Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ ಆಟಿಕೆ ಉದ್ಯಮ; ಶೇ. 70ರಷ್ಟು ತಪ್ಪಿದೆ ಚೀನೀ ಬೊಂಬೆ ಆಮದು

Chinese toy imports come down by 70% in India: ಭಾರತದ ಆಟಿಕೆ ಉದ್ಯಮ ಇತ್ತೀಚಿನ ಕೆಲ ವರ್ಷಗಳಿಂದ ಗಣನೀಯವಾಗಿ ಬೆಳೆಯುತ್ತಿದೆ. ಶೇ. 90ಕ್ಕಿಂತಲೂ ಹೆಚ್ಚು ಆಟಿಕೆಗಳು ಚೀನಾದಿಂದ ಆಮದು ಆಗುತ್ತಿದ್ದ ಕಾಲವೊಂದಿತ್ತು. ಇದೀಗ ಶೇ. 70ರಷ್ಟು ಚೀನೀ ಆಟಿಕೆಗಳ ಆಮದು ಕಡಿಮೆ ಆಗಿದೆ. ಭಾರತೀಯ ಆಟಿಕೆ ಉದ್ಯಮ ದಿನೇ ದಿನೇ ಪ್ರಬಲಗೊಳ್ಳುತ್ತಿದೆ. ಭಾರತ ವಿಶ್ವದ ಆಟಿಕೆ ತಯಾರಿಕೆಯ ಅಡ್ಡೆಯಾಗಬೇಕೆಂಬ ಗುರಿ ನಿರೀಕ್ಷಿತ ರೀತಿಯಲ್ಲಿ ಸಾಕಾರಗೊಳ್ಳುವಂತೆ ತೋರುತ್ತಿದೆ. ಸದ್ಯ ಭಾರತದಲ್ಲಿ 60ಕ್ಕೂ ಹೆಚ್ಚು ಟಾಯ್ ಕ್ಲಸ್ಟರ್​ಗಳ ನಿರ್ಮಾಣವಾಗುತ್ತಿದೆ.

ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ ಆಟಿಕೆ ಉದ್ಯಮ; ಶೇ. 70ರಷ್ಟು ತಪ್ಪಿದೆ ಚೀನೀ ಬೊಂಬೆ ಆಮದು
ಆಟಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2024 | 11:08 AM

ಬೆಂಗಳೂರು, ಏಪ್ರಿಲ್ 28: ಕಳೆದ ಕೆಲ ವರ್ಷಗಳ ಹಿಂದಿನವರೆಗೂ ಭಾರತದಲ್ಲಿ ಸಿಗುತ್ತಿದ್ದ ಬಹುತೇಕ ಆಟಿಕೆಗಳು ಅಥವಾ ಬೊಂಬೆಗಳು ಚೀನಾದಿಂದ ಆಮದು ಮಾಡಿಕೊಂಡವಾಗಿದ್ದವು. ಇತ್ತೀಚೆಗೆ ಆಟಿಕೆ ತಯಾರಿಕೆ ಉದ್ಯಮದಲ್ಲಿ (toy manufacturing) ಭಾರತ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ಆಟಿಕೆಗಳ ಪ್ರಮಾಣ ಶೇ. 70ರಷ್ಟು ಕಡಿಮೆ ಆಗಿದೆ ಎಂದು ಒಪಿ ಇಂಡಿಯಾ ವೆಬ್​ಸೈಟ್​ನ ವರದಿಯೊಂದು ಹೇಳಿದೆ. ಭಾರತದಲ್ಲಿ ಟಾಯ್ ಕ್ಲಸ್ಟರ್​ಗಳ ನಿರ್ಮಾಣದಿಂದ ಹಿಡಿದು, ಆಮದು ಸುಂಕ ಇತ್ಯಾದಿ ಕ್ರಮಗಳವರೆಗೆ ಕೇಂದ್ರ ಸರ್ಕಾರದ ವಿವಿಧ ನೀತಿಗಳು ಭಾರತದಲ್ಲಿ ಆಟಿಕೆ ಉದ್ಯಮ ಹುಲುಸಾಗಿ ಬೆಳೆಯಲು ಕಾರಣವಾಗಿವೆ. ಭಾರತದಲ್ಲಿ ಆಟಿಕೆಗಳಿಗೆ ಇರುವ ಆಂತರಿಕ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ಈಗ ವಿದೇಶಗಳಿಗೆ ರಫ್ತು ಮಾಡುವ ಹಂತಕ್ಕೂ ಈ ಉದ್ಯಮ ಸಜ್ಜಾಗಿದೆ. ಈಗಾಗಲೇ ಅಲ್ಪ ಪ್ರಮಾಣದಲ್ಲಿ ಮಧ್ಯಪ್ರಾಚ್ಯ ಹಾಗೂ ಆಫ್ರಿಕನ್ ದೇಶಗಳಿಗೆ ಆಟಿಕೆಗಳನ್ನು ಭಾರತ ರಫ್ತು ಮಾಡುತ್ತಿರುವುದು ಗೊತ್ತಾಗಿದೆ.

ಚೀನಾದ ಆಟಿಕೆಗಳ ಮೇಲೆ ಸರ್ಕಾರ ಆಮದು ಸುಂಕ ಹೇರಿದೆ. ಇದರಿಂದ ಬಹಳ ಅಗ್ಗದ ದರದಲ್ಲಿ ಪ್ರವಾಹೋಪಾದಿಯಲ್ಲಿ ಆಟಿಕೆಗಳು ಭಾರತಕ್ಕೆ ಹರಿದುಬರುವುದು ಕಡಿಮೆ ಆಗಿದೆ. ಇದು ಭಾರತೀಯ ಆಟಿಕೆ ತಯಾರಕರಿಗೆ ಹೆಚ್ಚಿನ ಅವಕಾಶ ಸಿಗಲು ಅವಕಾಶ ಕೊಟ್ಟಿದೆ. ಆಡಳಿತಾರೂಢ ಬಿಜೆಪಿ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆಟಿಕೆ ತಯಾರಿಕೆಯಲ್ಲಿ ದೇಶವನ್ನು ಗ್ಲೋಬಲ್ ಹಬ್ ಆಗಿ ಮಾಡುತ್ತೇವೆ ಎಂದು ಹೇಳಿಕೊಂಡಿದೆ. ಈ ಹಂತಕ್ಕೆ ಏರಲು ಭಾರತದಲ್ಲಿ ಆಟಿಕೆ ಉದ್ಯಮ ಅಣಿಗೊಂಡಿದೆ ಎಂಬುದು ಈ ಕ್ಷೇತ್ರದ ಪರಿಣಿತರ ಅನಿಸಿಕೆ.

ಇದನ್ನೂ ಓದಿ: ಗೋಫಸ್ಟ್ ಗಾಯದ ಮೇಲೆ ಬರೆ; ಎಲ್ಲಾ 54 ವಿಮಾನಗಳನ್ನು ಮರಳಿಸಲು ದೆಹಲಿ ಹೈಕೋರ್ಟ್ ಆದೇಶ

ಭಾರತದಾದ್ಯಂತ 60ಕ್ಕೂ ಹೆಚ್ಚು ಆಟಿಕೆ ಕ್ಲಸ್ಟರ್​ಗಳನ್ನು ಸ್ಥಾಪಿಸಲಾಗಿದೆ. ಕೊಪ್ಪಳದಲ್ಲಿ ಏಕಸ್ ಎಂಬ ದೈತ್ಯ ಕಂಪನಿ 400 ಎಕರೆಯಷ್ಟು ಬೃಹತ್ ಜಾಗದಲ್ಲಿ ಟಾಯ್ ಕ್ಲಸ್ಟರ್ ನಿರ್ಮಿಸಿದೆ. ಉತ್ತರಪ್ರದೇಶದಲ್ಲಿ 100 ಎಕರೆ ಜಾಗದಲ್ಲಿ ಕ್ಲಸ್ಟರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ವಿವಿಧ ರಾಜ್ಯಗಳು ಆಟಿಕೆ ತಯಾರಕರಿಗೆ ಸಬ್ಸಿಡಿ ಇತ್ಯಾದಿ ನೀಡಿ ಉತ್ತೇಜಿಸುತ್ತಿದೆ.

ಏಸ್ ಟರ್ಟಲ್ ಎಂಬ ಆಟಿಕೆ ತಯಾರಿಕೆ ಕಂಪನಿಯ ಸಿಇಒ ನಿತಿ ಛಬ್ರ ಅವರ ಪ್ರಕಾರ ಭಾರತದ ಆಂತರಿಕ ಆಟಿಕೆ ಬೇಡಿಕೆ ಪೂರೈಸುವಷ್ಟು ಸಾಮರ್ಥ್ಯವನ್ನು ಸ್ಥಳೀಯ ಉದ್ಯಮ ಗಳಿಸಬೇಕಾದರೆ ಎರಡು ವರ್ಷ ಬೇಕಾಗಬಹುದು.

ಇದನ್ನೂ ಓದಿ: ಕೇರಳದ ವಿಳಿಂಜಮ್ ಪೋರ್ಟ್; ಭಾರತದ ಮೊದಲ ಟ್ರಾನ್ಸ್​ಶಿಪ್ಮೆಂಟ್ ಬಂದರು ಕಾರ್ಯಾಚರಣೆಗೆ ಒಪ್ಪಿಗೆ ಪಡೆದ ಅದಾನಿ ಗ್ರೂಪ್

ಹೊಸ ಆಟಿಕೆ ಸ್ಟಾರ್ಟಪ್ ಆದ ಜಾಂಬೋ ಎಂಬ ಕಂಪನಿಯ ಸಹ-ಸಂಸ್ಥಾಪಕ ವಿಪಿನ್ ನಿಝವಾನ್ ಅವರು ಭಾರತದ ಆಟಿಕೆ ಉದ್ದಿಮೆ ಬಗ್ಗೆ ಆಶಾದಾಯಕವಾಗಿದ್ದಾರೆ. 2030ರಷ್ಟರಲ್ಲಿ ಭಾರತವನ್ನು ವಿಶ್ವದ ಆಟಿಕೆ ರಾಜಧಾನಿಯನ್ನಾಗಿ ಮಾಡಬೇಕು. ಬೆಲೆಯಲ್ಲಿ ಮತ್ತು ಗುಣಮಟ್ಟದಲ್ಲಿ ಚೀನಾವನ್ನು ಸರಿಗಟ್ಟಿ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಮುಂಚೂಣಿಗೆ ಬರಲು ಸಮರ್ಥವನ್ನಾಗಿ ಮಾಡುವುದು ತಮ್ಮ ಗುರಿ ಎಂದು ವಿಪಿನ್ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್