಗೆ ಬಂದರೆ ದೇಶದಲ್ಲಿ ಕಪ್ಪುಹಣ ಹೆಚ್ಚಾಗುತ್ತದೆ. ಜನರು ಆಸ್ತಿ ಮುಚ್ಚಿಸಲು ಯತ್ನಿಸುತ್ತಾರೆ ಎಂದಿದ್ದಾರೆ.

‘ಭಾರತದಲ್ಲಿ ಮೊದಲೇ ತೆರಿಗೆ ಹೆಚ್ಚಿದೆ. ಎಸ್ಟೇಟ್ ಡ್ಯೂಟ್ ಒಂದು ಕಾಲದಲ್ಲಿ ಬಹಳ ಹೆಚ್ಚಿತ್ತು. ಬಹಳಷ್ಟು ಕುಟುಂಬಗಳಿಗೆ ಹೊಡೆತ ಕೊಟ್ಟಿತ್ತು. ಎಸ್ಟೇಟ್ ಡ್ಯೂಟಿಯನ್ನು ತೆಗೆದು ಒಳ್ಳೆಯ ಕೆಲಸ ಮಾಡಿದರು. ಆ ತೆರಿಗೆ ರದ್ದಾದ ಬಳಿಕ ಜನರು ತಮ್ಮ ಸಂಪತ್ತು ತೋರ್ಪಡಿಸಲು ಹೆದರುವ ಪ್ರಮೇಯ ಬರಲಿಲ್ಲ. ಆ ಕಾನೂನು ಚಾಲ್ತಿಯಲ್ಲಿದ್ದಾಗ ಬಹಳಷ್ಟು ಜನರು ತಮ್ಮ ಆಸ್ತಿಯನ್ನು ಬಹಿರಂಗಪಡಿಸುತ್ತಿರಲಿಲ್ಲ,’ ಎಂದು ಸುಂದರಮ್ ತಮಗೆ ಮಾಹಿತಿ ನೀಡಿದರು ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಇದನ್ನೂ ಓದಿ: ಭಾರತೀಯನಾಗದಿದ್ದರೆ ಅಮೆರಿಕದಲ್ಲಿ ಸಿಇಒ ಆಗೋಕ್ಕಾಗಲ್ಲ: ಬದಲಾದ ವಾಸ್ತವ ಬಿಚ್ಚಿಟ್ಟಿದ್ದಾರೆ ಅಮೆರಿಕದ ರಾಯಭಾರಿ

ಬ್ಯಾಂಕ್ ಅಕೌಂಟ್​ನಲ್ಲಿ ಹಣ ಇಡಲು ಜನ ಹೆದರುತ್ತಿದ್ದರು…

ಭಾರತದಲ್ಲಿ 1954ರಿಂದ 1985ರವರೆಗೂ ಎಸ್ಟೇಟ್ ಡ್ಯೂಟಿ ಅಥವಾ ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಯಲ್ಲಿತ್ತು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಮತ್ತು ವಿಪಿ ಸಿಂಗ್ ಹಣಕಾಸು ಸಚಿವರಾಗಿದ್ದಾಗ ಈ ತೆರಿಗೆಯನ್ನು ರದ್ದು ಮಾಡಲಾಗಿತ್ತು. ಹಿರಿಯ ವಕೀಲ ಆರ್ಯಮ ಸುಂದರಂ ಹೇಳುವ ಪ್ರಕಾರ ಎಸ್ಟೇಟ್ ಡ್ಯೂಟಿ ಜಾರಿಯಲ್ಲಿದ್ದಾಗ ಜನರು ತಮ್ಮ ಆಸ್ತಿಯನ್ನು ಬ್ಯಾಂಕ್ ಖಾತೆಯಲ್ಲಿ ಇರಿಸುವ ಬದಲು ಹಾಸಿಗೆಯೊಳಗೆ ಬಚ್ಚಿಡುತ್ತಿದ್ದರು. ಬ್ಯಾಂಕ್ ಖಾತೆಯಲ್ಲಿದ್ದರೆ ಸರ್ಕಾರಕ್ಕೆ ಒಂದಷ್ಟು ಭಾಗ ಹೊರಟುಹೋಗುತ್ತದೆ ಎಂಬ ಭಯ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ ಆಟಿಕೆ ಉದ್ಯಮ; ಶೇ. 70ರಷ್ಟು ತಪ್ಪಿದೆ ಚೀನೀ ಬೊಂಬೆ ಆಮದು

‘ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ ತೆರಿಗೆ ಹೆಚ್ಚಾದರೂ ಅಲ್ಲಿ ಶಿಕ್ಷಣ, ವಿದ್ಯುತ್, ಆರೋಗ್ಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಭಾರತದಲ್ಲಿ ಹಾಗಿಲ್ಲ. ಇಲ್ಲಿ ನೀವು ತೆರಿಗೆ ಕಟ್ಟುತ್ತೀರಿಯೇ ಹೊರತು ಬದಲಾಗಿ ಏನೂ ಸಿಗುವುದಿಲ್ಲ…. ನಾನು ಎಸ್ಟೇಟ್ ಡ್ಯೂಟಿಯನ್ನು ಪೂರ್ಣವಾಗಿ ವಿರೋಧಿಸುತ್ತೇನೆ. ಸಾಮಾಜಿಕ ಆರ್ಥಿಕ ನೆಲೆಗಟ್ಟಿನಲ್ಲಿ ನೋಡಿದರೆ ಭಾರತಕ್ಕೆ ಈ ತೆರಿಗೆ ಪದ್ಧತಿ ಸರಿಯಾದುದಲ್ಲ ಎನಿಸುತ್ತದೆ,’ ಎಂದು ಸುಂದರಂ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಭಾರತಕ್ಕೆ ಆಗಮಿಸಿದ ದುಬೈ ಪ್ರಿನ್ಸ್ ಶೇಖ್ ಹಮ್ದಾನ್​ಗೆ ಚಂಡೆ ವಾದ್ಯದ ಸ್ವಾಗತ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮಗಳ ಸಾಧನೆ ಕಂಡು ಮೂಕವಿಸ್ಮಿತನಾದ ತಂದೆಗೆ ಕಾಲೇಜು ಸಿಬ್ಬಂದಿಯಿಂದ ಸನ್ಮಾನ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ಮುಂದಿನ ಹೋರಾಟ ಹೇಗೆ ಅಂತ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಅಶೋಕ
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ