ಭಾರತೀಯನಾಗದಿದ್ದರೆ ಅಮೆರಿಕದಲ್ಲಿ ಸಿಇಒ ಆಗೋಕ್ಕಾಗಲ್ಲ: ಬದಲಾದ ವಾಸ್ತವ ಬಿಚ್ಚಿಟ್ಟಿದ್ದಾರೆ ಅಮೆರಿಕದ ರಾಯಭಾರಿ

'Can’t Become CEO In US If You Are Not Indian' - ನೀನು ಭಾರತೀಯನಾಗಿದ್ದರೆ ಅಮೆರಿಕದಲ್ಲಿ ಸಿಇಒ ಆಗೋಕ್ಕಾಗಲ್ಲ ಎಂದು ತಮಾಷೆ ಮಾಡುತ್ತಿದ್ದ ಕಾಲವೊಂದಿತ್ತು. ಈಗ ಭಾರತೀಯ ಮೂಲದವನಾಗಿರದಿದ್ದರೆ ಅಮೆರಿಕದಲ್ಲಿ ಸಿಇಒ ಆಗಲು ಆಗಲ್ಲ ಎಂದು ಜೋಕ್ ಬದಲಾಗಿದೆ. ಹೀಗೆಂದು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಕೆಟ್ಟಿ ಹೇಳಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಟ್ಯಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ನಡೆದ ಭಾರತೀಯ ಸಮುದಾಯದವರ ಎಐ ಶೃಂಗಸಭೆಯಲ್ಲಿ ಮಾತನಾಡುತ್ತಾ ಅವರು ಭಾರತೀಯರ ಸಾಧನೆಗಳನ್ನು ಪ್ರಶಂಸಿಸಿದ್ದಾರೆ.

ಭಾರತೀಯನಾಗದಿದ್ದರೆ ಅಮೆರಿಕದಲ್ಲಿ ಸಿಇಒ ಆಗೋಕ್ಕಾಗಲ್ಲ: ಬದಲಾದ ವಾಸ್ತವ ಬಿಚ್ಚಿಟ್ಟಿದ್ದಾರೆ ಅಮೆರಿಕದ ರಾಯಭಾರಿ
ಎರಿಕ್ ಗಾರ್ಕೆಟ್ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2024 | 1:15 PM

ಕ್ಯಾಲಿಫೋರ್ನಿಯಾ, ಏಪ್ರಿಲ್ 28: ಅಮೆರಿಕದಲ್ಲಿ ಸಿಇಒ ಆಗಬೇಕಾದರೆ ಭಾರತೀಯ ಮೂಲದ ವ್ಯಕ್ತಿ ಆಗಿರಬೇಕು ಎನ್ನುವಂತಹ ಸ್ಥಿತಿ ಇದೆ ಎಂದು ಎರಿಕ್ ಗಾರ್ಕೆಟ್ಟಿ (Eric Garcetti) ಹೇಳಿದ್ದಾರೆ. ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಅವರು ಇಲ್ಲಿಯ ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ನಡೆದ ಭಾರತೀಯ ಸಮುದಾಯದವರ ಎಐ ಸಮಿಟ್ 2024 (Indiaspora AI Summit 2024) ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಆದರೆ ತಮಾಷೆಯಾಗಿ ಅವರು ಈ ಮಾತುಗಳನ್ನು ಹೇಳಿದ್ದಾರಾದರೂ ಅಮೆರಿಕದ ಬಹಳಷ್ಟು ಟೆಕ್ ಕಂಪನಿಗಳ ಅತ್ಯುನ್ನತ ಹುದ್ದೆಯನ್ನು ಭಾರತೀಯರೇ ಅಲಂಕರಿಸಿರುವುದು ವಾಸ್ತವ ಸಂಗತಿ.

ಅಮೆರಿಕದ ಪ್ರಮುಖ ಕಂಪನಿಗಳನ್ನು ಪರಿಗಣಿಸಿದಾದ ಶೇ. 10ರಷ್ಟು ಕಂಪನಿಗಳಿಗೆ ಭಾರತೀಯ ಮೂಲದವರೇ ಸಿಇಒ ಆಗಿದ್ದಾರೆ. ಗೂಗಲ್​ನ ಸುಂದರ್ ಪಿಚೈ, ಮೈಕ್ರೋಸಾಫ್ಟ್​ನ ಸತ್ಯ ನಾದೆಲ್ಲಾ, ಅಡೋಬ್​ನ ಶಾಂತನು ನಾರಾಯಣನ್ ಮೊದಲಾದವರು ನಿದರ್ಶನವಾಗಿದ್ದಾರೆ. ಹೀಗಾಗಿ, ಅಮೆರಿಕ ರಾಯಭಾರಿ ಹೇಳಿದ್ದರಲ್ಲಿ ಅತಿಶಯೋಕ್ತಿಯಂತೂ ಇಲ್ಲ.

ಇದನ್ನೂ ಓದಿ: ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ ಆಟಿಕೆ ಉದ್ಯಮ; ಶೇ. 70ರಷ್ಟು ತಪ್ಪಿದೆ ಚೀನೀ ಬೊಂಬೆ ಆಮದು

‘ಫಾರ್ಚೂನ್ 500 ಕಂಪನಿಗಳಲ್ಲಿನ ಪ್ರತೀ 10 ಸಿಇಒಗಳಲ್ಲಿ ಒಬ್ಬರು ಅಮೆರಿಕದಲ್ಲಿ ಓದಿದ ಭಾರತೀಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನೀವು ಭಾರತೀಯರಾಗಿದ್ದರೆ ಅಮೆರಿಕದಲ್ಲಿ ಸಿಇಒ ಆಗುವುದಕ್ಕೆ ಆಗೊಲ್ಲ ಎಂದು ತಮಾಷೆ ಮಾಡುತ್ತಿದ್ದ ಕಾಲವೊಂದಿತ್ತು. ಈಗ ನೀವು ಭಾರತೀಯನಾಗದೇ ಹೋದರೆ ಅಮೆರಿಕದಲ್ಲಿ ಸಿಇಒ ಆಗಲು ಸಾಧ್ಯ ಇಲ್ಲ ಎಂದು ಹೇಳಲಾಗುತ್ತದೆ. ಗೂಗಲ್ ಆಗಲಿ, ಮೈಕ್ರೋಸಾಫ್ಟ್ ಆಗಲಿ, ಅಥವಾ ಸ್ಟಾರ್​ಬಕ್ಸ್ ಆಗಲಿ ಭಾರತೀಯರು ಸಿಇಒ ಆಗಿ ಬಹಳ ದೊಡ್ಡ ಬದಲಾವಣೆ ಮಾಡಿದ್ದಾರೆ’ ಎಂದು ಎರಿಕ್ ಗಾರ್ಕೆಟ್ಟಿ ಹೇಳಿದ್ದಾರೆ.

ಬದಲಾದ ಭಾರತ: ಮೋದಿಗೆ ಕ್ರೆಡಿಟ್ ಕೊಟ್ಟ ಭಾರತೀಯ ಉದ್ಯಮಿಗಳು

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತ ಮೂಲದ ಉದ್ಯಮಿಗಳು ಭಾರತದಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸಿ, ಪ್ರಧಾನಿ ನರೇಂದ್ರ ಮೋದಿಗೆ ಅದರ ಶ್ರೇಯ ನೀಡಿದ್ದಾರೆ.

ಇದನ್ನೂ ಓದಿ: ಇಟಲಿ ಪ್ರಧಾನಿಗೆ ಕರೆ ಮಾಡಿ ವಿಮೋಚನಾ ದಿನಾಚರಣೆಯ ಶುಭಾಯಶಯ ತಿಳಿಸಿದ ಮೋದಿ

‘ಜಾಗತಿಕ ಉದ್ದಿಮೆ ವಲಯದಲ್ಲಿ ಭಾರತದ ಬಗೆಗಿನ ದೃಷ್ಟಿಕೋನ ಈಗ ಬದಲಾಗಿದೆ. ಈಗ ಭಾರತವು ಇನ್ನೋವೇಶನ್​ನ ಸ್ಥಳವಾಗಿದೆ. ಮಾನವ ಸಂಪನ್ಮೂಲದ ಅಡ್ಡೆಯಾಗಿದೆ. ಪ್ರಗತಿ ಮತ್ತು ಇನೋವೇಶನ್ ಆಗುತ್ತಿರುವ ಪ್ರದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾವೀನ್ಯತೆಯಲ್ಲಿ ಭಾರತವನ್ನು ಜಾಗತಿಕ ನಕ್ಷೆಗೆ ಹಾಕಲು ಸಫಲರಾಗಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಿ ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ,’ ಎಂದು ಇನ್ಫಾರ್ಮಾಟಿಕಾ ಸಿಇಒ ಅಮಿತ್ ವಾಲಿಯಾ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ